ಪಾವಗಡ: ತಾಲ್ಲೂಕಿನ ಪಳವಳ್ಳಿ ಕಟ್ಟೆಯ ಬಳಿ SVT ಎಂಬ ಖಾಸಗಿ ಬಸ್ ಪಲ್ಟಿ ಹೊಡೆದಿದೆ. ಈ ಘಟನೆ ಯಲ್ಲಿ 4 ಜನರು ಸಾವನ್ನಪ್ಪಿದ್ದರೆ, 50 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡ 10 ಕ್ಕೂ ಹೆಚ್ಚು ಜನರನ್ನು ತುಮಕೂರು ಹಾಗು ಬೆಂಗಳೂರು ಆಸ್ಪತ್ರೆ ಗಳಿಗೆ ಕಳುಹಿಸಲಾಗಿದೆ.
ಸ್ಥಳೀಯ ಶಾಸಕ ವೆಂಕಟರವಣಪ್ಪ ನವರ ಪ್ರಕಾರ 4 ಜನರು ಮಾತ್ತ ಮೃತ ಪಟ್ಡಿದ್ದು, ಕೆಲವರಿಗೆ ಸಣ್ಣ- ಪುಟ್ಟ ಗಾಯಗಳಾಗಿವೆ ಎಂಬ ವಿಷಯ ವನ್ನು ಶಾಸಕರು ಖಾಸಗಿ ಸುದ್ದಿವಾಹಿನಿ ಗೆ ಮಾಹಿತಿ ನೀಡಿದ್ದಾರೆ.
ಗೃಹ ಸಚಿವರು, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಅವರು ಮಾದ್ಯಮ ಕ್ಕೆ ನೀಡಿದ ಮಾಹಿತಿ ಪ್ರಕಾರ 8 ಜನ ಸಾವನಪ್ಪಿದ್ದಾರೆ.
ಪೋಲೀಸ್ ರ ಮಾಹಿತಿಯ ಪ್ರಕಾರ 8 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಚಾಲಕನ ನಿರ್ಲಕ್ಷ್ಯ ವೇ ಅಪಘಾತಕ್ಕೆ ಕಾರಣ , ಬಸ್ ನಲ್ಲಿ ಟಾಪ್ ಮೇಲೂ 80 ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು ಎಂಬುದು ಪ್ರತ್ಯಕ್ಷದರ್ಶಿಗಳ ಹೇಳಿದ್ದಾರೆ.
ವೈ ಎನ್ ಹೊಸಕೋಟೆ ಯ ನಾಗರಾಜ್ ಎಂಬವವರು ಈ SVT ಬಸ್ ನ ಮಾಲೀಕರು. ಘಟನಾ ಸ್ಥಳದಿಂದ ಚಾಲಕ ಮತ್ತು ಕಂಡೆಕ್ಟರ್ ಪರಾರಿ.
ಪೋತಗಾನಹಳ್ಳಿ ಅಮೂಲ್ಯ, ವೈ ಎನ್ ಹೊಸಕೋಟೆ ಯ ಕಲ್ಯಾಣ್ ಕುಮಾರ್, ಬೆಸ್ತರ ಹಳ್ಳಿ ಯ ಶಹನವಾಜ್ , ಸುಲನಾಯಕನಹಳ್ಳಿ ಅಜಯ್ ಮೃತ ಪಟ್ಟವರಾಗಿದ್ದಾರೆ.
ಬಸ್ ನಲ್ಲಿ ಹೆಚ್ಚು ಕಾಲೇಜ್ ವಿಧ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಕಾಲೇಜು ಸಮಯದಲ್ಲಿ ವೈ ಎನ್ ಹೊಸಕೋಟೆಯಿಂದ ಪಾವಗಡ ಕ್ಕೆ ಸರ್ಕಾರಿ ಬಸ್ ಸೇವೆ ಇಲ್ಲದ ಕಾರಣ ಖಾಸಗಿ ಬಸ್ ಗಳನ್ನೆ ನಂಬಿ ಬದುಕುವ ಸ್ಥಿತಿ ಪಾವಗಡ ತಾಲ್ಲೂಕಿನಲ್ಲಿ ಇದೆ ಎನ್ನುವುದು ಸಾರ್ವಜನಿಕರ ಮಾತಾಗಿದೆ