ಕೋವಿಡ್ ಸಂಕಷ್ಟ ಕಾಲದಲ್ಲಿ ಸಹಕಾರ ಕ್ಷೇತ್ರದ ಕೊಡುಗೆ ಅಪಾರ- ಮುಖ್ಯಮಂತ್ರಿ ಯಡಿಯೂರಪ್ಪ.
ಬೆಂಗಳೂರು: ( ಕರ್ನಾಟಕ ವಾರ್ತೆ ) :ಪ್ರಸಕ್ತ ಸಾಲಿನಲ್ಲಿ ಕೋವಿಡ್ ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡುವ ಉದ್ದೇಶವನ್ನು ಹೊಂದಿದ್ದು, 30.26 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ರೂ. 19,370 ಕೋಟಿ ಅಲ್ಪಾವಧಿ ಬೆಳೆ ಸಾಲ ಮತ್ತು 60 ಲಕ್ಷ ರೈತರಿಗೆ ಶೇಕಡಾ 3ರ ಬಡ್ಡಿ ದರದಲ್ಲಿ 1,440 ಕೋಟಿ ಮಧ್ಯಮಾವಧಿ/ದೀರ್ಘಾವಧಿ ಸಾಲ ವಿತರಣೆ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.
ಇಂದು ವಿಧಾನಸೌಧದಲ್ಲಿ ಸಹಕಾರ ಇಲಾಖೆ ಹಾಗೂ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ ನಿಯಮಿತವತಿಯಿಂದ ಆಯೋಜಿಸಿದ್ದ ರೈತ ಸ್ಪಂದನ 2021-22ನೇ ಸಾಲಿನ ವಿವಿಧ ಕೃಷಿ ಸಾಲ ವಿತರಣಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಾಲನೆ ನೀಡಿ ಮಾತನಾಡಿ ಅತ್ಯಂತ ಸಂತೋಷದಿಂದ ರೈತರಿಗೆ ಮತ್ತು ಸ್ತ್ರೀಶಕ್ತಿ ಗುಂಪುಗಳಿಗೆ ಸಾಲ ವಿತರಿಸುವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದ್ದೇನೆ ಎಂದು ಹೇಳಿದರು.
ನಮ್ಮದು ರೈತಪರ ಸರ್ಕಾರ. ಕೃಷಿ, ಆರೋಗ್ಯ ಮತ್ತು ಶಿಕ್ಷಣ ನಮ್ಮ ಸರ್ಕಾರದ ಆದ್ಯತಾ ವಲಯಗಳು. ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ ಎನ್ನುವ ಸಹಕಾರ ತತ್ವದ ಮೆಲೆ ಸಹಕಾರ ಸಂಘಗಳು ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳ ರೈತರಿಗೆ ಸ್ವಾವಲಂಬಿ ಜೀವನ ನಡೆಸಲು ಸಾಲ-ಸೌಲಭ್ಯ ಸೇವೆಗಳನ್ನು ನೀಡುತ್ತಾ ಬಂದಿವೆ.
ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಹ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಇಲ್ಲಾ ಸಹಕಾರ ಸಂಘಗಳು ಮತ್ತು ಸದಸ್ಯರ ಆರ್ಥಿಕ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ.
ಕೋವಿಡ್ ಸಂಕಷ್ಟದ ಅವಧಿಯಲ್ಲಿ ಈ ಸಹಕಾರ ಸಂಘಗಳು ಇನ್ನೂ ಹೆಚ್ಚಿನ ಸೇವೆಗಳ ತಮ್ಮ ಸದಸ್ಯರುಗಳಿಗೆ ನೀಡಲು ಮುಂದಾಗಿರುವುದು ಶ್ಲಾಘನೀಯ. ಕೋವಿಡ್ ಸಂಕಷ್ಟಕ್ಕೊಳಗಾದ ಜನರಿಗೆ ಸಂಘಗಳು ಉಚಿತವಾಗಿ ರೂ. 4.62 ಕೋಟಿ ಮೌಲ್ಯದ ವಿವಿಧ ವೈದ್ಯಕೀಯ ಸಲಕರಣೆ, ಆಹಾರ ಧಾನ್ಯ ಕಿಟ್ ವಿತರಣೆ, ಆಂಬುಲೆನ್ಸ್ ವಆಹನಗಳನ್ನು ನೀಡಿದೆ. ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ 58.00 ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ದೇಣಿಗೆಯಾಗಿ ನೀಡಿ, ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಣೆ ಮಾಡುತ್ತಿರುತ್ತವೆ. ಇದಕ್ಕೆ ನಾವೆಲ್ಲರೂ ಆಭಾರಿಯಾಗಿದ್ದೇವೆ.
ರಾಜ್ಯದಲ್ಲಿ ಈವರೆಗೆ ಸಹಕಾರ ಕ್ಷೇತ್ರದಲ್ಲಿ 2.5 ಲಕ್ಷ ಸ್ತ್ರೀಶಕ್ತಿ/ಸ್ವಸಹಾಯ ಗುಂಪುಗಳನ್ನು ರಚನೆ ಮಾಡಲಾಗಿದ್ದು, ಸಉಮಾರು 32 ಲಕ್ಷ ಸದಸ್ಯರಿರುತ್ತಾರೆ. ಕಳೆದ ವರ್ಷದಲ್ಲಿ ಸಹಕಾರ ಸಂಘಗಲು ಕೃಷಿ ಕ್ಷೇತ್ರದಲ್ಲಿ 25.67 ಲಕ್ಷ ರೈತರಿಗೆ ರೂ. 16,641.00 ಕೋಟಿಗಳ ಅಲ್ಪಾವಧಿ ದೃಷಿ ಸಲ ವಿತರಿಸಲಾಗಿದೆ. 52 ಸಾವಿರ ರೈತರಿಗೆ ರೂ. 1260.21 ಕೋಟಿಗಳ ಮಧ್ಯಮಾವಧಿ/ದಿರ್ಘಾವಧಿ ಸಾಲ ವಿತರಣೆ ಮಾಡಿದ್ದು, ಗುರಿಗೆ ಎದುರಾಗಿ ಶೇ.114 ರಷ್ಟು ಸಾಧನೆ ಮಾಡಿರುತ್ತವೆ. ಇದರಲ್ಲಿ 57 ಲಕ್ಷ ರೈತರಿಗೆ ರೂ. 105.64 ಕೋಟಿಗಳ ಸಾಲವನ್ನು ಹೈನುಗಾರಿಕೆ ಚಟುವಟಿಕೆಗಳಿಗೆ ನೀಡಲಾಗಿದೆ ಎಂದು ಹೇಳಿದರು.
2021-22ನೇ ಸಾಲಿನಲ್ಲಿ 40 ಲಕ್ಷ ಗುಂಪುಗಳಿಗೆ ರೂ. 1,400 ಕೋಟಿಗಳ ಸಾಲ ವಿತರಿಸುವ ಗುರಿ ಹೊಂದಲಾಗಿದದು, ಮೇ ಅಂತ್ಯಕ್ಕೆ 6,700 ಗುಂಪುಗಳಿಗೆ ರೂ. 233.33 ಕೋಟಿ ಸಾಲ ವಿತರಿಸಲಾಗಿದೆ. ಕೋವಿಡ್-19 ಸೋಂಕಿನ ಪರಿಣಾಮದಿಂದ ಉಂಟಾಗಿರುವ ಪ್ರತಿಕೂಲ ಸನ್ನಿವೇಶದಲ್ಲಿ ರೈತರ ಮತ್ತು ಸ್ವಸಹಾಯ ಗುಂಪುಗಳ ಸಮಸ್ಯೆಯನ್ನು ಮನಗಂಡ ಸರ್ಕಾರ, ಮರುಪಾವತಿ ಅವಧಿಯನ್ನು 23 ತಿಂಗಳಿಗೆ ವಿಸ್ತರಿಸಿ ಆದೇಸ ಹೊರಡಿಸಿದೆ. ಇದರಿಂದ ಒಟ್ಟು 6,17,805 ರೈತರು 65,500 ಸ್ವಸಹಾಯ ಗುಂಪುಗಳ ಅಂದಾಜು 8.51 ಲಕ್ಷ ಸದಸ್ಯರಿಗೆ ಅನುಕೂಲವಾಗಲಿದೆ.
ಕೋವಿಡ್‍ನಿಂದಾಗಿ ಸೂಕ್ತ ಮಾರುಕಟ್ಟೆ ಇಲ್ಲದೇ ಸಂಕಷ್ಟಕ್ಕೀಡಾದ ಹೂ ಮತ್ತು ಹಣ್ಣು ಬೆಳೆಗಾರರಿಗೆ ಒಂದು ಹೆಕ್ಟೇರ್‍ಗೆ 10 ಸಾವಿರ ರೂ. ಪರಿಹಾರ ಘೋಷಿಸಲಾಗಿದೆ. ಕೋವಿಡ್ 2ನೆ ಅಲೆಯಿಂದ ಸಂಕಷ್ಟಕ್ಕೀಡಾದ ದುರ್ಬಲ ವರ್ಗದವರಿಗೆ ಒಟ್ಟು 2,050 ಕೋಟಿ ರೂ.ಗಳ ಪರಿಹಾರದ ಪ್ಯಾಕೇಜ್‍ನ್ನು ಸರ್ಕಾರ ಘೋಷಿಸಿದೆ. ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಯೋಜನೆಯಡಿ ರಾಜ್ಯದ 930 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಲ್ಲಿ ಗೋದಾಮುಗಳನ್ನು ನಿರ್ಮಿಸಲು ನಬಾರ್ಡ್ ಮೂಲಕ ರೂ. 316.72 ಕೋಟಿಗಳ ಸಾಲವನ್ನು ಶೇಕಡಾ 4ರ ಬಡ್ಡಿ ದರದಲ್ಲಿ ಮಂಜೂರು ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ರಾಜೇಂದ್ರ ಕುಮಾರ್ ಅವರು ಉಪಸ್ಥಿತರಿದ್ದರು.
ರೈತ ಸ್ಪಂದನೆ ಕುರಿತು ಮಾಹಿತಿ:
“ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ಎಂಬ ಸಹಕಾರ ತತ್ವದ ಅಡಿಯಲ್ಲಿ ಸಹಕಾರ ಸಂಘಗಳು ಸ್ವತಂತ್ರ ಪೂರ್ವದಿಂದಲೂ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳ ದುರ್ಬಲ ವರ್ಗದ ಸದಸ್ಯರಿಗೆ ಸ್ವಾವಲಂಬಿ ಜೀವನ ನಡೆಸಲು ಸಾಲ ಸೌಲಭ್ಯ ಮತ್ತು ಎಲ್ಲಾ ಬಗೆಯ ಸೇವೆಗಳನ್ನು ನೀಡುತ್ತಿರುತ್ತವೆ. ಈ ಸಹಕಾರ ಸಂಘಗಳು ಎಲ್ಲಾ ವಲಯಗಳಲ್ಲೂ ಪ್ರಸರಣಗೊಂಡಿದ್ದು, ಸರ್ಕಾರವೂ ಕೂಡ ರೈತರು ಮತ್ತು ಮಹಿಳೆಯರಿಗಾಗಿ ಈ ಸಹಕಾರ ಸಂಘಗಳ ಮೂಲಕ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿರುತ್ತದೆ.
ಕೋವಿಡ್ ಸಂಕಷ್ಟದ ಅವಧಿಯಲ್ಲಿ ಈ ಸಹಕಾರ ಸಂಘಗಳೂ ಇನ್ನೂ ಹೆಚ್ಚಿನ ಸೇವೆಗಳನ್ನು ತಮ್ಮ ಸದಸ್ಯರುಗಳಿಗೆ ನೀಡುತ್ತಿರುತ್ತವೆ. ಇದಲ್ಲದೇ ಈ ಸಂಘಗಳು ಕೋವಿಡ್ ಸಂಕಷ್ಟಕ್ಕೊಳಗಾದ ಜನರಿಗೆ ಉಚಿತವಾಗಿ ರೂ.4.62 ಕೋಟಿ ಮೌಲ್ಯದ ವಿವಿಧ ವೈದ್ಯಕೀಯ ಸಲಕರಣೆ, ಆಹಾರ ಧಾನ್ಯ ಕಿಟ್ ವಿತರಣೆ, ಆಂಬುಲೆನ್ಸ್ ವಾಹನಗಳು ನೀಡುವುದರ ಜೊತೆಯಲ್ಲಿ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ 58.00 ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ದೇಣಿಗೆಯಾಗಿ ನೀಡಿ, ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಣೆ ಮಾಡುತ್ತಿರುತ್ತವೆ. ಇದಕ್ಕೆ ನಾವೆಲ್ಲರೂ ಆಭಾರಿಯಾಗಿದ್ದೇವೆ.
ಕಳೆದ ವರ್ಷದಲ್ಲಿ ಸಹಕಾರ ಸಂಘಗಳು ಕೃಷಿ ಕ್ಷೇತ್ರದಲ್ಲಿ 25.67 ಲಕ್ಷ ರೈತರಿಗೆ ರೂ. 16641.00 ಕೋಟಿಗಳ ಅಲ್ಪಾವಧಿ ಕೃಷಿ ಸಾಲ, 0.52 ಲಕ್ಷ ರೈತರಿಗೆ ರೂ. 1260.21 ಕೋಟಿಗಳ ಮಧ್ಯಮಾವಧಿ/ದಿರ್ಘಾವಧಿ ಸಾಲ ವಿತರಣೆ ಮಾಡಿದ್ದು, ಗುರಿಗೆ ಎದುರಾಗಿ ಶೇ.114 ರಷ್ಟು ಸಾಧನೆ ಮಾಡಿರುತ್ತವೆ. ಇದರಲ್ಲಿ 0.57 ಲಕ್ಷ ರೈತರಿಗೆ ರೂ. 105.64 ಕೋಟಿಗಳ ಸಾಲವನ್ನು ಹೈನುಗಾರಿಕೆ ಚಟುವಟಿಕೆಗಳಿಗೆ ನೀಡಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಕೋವಿಡ್ ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡುವ ಉದ್ದೇಶವನ್ನು ಹೊಂದಿದ್ದು, 30.26 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ರೂ. 19370 ಕೋಟಿ ಅಲ್ಪಾವಧಿ ಬೆಳೆ ಸಾಲ ಮತ್ತು 0.60 ಲಕ್ಷ ರೈತರಿಗೆ ಶೇ. 3ರ ಬಡ್ಡಿ ದರದಲ್ಲಿ 1440 ಕೋಟಿ ಮಧ್ಯಮಾವಧಿ/ದೀರ್ಘಾವಧಿ ಸಾಲ ವಿತರಣೆ ಗುರಿ ಹೊಂದಲಾಗಿದೆ.
ಮೇ ಅಂತ್ಯಕ್ಕೆ 3.29 ಲಕ್ಷ ರೈತರಿಗೆ ರೂ.2500.72 ಕೋಟಿ ಅಲ್ಪಾವಧಿ ಬೆಳೆ ಸಾಲ ವiತ್ತು 0.05ಲಕ್ಷ ರೈತರಿಗೆ ರೂ. 121.16 ಕೋಟಿ ಮಧ್ಯಮಾವಧಿ/ದಿರ್ಘಾವಧಿ ಸಾಲ ವಿತರಣೆ ಮಾಡಲಾಗಿದೆ.
ರಾಜ್ಯದಲ್ಲಿ ಇಲ್ಲಿಯವರೆಗೆ ಸಹಕಾರ ಕ್ಷೇತ್ರದಲ್ಲಿ 2.5 ಲಕ್ಷ ಸ್ತ್ರೀಶಕ್ತಿ/ಸ್ವಸಹಾಯ ಗುಂಪುಗಳನ್ನು ರಚನೆ ಮಾಡಲಾಗಿದ್ದು, ಸುಮಾರು 32 ಲಕ್ಷ ಸದಸ್ಯರಿರುತ್ತಾರೆ.
2020-21ನೇ ಸಾಲಿನಲ್ಲಿ 034 ಲಕ್ಷ ಗುಂಪುಗಳಿಗೆ ರೂ. 1201.68 ಕೋಟಿ ಸಾಲ ವಿತರಿಸಲಾಗಿದ್ದು, 0.77 ಲಕ್ಷ ಗುಂಪುಗಳಿಂದ ರೂ.1633.59 ಕೋಟಿ ಹೊರಬಾಕಿ ಹೊಂದಿದ್ದು, ಗುರಿಗೆ ಎದುರಾಗಿ ಶೇ.100.14 ರಷ್ಟು ಪ್ರಗತಿ ಸಾಧಿಸಲಾಗಿದೆ.
2021-22 ನೇ ಸಾಲಿನಲ್ಲಿ 0.40 ಲಕ್ಷ ಗುಂಪುಗಳಿಗೆ ರೂ. 1400.00 ಕೋಟಿಗಳ ಸಾಲ ವಿತರಿಸುವ ಗುರಿ ಹೊಂದಲಾಗಿದ್ದು, ಮೇ ಅಂತ್ಯಕ್ಕೆ 6700 ಗುಂಪುಗಳಿಎ ರೂ. 233.33 ಕೋಟಿ ಸಾಲ ವಿತರಿಸಲಾಗಿದೆ.
ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಹ ಬೆಂಗಳೂರು ನಗರ, ಬೆಂಗಳೂರು ಗ್ರಮಾಂತರ ಮತ್ತು ರಾಮನಗರ ಜಿಲ್ಲೆಯ ಎಲ್ಲಾ ಸಹಕಾರ ಸಂಗಳು ಮತ್ತು ಸದಸ್ಯರ ಆರ್ಥಿಕ ಬೇಡಿಕೆಗಳಿಗೆ ಪೆಡರಲ್ ಬ್ಯಾಂಕ್ ಆಗಿ, 1955 ರಿಂದ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುತ್ತದೆ.
ಬೆಂಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕಳೆದ ಸಾಲಿನಲ್ಲಿ 95439 ರೈತರಿಗೆ 557.90 ಕೋಟಿ ರೂ. ಕೃಷಿ ಸಾಲ, 185 ಸ್ವಸಹಾಯ ಗುಂಪುಗಳ 2220 ಸದಸ್ಯರಿಗೆ ರೂ. 10.24 ಕೋಟಿಗಳ ಸಾಲ ನೀಡಿ, ಗುರಿಗೆ ಎದುರಾಗಿ ಶೇ. 97 ರಷ್ಟು ಸಾಧನೆ ಮಾಡಿರುತ್ತವೆ.
ಪ್ರಸಕ್ತ ಸಾಲಿನಲ್ಲಿ ಈ ಬ್ಯಾಂಕ್‍ನ ಮೂಲಕ 118333 ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ರೂ. 710.00 ಕೋಟಿ ಅಲ್ಪಾವಧಿ ಬೆಳೆ ಸಾಲ ಮತ್ತು 200 ರೈತರಿಗೆ ಶೇ. 3ರ ಬಡ್ಡಿ ದರದಲ್ಲಿ 10 ಮಧ್ಯಮಾವಧಿ/ದಿರ್ಘಾವಧಿ ಸಾಲ ವಿತರಣೆ ಗುರಿ ಹೊಂದಲಾಗಿದ್ದು, ಈ ಜಿಲ್ಲೆಗಳ ರೈತರ ಸಾಲ ಬೇಡಿಕೆಯನ್ನು ಪೂರೈಸಲು ಸಿದ್ದವಾಗಿರುತ್ತದೆ.