17 11 21 Ramanashree Award presented to Swami Japanandaji 2

ಪಾವಗಡ: ಸ್ವಾಮಿ ಜಪಾನಂದಜೀ ಮಹಾರಾಜ್ ರವರಿಗೆ ಪ್ರತಿಷ್ಠಿತ ರಮಣಶ್ರೀ ಶರಣ ಪ್ರಶಸ್ತಿ….!

DISTRICT NEWS ತುಮಕೂರು
ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರಿಗೆ ಪ್ರತಿಷ್ಠಿತ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ
ಬೆಂಗಳೂರು: –  ನಗರದ ಪ್ರತಿಷ್ಠಿತ ಹೋಟೆಲ್ ಆದ ರಮಣಶ್ರೀ ರಿಚ್ಮಂಡ್‍ನ ಅದ್ಧೂರಿ ಸಭಾಂಗಣದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ರವರು “ರಮಣಶ್ರೀ ಶರಣ ಪ್ರಶಸ್ತಿಯನ್ನು” ಪ್ರದಾನ ಮಾಡಿದರುಪೂಜ್ಯ ಸ್ವಾಮಿ ಜಪಾನಂದಜೀ ರವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ, ಫಲಕ ಹಾಗೂ ಗೌರವ ಸಮರ್ಪಣೆಯನ್ನು ಮಾನ್ಯ ಮುಖ್ಯಮಂತ್ರಿಗಳು ನೆರೆದ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಹಾಗೂ ಶ್ರೀ ರಮಣಶ್ರೀ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಶಸ್ತಿಯೊಂದಿಗೆ ಶಿವಶರಣರ ಹಾಗೂ ವಚನ ಸಾಹಿತ್ಯದ ವಿಚಾರಧಾರೆಗಳ ಅನುಷ್ಠಾನರೂಪಕ್ಕೆ ಹಾಗೂ ವಚನ ಸಾಹಿತ್ಯದ ವಿಚಾರದ ಪ್ರಚಾರಕ್ಕಾಗಿ ನೀಡುವಂತಹ ಪ್ರಶಸ್ತಿ ಇದಾಗಿದ್ದು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕಳೆದ ಮೂರು ದಶಕಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಜನಪರ ಸೇವಾ ಯೋಜನೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ ಎಂದು ಪ್ರಶಸ್ತಿಯನ್ನು ವಿತರಿಸುವ ಮುನ್ನ ಶ್ರೀ ಷಡಕ್ಷರಿ ರವರು ತಿಳಿಸಿದರು.
ಈ ಪ್ರಶಸ್ತಿಗೆ ಯಾವುದೇ ರೀತಿಯ ಅರ್ಜಿಗಳನ್ನು, ಶಿಫಾರಸ್ಸುಗಳನ್ನು ಆಹ್ವಾನಿಸದೆ ಕೇವಲ ಹಿರಿಯ ಚೇತನಾಶಕ್ತಿಗಳಿಂದ ಒಡಗೂಡಿರುವ ಸಮಿತಿಯು ಹಿರಿಯ ವಚನಕಾರರು, ಸಂಶೋಧನಾಕಾರರಾದ ಶ್ರೀ ಗೊ.ರು.ಚನ್ನಬಸಪ್ಪ, ಹಿರಿಯ ಪತ್ರಿಕೋದ್ಯಮಿಗಳಾದ ಶ್ರೀ ರವಿ ಹೆಗ್ಗಡೆ ರವರು, ಶ್ರೀ ವಿಶ್ವೇಶ್ವರ ಹೆಗ್ಗಡೆ ರವರು, ಶ್ರೀ ಮನು ಬಳಿಗಾರ್ ರವರನ್ನೊಳಗೊಂಡ ಸಮಿತಿಯು ಪೂಜ್ಯ ಸ್ವಾಮೀಜಿಯವರ ಸೇವಾ ಕಾರ್ಯಗಳನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿದರು.
ಪೂಜ್ಯ ಸ್ವಾಮಿ ಜಪಾನಂದಜಿ ರವರೊಡನೆ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ರವರು ಮಾತನಾಡುತ್ತಾ ಕೆಲವು ನಿಮಿಷ ಸಂಭಾಷಣೆ ನಡೆಸಿದರು. ಈ ಸಂಭಾಷಣೆಯಲ್ಲಿ ಪಾವಗಡದ ನೀರಿನ ಬವಣೆಯ ಹಿನ್ನೆಲೆಯಲ್ಲಿ ಪಾವಗಡದಿಂದ ಬೆಂಗಳೂರಿಗೆ ಪಾದಯಾತ್ರೆ (14-2-2012) ನಡೆಸಿದ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಯವರೊಂದಿಗೆ ಅಂದು ನಡೆಸಿದ ಸಮಾಲೋಚನೆಗಳನ್ನು ಮತ್ತು ಘಟನಾವಳಿಗಳನ್ನು ಮಾನ್ಯ ಮುಖ್ಯಮಂತ್ರಿ ರವರು ಸ್ವಾಮೀಜಿಯವರೊಂದಿಗೆ ನೆನಪಿಸಿಕೊಂಡರು. ಇದೇ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಯವರು ಮಾನ್ಯ ಮುಖ್ಯಮಂತ್ರಿಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡುವುದಾಗಿ ತಿಳಿಸಿದಾಗ ಮಾನ್ಯ ಮುಖ್ಯಮಂತ್ರಿಗಳು ಸಂತೋಷದಿಂದ ಒಪ್ಪಿ ಸದ್ಯದಲ್ಲಿಯೇ ಮಾತುಕತೆ ಮಾಡೋಣಾ ಎಂದು ತಿಳಿಸಿದರು.
ಒಟ್ಟಿನಲ್ಲಿ ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮ ಮತ್ತು ಅಂಗ ಸಂಸ್ಥೆಗಳ ಸೇವಾ ಕಾರ್ಯಗಳ ಪರಿಚಯ ಇಡೀ ನಾಡಿಗೆ ಮತ್ತೊಮ್ಮೆ ಆದಂತಿದೆ ಎಂದು ಪೂಜ್ಯ ಸ್ವಾಮೀಜಿಯವರು ತಿಳಿಸಿದರು.