ಸತ್ಯದ ಮೇಲೆ ಅಪಪ್ರಚಾರದ ದಾಳಿ: ಆಪರೇಷನ್ ಸಿಂಧೂರ್ ಗೆ ಅಪಪ್ರಚಾರದ ಮೂಲಕ ಪಾಕಿಸ್ತಾನದ ಪ್ರತಿಕ್ರಿಯೆ
ನವದೆಹಲಿ : ‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ಭಾರತದ ನಿರ್ಣಾಯಕ ದಾಳಿಯ ನಂತರ, ಪಾಕಿಸ್ತಾನವು ಪೂರ್ಣ ಪ್ರಮಾಣದ ತಪ್ಪು ಮಾಹಿತಿಯ ದಾಳಿಯನ್ನು ಪ್ರಾರಂಭಿಸಿದೆ – ಸುಳ್ಳುಗಳು ಮತ್ತು ಡಿಜಿಟಲ್ ಸೃಷ್ಟಿಗಳ ಸುರಿಮಳೆಯೊಂದಿಗೆ ಗಮನವನ್ನು ಬೇರೆಡೆಗೆ ತಿರುಗಿಸಲು ಮತ್ತು ನಿರೂಪಣೆಯನ್ನು ನಿಯಂತ್ರಿಸಲು ಹತಾಶ ಪ್ರಯತ್ನ ನಡೆಸಿದೆ.
ಭಾರತೀಯ ಸಶಸ್ತ್ರ ಪಡೆಗಳ ಕೇಂದ್ರೀಕೃತ ಮತ್ತು ಪರಿಣಾಮಕಾರಿ ಸೇನಾ ಕಾರ್ಯಾಚರಣೆಯಾಗಿ ಪ್ರಾರಂಭವಾದದ್ದು ಈಗ ಗೊಂದಲಮಯ ಆನ್‌ಲೈನ್ ಅಪಪ್ರಚಾರ ಯುದ್ಧವಾಗಿ ಮಾರ್ಪಟ್ಟಿದೆ. ಪಾಕಿಸ್ತಾನ ಪರ ಸಾಮಾಜಿಕ ಮಾಧ್ಯಮಗಳು ಮತ್ತು ಪ್ರಭಾವಿ ರಾಜಕೀಯ ವ್ಯಕ್ತಿಗಳು ಸಹ ಉದ್ದೇಶಪೂರ್ವಕವಾಗಿ ನಕಲಿ ಸುದ್ದಿಗಳನ್ನು ಹರಡುತ್ತಿದ್ದಾರೆ, ಘಟಿಸದೇ ಇರುವ ಪವಾಡ ಸದೃಶ ಮಿಲಿಟರಿ ವಿಜಯಗಳು ಮತ್ತು ವೀರೋಚಿತ ಪ್ರತೀಕಾರದ ಕಥೆಗಳನ್ನು ಸೃಷ್ಟಿಸುತ್ತಿದ್ದಾರೆ.
ನಿರೂಪಣೆಯನ್ನು ಬದಲಾಯಿಸಲು ಮತ್ತು ನೆಲದ ಮೇಲಿನ ವಾಸ್ತವದಿಂದ ಗಮನವನ್ನು ಬೇರೆಡೆಗೆ ಸೆಳೆಯಲು, ಪಾಕಿಸ್ತಾನದ ಸರ್ಕಾರಿ ಖಾತೆಗಳು ಹಳೆಯ ಛಾಯಾಚಿತ್ರಗಳನ್ನು ಮರುಬಳಕೆ ಮಾಡುವುದು, ಹಳೆಯ ವೀಡಿಯೊಗಳನ್ನು ತಪ್ಪಾಗಿ ಬಳಸುವುದು ಮತ್ತು ಸಂಪೂರ್ಣವಾಗಿ ಕಟ್ಟುಕಥೆಗಳನ್ನು ಸೃಷ್ಟಿಸುವುದು ಮುಂತಾದ ತಮ್ಮ ಪರಿಚಿತ ತಂತ್ರಗಳನ್ನು ಆಶ್ರಯಿಸಿವೆ. ಅವರ ಗುರಿ ಸ್ಪಷ್ಟವಾಗಿದೆ – ಸತ್ಯವನ್ನು ಮಿಥ್ಯೆಯಿಂದ ಬೇರ್ಪಡಿಸುವುದು ಕಷ್ಟವಾಗುವಂತೆ ಮಾಹಿತಿ ಜಾಗವನ್ನು ತ್ವರಿತವಾಗಿ ಮತ್ತು ಅಗಾಧವಾಗಿ ಸುಳ್ಳುಗಳಿಂದ ತುಂಬಿಸುವುದು. ಇದು ಕೇವಲ ತಪ್ಪು ಮಾಹಿತಿಯಲ್ಲ; ಇದು ವಾಸ್ತವವನ್ನು ವಿರೂಪಗೊಳಿಸಲು, ಸಾರ್ವಜನಿಕರನ್ನು ದಾರಿತಪ್ಪಿಸಲು ಮತ್ತು ಪ್ರದೇಶದಾದ್ಯಂತ ಗ್ರಹಿಕೆಗಳನ್ನು ಪ್ರಭಾವಿಸಲು ವಿನ್ಯಾಸಗೊಳಿಸಲಾದ ಯೋಜಿತ, ಸಂಘಟಿತ ಅಭಿಯಾನವಾಗಿದೆ.
ಹಳೆಯ ಚಿತ್ರಗಳು ಮತ್ತು ದಾರಿತಪ್ಪಿಸುವ ಹೇಳಿಕೆಗಳು ವೈರಲ್ ಆಗಿವೆ
ಬಹಾವಲ್ಪುರ ಬಳಿ ಪಾಕಿಸ್ತಾನ ಸೇನೆಯು ಭಾರತೀಯ ರಫೇಲ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ ಎಂದು ತಪ್ಪಾಗಿ ಹೇಳಿಕೊಳ್ಳುವ ವೈರಲ್ ಚಿತ್ರವು ಇದಕ್ಕೊಂದು ಪ್ರಮುಖ ಉದಾಹರಣೆಯಾಗಿದೆ. ಆದಾಗ್ಯೂ, ಈ ಚಿತ್ರವನ್ನು ಪಿಐಬಿ ಫ್ಯಾಕ್ಟ್ ಚೆಕ್ ತಳ್ಳಿಹಾಕಿದೆ, ಇದು ವಾಸ್ತವವಾಗಿ 2021 ರಲ್ಲಿ ಪಂಜಾಬಿನ ಮೋಗಾದಲ್ಲಿ ನಡೆದ ಮಿಗ್ -21 ಅಪಘಾತದ ಚಿತ್ರ ಎಂದು ದೃಢಪಡಿಸಿದೆ – ಇದು ಸಂಪೂರ್ಣವಾಗಿ ಪ್ರಸ್ತುತ ಘಟನೆಗಳಿಗೆ ಸಂಬಂಧಿಸಿಲ್ಲ.
https://x.com/PIBFactCheck/status/1920025620655874361
ಭಾರತೀಯ ಸೇನೆಯು ಚೋರಾ ಪೋಸ್ಟ್ ನಲ್ಲಿ ಬಿಳಿ ಧ್ವಜವನ್ನು ಹಾರಿಸಿ ಶರಣಾಯಿತು ಎಂದು ಸುಳ್ಳು ಹೇಳುವ ವೀಡಿಯೊ ರೂಪದ ಮತ್ತೊಂದು ಲಜ್ಜೆಗೆಟ್ಟ ತಪ್ಪು ಮಾಹಿತಿಯು ಹೊರಬಂದಿದೆ. ಈ ಕಟ್ಟುಕಥೆಯನ್ನು ಪಾಕಿಸ್ತಾನದ ಸಚಿವ ಅತಾವುಲ್ಲಾ ತರಾರ್ ಅವರು ಯಾವುದೇ ಪುರಾವೆಗಳಿಲ್ಲದೆ ಸಾರ್ವಜನಿಕವಾಗಿ ಪುಷ್ಟೀಕರಿಸಿದ್ದಾರೆ. ಪರಿಶೀಲಿಸದ ಮತ್ತು ಸ್ಪಷ್ಟವಾಗಿ ಸುಳ್ಳು ಕಥೆಗೆ ಅಧಿಕೃತತೆಯನ್ನು ನೀಡುವ ಮೂಲಕ, ತರಾರ್ ತಮ್ಮದೇ ನಾಗರಿಕರನ್ನು ದಾರಿ ತಪ್ಪಿಸಿದ್ದಲ್ಲದೆ, ಅಪಪ್ರಚಾರ ಅಭಿಯಾನಕ್ಕೆ ಸಕ್ರಿಯವಾಗಿ ಕೊಡುಗೆ ನೀಡಿದ್ದಾರೆ.
ಸಂಬಂಧವಿಲ್ಲದ ದೃಶ್ಯಗಳನ್ನು ಯುದ್ಧ ಸಾಕ್ಷಿಯಾಗಿ ಪ್ರಸ್ತುತಪಡಿಸಲಾಗಿದೆ
ಮತ್ತೊಂದು ದಾರಿತಪ್ಪಿಸುವ ಪೋಸ್ಟ್ ನಲ್ಲಿ, ಪಾಕಿಸ್ತಾನ ವಾಯುಪಡೆಯು ಶ್ರೀನಗರ ವಾಯುನೆಲೆಯ ಮೇಲೆ ದಾಳಿ ಮಾಡಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಪ್ರಸಾರ ಮಾಡಲಾಗಿದೆ. ವಾಸ್ತವದಲ್ಲಿ, ಈ ದೃಶ್ಯಾವಳಿಯು 2024 ರ ಆರಂಭದಲ್ಲಿ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದಲ್ಲಿ ಸಂಭವಿಸಿದ ಜನಾಂಗೀಯ ಘರ್ಷಣೆಗಳಿಗೆ ಸಂಬಂಧಿಸಿದ್ದು. ಆ ವಿಡಿಯೋಗೂ ಕಾಶ್ಮೀರಕ್ಕೂ ಅಥವಾ ಇತ್ತೀಚಿನ ಯಾವುದೇ ವಾಯುದಾಳಿಗೂ ಯಾವುದೇ ಸಂಬಂಧವಿಲ್ಲ.
https://x.com/PIBFactCheck/status/1919916769403134126
ಪಾಕಿಸ್ತಾನವು ಭಾರತೀಯ ಬ್ರಿಗೇಡ್ ಪ್ರಧಾನ ಕಚೇರಿಯನ್ನು ನಾಶಪಡಿಸಿದೆ ಎಂದು ಮತ್ತೊಂದು ವದಂತಿಯು ಹೇಳಿಕೊಂಡಿದೆ, ಆದರೆ ಇದಕ್ಕೆ ಯಾವುದೇ ಆಧಾರವಿಲ್ಲ ಮತ್ತು ಸಂಪೂರ್ಣವಾಗಿ ಕಟ್ಟುಕಥೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
https://x.com/PIBFactCheck/status/1919922375069409298
ಇದಲ್ಲದೆ, ಸೆಪ್ಟೆಂಬರ್ 2024 ರಲ್ಲಿ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದ ಮಿಗ್-29 ಅಪಘಾತದ ಹಳೆಯ ಚಿತ್ರವನ್ನು ಪಾಕಿಸ್ತಾನ ಪರ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳು ಇತ್ತೀಚಿನ ಭಾರತೀಯ ವಾಯುಪಡೆಯ ನಷ್ಟಗಳನ್ನು ಸೂಚಿಸಲು ಮರುಬಳಕೆ ಮಾಡಿವೆ, ಆದರೆ ಇದು ಸಂಭವಿಸಿಲ್ಲ.
https://x.com/PIBFactCheck/status/1919973596665135471
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಕೂಡ ಇತ್ತೀಚಿನ ಸೇನಾ ದಾಳಿಯ ಸಮಯದಲ್ಲಿ ಭಾರತೀಯ ಸೈನಿಕರನ್ನು ಸೆರೆಹಿಡಿಯಲಾಗಿದೆ ಎಂದು ಆಧಾರರಹಿತ ಹೇಳಿಕೆ ನೀಡಿದ್ದರು, ಆದರೆ ನಂತರ ಈ ಹೇಳಿಕೆಯನ್ನು ನಿರಾಕರಿಸಲಾಯಿತು ಮತ್ತು ಹಿಂಪಡೆಯಲಾಯಿತು.
ಭಾರತದ ಆಪರೇಷನ್ ಸಿಂಧೂರ್ ಗೆ ಪಾಕಿಸ್ತಾನದ ಪ್ರತಿಕ್ರಿಯೆಯ ನಂತರ ಭಾರತೀಯ ಸೈನಿಕರನ್ನು ಸೆರೆಹಿಡಿಯಲಾಗಿದೆ ಎಂದು ಆಸಿಫ್ ಹೇಳಿದ್ದರು. ಆದರೆ ಸೈನಿಕರನ್ನು ಸೆರೆಹಿಡಿಯಲಾಗಿದೆ ಎಂಬ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲದ್ದ ಕಾರಣ ಈ ಹೇಳಿಕೆಗಳನ್ನು ತಕ್ಷಣವೇ ಸುಳ್ಳು ಎಂದು ತಳ್ಳಿಹಾಕಲಾಯಿತು. ನಂತರ ರಕ್ಷಣಾ ಸಚಿವರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡರು ಮತ್ತು ಯಾವುದೇ ಭಾರತೀಯ ಸೈನಿಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿಲ್ಲ ಎಂದು ಒಪ್ಪಿಕೊಂಡರು.
ತಪ್ಪು ಮಾಹಿತಿಯ ಕಾರ್ಯತಂತ್ರದ ಬಳಕೆ
ಈ ಘಟನೆಗಳು, ಭಾರತವು ಆಪರೇಷನ್ ಸಿಂಧೂರ್ ದಾಳಿಯನ್ನು ಯಶಸ್ವಿಯಾಗಿ ನಡೆಸಿದ ನಂತರ, ಮಾಧ್ಯಮಗಳನ್ನು ದಾರಿತಪ್ಪಿಸಲು, ಜಾಗತಿಕ ನಿರೂಪಣೆಯನ್ನು ವಿರೂಪಗೊಳಿಸಲು ಮತ್ತು ಸಾರ್ವಜನಿಕ ಗ್ರಹಿಕೆಯನ್ನು ಪ್ರಭಾವಿಸಲು ಪಾಕಿಸ್ತಾನವು ಉದ್ದೇಶಪೂರ್ವಕ ಮತ್ತು ಸಂಘಟಿತ ಪ್ರಯತ್ನವನ್ನು ಪ್ರತಿಬಿಂಬಿಸುತ್ತವೆ. ಮರುಬಳಕೆಯ ಚಿತ್ರಗಳು, ಸಂಬಂಧವಿಲ್ಲದ ವೀಡಿಯೊಗಳು ಮತ್ತು ಕಟ್ಟುಕಥೆಗಳಿಂದ ಸಾಮಾಜಿಕ ಮಾಧ್ಯಮಗಳನ್ನು ತುಂಬುವ ಮೂಲಕ, ಪಾಕಿಸ್ತಾನವು ಕಾರ್ಯಾಚರಣೆಯ ನಿಜವಾದ ಫಲಿತಾಂಶವನ್ನು ಮರೆಮಾಚಲು ಮತ್ತು ಬಲವಾದ ಪ್ರತಿ-ಪ್ರತಿಕ್ರಿಯೆಯ ಭ್ರಮೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಈ ತಂತ್ರವು ಭಾರತದ ಕ್ರಮದ ಪರಿಣಾಮಕಾರಿತ್ವದಿಂದ ಗಮನವನ್ನು ಬೇರೆಡೆ ಸೆಳೆಯುವ ಗುರಿಯನ್ನು ಹೊಂದಿರುವಂತೆ ತೋರುತ್ತದೆ. ಅದೇ ಸಮಯದಲ್ಲಿ ಯುದ್ಧಭೂಮಿ ಬೆಳವಣಿಗೆಗಳ ತಪ್ಪು ಚಿತ್ರಣಗಳ ಮೂಲಕ ದೇಶದೊಳಗಿನ ಭಾವನೆ ಮತ್ತು ಅಂತರರಾಷ್ಟ್ರೀಯ ಅಭಿಪ್ರಾಯ ಎರಡನ್ನೂ ಪ್ರಭಾವಿಸಲು ಪ್ರಯತ್ನಿಸುತ್ತಿದೆ.