IMG 20211117 WA0008

ಹೊಸ ಡಿಜಿಟಲ್ ತಂತ್ರಜ್ಞಾನ ಹಾಗೂ ಆವಿಷ್ಕಾರಗಳಿಂದ ದೇಶದ ಅಭಿವೃದ್ಧಿ ಸಾಧ್ಯ-ಎಂ. ವೆಂಕಯ್ಯನಾಯ್ಡು

Genaral STATE

ಹೊಸ ಡಿಜಿಟಲ್ ತಂತ್ರಜ್ಞಾನ ಹಾಗೂ ಆವಿಷ್ಕಾರಗಳಿಂದ ದೇಶದ ಅಭಿವೃದ್ಧಿ ಸಾಧ್ಯ-ಎಂ. ವೆಂಕಯ್ಯನಾಯ್ಡು

ಬೆಂಗಳೂರು, ನವೆಂಬರ್ 17 (ಕರ್ನಾಟಕ ವಾರ್ತೆ) :
ಹೊಸ ಡಿಜಿಟಲ್ ತಂತ್ರಜ್ಞಾನ ಹಾಗೂ ಆವಿಷ್ಕಾರಗಳನ್ನು ವಿನಿಮಯ ಮಾಡಿಕೊಂಡಾಗ ದೇಶದ ಬೆಳವಣಿಗೆಯಾಗುತ್ತದೆ ಇದರಿಂದ ಜೀವನಮಟ್ಟ ಸುಧಾರಿಸಿ  ಜ್ಞಾನ ಆಧಾರಿತ ಸಮಾಜದ ಸೃಷ್ಠಿಯಾಗುತ್ತದೆ ಎಂದು ಭಾರತದ ಉಪರಾಷ್ಟ್ರಪತಿಗಳಾದ ಎಂ.ವೆಂಕಯ್ಯನಾಯ್ಡು ಅವರು ತಿಳಿಸಿದರು.

ಅವರು ಇಂದು ಖಾಸಗಿ ಹೋಟೆಲ್‍ನಲ್ಲಿ ಹಮ್ಮಿಕೊಳ್ಳಲಾದ 3 ದಿನಗಳ ಬೆಂಗಳೂರು ಟೆಕ್ ಸಮ್ಮಿಟ್-2021ರ 24ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡುತ್ತಾ, ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳು ನಡೆಯಬೇಕಿದೆ. ಇಂದು  ದೇಶ ಜಾಗತಿಕ ತಾಪಮಾನ ಬದಲಾವಣೆ, ರೋಗರುಜಿನ ನಿರುದ್ಯೋಗ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಇವುಗಳ ನಿವಾರಣೆಗೆ ಡಿಜಿಟಲ್ ತಂತ್ರಜ್ಞಾನದ ಹೊಸ ಆವಿಷ್ಕಾರಗಳು, ಬೆಳವಣಿಗೆಗಳು ಹೆಚ್ಚು ಪೂರಕ. ಭಾರತದಲ್ಲಿ ಸಂಪನ್ಮೂಲಗಳಿಗೆ ಕೊರತೆಯಿಲ್ಲ. ಅದನ್ನು ತಾಂತ್ರಿಕ ರೀತಿಯನ್ನು ಬಳಸಿದರೆ ದೇಶ ಮುನ್ನಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾನವನ ಸೃಷ್ಠಿಯೇ ಅದ್ಭುತಗಳಲ್ರ್ಲೆಂದು. ತನ್ನ ಬುದ್ಧಿ, ಜ್ಞಾನ, ಅಭಿವ್ಯಕ್ತಿಯಿಂದ ಏನನ್ನಾದರೂ ಸಾಧಿಸಲು ತಯಾರಿರುತ್ತಾನೆ. ನಾವು ಆಕಾಶಕ್ಕೂ ಎತ್ತರವಾಗಿ ಚಿಂತಿಸಬೇಕು. ಹೊಸ ತಾಂತ್ರಿಕ ಆವಿಷ್ಕಾರಗಳು, ಇದರ ಅಳವಡಿಕೆಯಿಂದ ಜ್ಞಾನಯುಕ್ತ ಸಮಾಜ ನಿರ್ಮಾಣ ಸಾಧ್ಯ. ಇಂದು ಹಮ್ಮಿಕೊಳ್ಳಲಾಗಿರುವ ಬೆಂಗಳೂರು ಟೆಕ್ ಸಮ್ಮಿಟ್ – 2021 ತಂತ್ರಜ್ಞಾನ ಮತ್ತು ಜಾಗತಿಕ ವ್ಯವಹಾರ ಬೆಳವಣಿಗೆಯನ್ನು ಅಭಿವ್ಯಕ್ತಿಗೊಳಿಸುತ್ತಿದೆ. ಬೇರೆ ದೇಶಗಳ ಜೊತೆಗೆ ತಂತ್ರಜ್ಞಾನ ವಿನಿಮಯದಿಂದ ದೇಶದ ಆರ್ಥಿಕ ಬೆಳವಣಿಗೆ ಸಹ ಸಾಧ್ಯ. ಕರ್ನಾಟಕ ಮಾಹಿತಿ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದು, ಇಂತಹ ಶೃಂಗಸಭೆಗಳು ರಾಜ್ಯವನ್ನು ಇನ್ನೂ ಎತ್ತರಕ್ಕೆ ಕರೆದೊಯ್ಯುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
IMG 20211117 WA0005
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಮಾತನಾಡುತ್ತಾ, ಕರ್ನಾಟಕವು ಕೃಷಿ ಸೇರಿದಂತೆ ವಿಜ್ಞಾನ ತಂತ್ರಜ್ಞಾನದ ಸ್ಟ್ರಾರ್ಟ್‍ಅಪ್‍ಗಳಿಗೆ ಉತ್ತೇಜನ ನೀಡುತ್ತಿದೆ. ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯಲ್ಲಿದ್ದೇವೆ. ಶ್ರೇಷ್ಠ ಆತ್ಮನಿರ್ಭರ ಭಾರತವನ್ನು ಕಟ್ಟೋಣ. ಕೋವಿಡ್-19ರ ಕಷ್ಟದ ಕಾಲದಲ್ಲಿ ಬಳಲಿದ ದೇಶ ಈಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಈ ಸಮಾವೇಶ ದೇಶ ಹಾಗೂ ರಾಜ್ಯದ ಹೊಸ ತಂತ್ರಜ್ಞಾನದ ಬೆಳವಣಿಗೆ ನಾಂದಿ ಹಾಕÀಲಿ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಐಟಿ-ಬಿಟಿ, ಎಲೆಕ್ಟ್ರಾನಿಕ್ಸ್, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥ್‍ನಾರಾಯಣ ಅವರು ಆರೋಗ್ಯ, ವಿಜ್ಞಾನ, ಉದ್ದಿಮೆ, ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿ ಏರ್ಪಟ್ಟಿದೆ. ಜೈವಿಕ ತಂತ್ರಜ್ಞಾನ, ಲಸಿಕೆಗಳ ಅಭಿವೃದ್ಧಿ ಇಂದು ಮೈಲಿಗಲ್ಲು ಸೃಷ್ಟಿಸಿವೆ. ಈ ಶೃಂಗಸಭೆ ಹಲವು ನಿರ್ಣಯಗಳಿಗೆ ದಾರಿ ಮಾಡಿ ಕೊಡಲಿದೆ ಎಂದರು.

ನವೆಂಬರ್ 17ರಿಂದ 19ರವರೆಗೆ ಹಮ್ಮಿಕೊಳ್ಳಲಾಗಿರುವ ಬೆಂಗಳೂರು ತಂತ್ರಜ್ಞಾನ ಶೃಂಗದ 24ನೇ ಸಮಾವೇಶದಲ್ಲಿ 30ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತಿವೆ. ಯುಎಇ, ಐರೋಪ್ಯ ಒಕ್ಕೂಟ, ವಿಯೆಟ್ನಾಂ ಮತ್ತು ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿದ್ದು, ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಶೃಂಗದಲ್ಲಿ ವರ್ಚುಯಲ್ ರೂಪದಲ್ಲಿ ಮಾತನಾಡಿ ಶುಭ ಹಾರೈಸಿದರು.

ಈ ಶೃಂಗದಲ್ಲಿ 300ಕ್ಕೂ ಹೆಚ್ಚು ಕಂಪನಿಗಳು 5 ಸಾವಿರಕ್ಕೂ ಹೆಚ್ಚು ನವೋದ್ಯಮಗಳು ಸಕ್ರಿಯವಾಗಿ ಭಾಗವಹಿಸಿವೆ ವಾಣಿಜ್ಯ ವಲಯದ 20 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಹಾಜರಾಗುತ್ತಿದ್ದು, ವರ್ಚುಯಲ್ ರೂಪದಲ್ಲಿ  5 ಲಕ್ಷಕ್ಕೂ ಹೆಚ್ಚು ಆಸಕ್ತರು ವೀಕ್ಷಿಸಲಿದ್ದಾರೆ.

‘ಡ್ರೈವಿಂಗ್ ದಿ ನೆಕ್ಸ್ಟ್’ ಘೋಷವಾಕ್ಯದಡಿ ನಡೆಯಲಿರುವ ಈ ಶೃಂಗದಲ್ಲಿ ಐಟಿ-ಬಿಟಿ, ಕೃಷಿ, ಆರೋಗ್ಯ, ಲಸಿಕೆ, ಸೈಬರ್ ಸೆಕ್ಯೂರಿಟಿ, ವೈದ್ಯಕೀಯ ಮತ್ತು ಆರ್ಥಿಕ ತಂತ್ರಜ್ಞಾನಕ್ಕೆ ಒತ್ತು ನೀಡಲಾಗುವುದು. ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಕರ್ನಾಟಕ ಸರ್ಕಾರದ ಬಯೋಟೆಕ್ನಾಲಜಿ ವಿಷನ್ ಗ್ರೂಪ್ ಅಧ್ಯಕ್ಷರಾದ                     ಡಾ. ಕಿರಣ್ ಮಜುಂದಾರ್ ಶಾ,  ಐಟಿ-ಬಿಟಿ ಎಲೆಕ್ಟ್ರಾನಿಕ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ ಹಾಗೂ ಗಣ್ಯರು ಉಪಸ್ಥಿತರಿದ್ದರು.