*ಜನಸ್ಪಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆ….!
ಮಧುಗಿರಿ ತಾಲೂಕು ಐ.ಡಿ.ಹಳ್ಳಿ ಹೋಬಳಿ ಮಟ್ಟದ ಐಡಿ ಹಳ್ಳಿ ಗ್ರಾಮದಲ್ಲಿ ದಿನಾಂಕ 23.08.2022 ರಂದು ಸರ್ಕಾರದ ಆದೇಶದಂತೆ ಹಾಗೂ ಸಹಕಾರ ಸಚಿವರಾದ ಕೆ .ಎನ್. ರಾಜಣ್ಣನವರ ಆದೇಶದಂತೆ ಜನಸ್ಪಂದನಾ ಕಾರ್ಯಕ್ರಮ ನಡೆಸಲಾಗುವುದು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಎಸ್. ಲಕ್ಷ್ಮಣ್ ರವರುತಿಳಿಸಿದ್ದಾರೆ.
ಜನಸ್ಪಂದನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಐ.ಡಿ.ಹಳ್ಳಿ ಹೋಬಳಿಯ ದೊಡ್ಡ ಯ ಲ್ಕೂರುಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಭೆಯನ್ನು ಮಾಡಿ ಸಾರ್ವಜನಿಕ ಕುಂದು ಕೊರತೆಗಳು ಏನಾದರೂ ಇದ್ದಲ್ಲಿ ಅರ್ಜಿಗಳನ್ನು ನೀಡಿದ್ದಲ್ಲಿ ಅವುಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದರು. ಅದೇ ರೀತಿಯಾಗಿ ಐ ಡಿ ಹಳ್ಳಿ ಗ್ರಾಮಪಂಚಾಯತಿಯಲ್ಲೂ ಕೂಡ ಸಭೆಯನ್ನು ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮತ್ತು ತೊಂದರೆಯಾಗದಂತೆ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕೆಂದು ಹೇಳಿದರು ಹಾಗೆಯೇ ಚಿಕ್ಕದಾಳವಟ್ಟ ಗ್ರಾಮ ಪಂಚಾಯಿತಿ ಹಾಗೂ ಗರಣಿ ಗ್ರಾಮ ಪಂಚಾಯಿತಿಗಳಲ್ಲಿಯೂ ಸಹ ಜನಸ್ಪಂದನಾ ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಮಾತನಾಡಿ ಸಾರ್ವಜನಿಕರಿಂದ ಬಂದಿರುವಂತಹ ಅರ್ಜಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಅಲ್ಲಿಯ ಸೂಚನೆಯನ್ನು ನೀಡಿ ಆದಷ್ಟು ಬೇಗನೆ ಇವುಗಳನ್ನು ಇತ್ಯರ್ಥ ಪಡಿಸಬೇಕೆಂದರು. ಮತ್ತು ನಮ್ಮಿಂದ ಸಮಸ್ಯೆಯನ್ನು ಬಗೆಹರಿಸಲು ಆಗದಿದ್ದಲ್ಲಿ ಸಹಕಾರಿ ಸಚಿವರಾದ ಕೆ. ಎನ್. ರಾಜಣ್ಣನವರ ಗಮನಕ್ಕೆ ತಂದು ಅಂತಹ ಸಮಸ್ಯೆಗಳನ್ನು ಕೂಡ ಬಗೆಹರಿಸಿಕೊಡುತ್ತೇವೆ ಎಂದು ಸಭೆಯಲ್ಲಿ ಭರವಸೆ ನೀಡಿದರು.
ಪೂರ್ವ ಭಾವಿ ಸಭೆಯಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಎಸ್. ಲಕ್ಷ್ಮಣ್ ಸಮಾಜ ಕಲ್ಯಾಣ ಅಧಿಕಾರಿಗಳಾದ ಶಿವಣ್ಣ. ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಆದ ಲೋಕೇಶ್ವರ್. ಬೆಸ್ಕಾಂ ಇಲಾಖೆ ಸಹಾಯಕ ಕಾರ್ಯ ಪಾಲಕಇಂಜಿನಿಯರ್ ಮಾಯಕ್ಕಣ್ಣನಾಯಕ್. ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಮಂಜುನಾಥ್. ಆರೋಗ್ಯ ಆಡಳಿತ ಅಧಿಕಾರಿ ರಮೇಶ್ ಬಾಬು ವಲಯ ಅರಣ್ಯ ಇಲಾಖೆಯ ಅಧಿಕಾರಿ ತಿಪ್ಪೇಸ್ವಾಮಿ. ಕಂದಾಯ ಇಲಾಖೆಯ ಕಂದಾಯ ತನಿಖೆ ಅಧಿಕಾರಿ ಚಿಕ್ಕರಾಜು. ಕೃಷಿ ಇಲಾಖೆ ಅಧಿಕಾರಿ ಮದನ್ ಕುಮಾರ್. ಪಶು ಸಂಗೋಪನ ಇಲಾಖೆ ಅಧಿಕಾರಿ ಸಿದ್ದನಗೌಡ. ತೋಟಗಾರಿಕಾ ಇಲಾಖೆ ಅಧಿಕಾರಿ ಚಿಂತನ್ .ರೇಷ್ಮೆ ಇಲಾಖೆ ಅಧಿಕಾರಿ ಮತ್ತು ಶಿಕ್ಷಣ ಇಲಾಖೆಯ ಕ್ಲಸ್ಟರ್ನ ಸಂಪನ್ಮೂಲ ವ್ಯಕ್ತಿಯಾದ ಜಗದೀಶ್. ಸರ್ವೆ ಇಲಾಖೆ ಅಧಿಕಾರಿ ಯಾದ ಶಿವಕುಮಾರ್. ಗ್ರಾಮ ಪಂಚಾಯಿತಿ ಪಿ .ಡಿ .ಓ .ಗಳಾದ. ಬಿ.ಎಸ್ .ರಂಗನಾಥ್ ನವೀನ್ ಕುಮಾರ್. ಎ.ಪಿ ಪ್ರಕಾಶ್. ಶಿವಾನಂದಪ್ಪ. ಬೋರಣ್ಣ. ಕಾರ್ಯದರ್ಶಿ ಪ್ರದೀಪ್. ಗ್ರಾಮ ಲೆಕ್ಕಾಧಿಕಾರಿಗಳಾದ ರವಿಕುಮಾರ್ ಸಿ. ಜಗದೀಶ್. ತನುಜ. ಕಿರಣ್ ಕುಮಾರ. ಬೆಸ್ಕಾಂ ಇಲಾಖೆಯ ಶಾಖಾಧಿಕಾರಿಯ ವೀರೇಂದ್ರ . ಇಂಜಿನಿಯರ್ ಆದ ಫಿರೋಜ್.
ಐ.ಡಿ.ಹಳ್ಳಿ .ಹೋಬಳಿಯ ಎಲ್ಲಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳು ಉಪಾಧ್ಯಕ್ಷರುಗಳು ಸದಸ್ಯರುಗಳು ಹಾಗೂ ಮುಖಂಡರಾದ ಸುಬ್ರಾಯಪ್ಪ ಪತ್ರಕರ್ತರಾದ ಲಕ್ಷ್ಮಿಪತಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ. ಲಕ್ಷ್ಮಿಪತಿ ದೊಡ್ಡ ಯ ಲ್ಕೂರ್.