ಅನಾರೋಗ್ಯದಿಂದ ಬಳಲುತ್ತಿರುವ ಕಾಂಗ್ರೆಸ್ ಮುಖಂಡರಾದ ಸೂರ್ಯನಾರಾಯಣ್ ರಾವ್ ಹಾಗೂ ಗಂಗಪ್ಪನವರನ್ನು ಆರೋಗ್ಯ ವಿಚಾರಿಸಿದ ಮಾಜಿ ಶಾಸಕ ಕೆ ಎನ್ ರಾಜಣ್ಣ…..
ಮಧುಗಿರಿ ತಾಲೂಕು ಐಡಿ ಹಳ್ಳಿ ಹೋಬಳಿ ತಿಪ್ಪಾಪುರ ಗ್ರಾಮಕ್ಕೆ ಮಾಜಿ ಶಾಸಕರು ತುಮಕೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಕೆ ಎನ್ ರಾಜಣ್ಣನವರು ಇಂದು ಆತ್ಮೀಯರು ಕಾಂಗ್ರೆಸ್ಸಿನ ಮುಖಂಡರುಗಳಾದ ಗಂಗಪ್ಪಹಾಗೂ ಸೂರ್ಯನಾರಾಯಣ್ ರಾವ್ ಅನಾರೋಗ್ಯದಿಂದ ಎಲ್ಲೋ ಬರದೇ ಇರುವ ಕಾರಣ ತಿಳಿದು ತಿಪಾಪುರ ಗ್ರಾಮದಲ್ಲಿ ಭೇಟಿ ಮಾಡಿ ಚೆನ್ನಾಗಿದ್ದೀರಾ ನಡೆದಾಡುವುದಕ್ಕೆ ಆಗುತ್ತಿದೀಯಾ ಮಾತನಾಡುತ್ತಗೆ ಆಗುತ್ತಿದೆಯಾ ಎಂದುಎ ಆರೋಗ್ಯದ ಬಗ್ಗೆ ವಿಚಾರಿಸಿದರು.
ತಿಪ್ಪಾಪುರ ಗ್ರಾಮಕ್ಕೆ ಕಾಂಗ್ರೆಸ್ ಮುಖಂಡರುಗಳ ಆರೋಗ್ಯವನ್ನು ವಿಚಾರಿಸಿ ಮಾತನಾಡಿದ ಮಾಜಿ ಶಾಸಕರಾದ ಕೆ ಎನ್ ರಾಜಣ್ಣ.ಗ್ರಾಮದಲ್ಲಿ ಏನಾದರೂ ಸಮಸ್ಯೆಗಳು ಇದೆಯೇ ಮುಖಂಡರುಗಳಲ್ಲಿ ಏನಾದ್ರೂ ಭಿನ್ನ ಅಭಿಪ್ರಾಯ ಇದಾವೆಯುವಕರು ಏನಾದರೂ ನನ್ನಲ್ಲಿ ಕೇಳುವ ವಿಚಾರ ಇದೆಯಾ ಸಂಕೋಚವಿಲ್ಲದೆ ತಾವು ಸಮಸ್ಯೆಗಳನ್ನು ಮತ್ತು ಭಿನ್ನಾಭಿಪ್ರಾಯಗಳನ್ನು ಕೇಳಬಹುದೆಂದು ಹೇಳಿದರು. ಯುವಕರು ಮಾತನಾಡಿ ನಮಗೆ ಚರಂಡಿ ವ್ಯವಸ್ಥೆ ಬೇಕು ಮತ್ತು ನಮ್ಮ ದೇವಸ್ಥಾನ ಕಟ್ಟಿಸಿಕೊಡಬೇಕು ಎಂದು ಕೇಳಿದಾಗ ಉತ್ತರಿಸಿದ ಕೆ ಎನ್ ರಾಜಣ್ಣನವರು ನಾವು ಅಧಿಕಾರದಲ್ಲಿ ಈಗ ಇಲ್ಲ ನೀವು ಯುವಕರೇನಿದ್ದಿರಿ ಹಾಗೂ ಮುಖಂಡರುಗಳೆನಿದ್ದಿರಿ ಎಲ್ಲರೂ ತಮ್ಮ ತಮ್ಮ ವೈಯಕ್ತಿಕ ವಿಚಾರಗಳನ್ನು ಬಿಟ್ಟು ಎಲ್ಲರೂ ಒಗ್ಗೂಡಿ ಸೇರಿ ನನಗೆ ಮತ ನೀಡಿ ಗೆಲ್ಲಿಸಿದರೆ ನಮ್ಮ ಎಲ್ಲಾ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ತಿಳಿಸಿದರು. ನಾನು ಶಾಸಕನಾಗಿ ಅಧಿಕಾರ ಅವಧಿಯಲ್ಲಿ ಮಾಡಿರುವ ಎಲ್ಲಾ ಕೆಲಸಗಳು ತಮ್ಮ ಕಣ್ಮುಂದೆ ಗೋಚರಿಸುತ್ತಿವೆ ಇವುಗಳನ್ನು ಗಮನದಲ್ಲಿಟ್ಟುಕೊಂಡು ಬೇರೆ ಬೇರೆ ಕಡೆಯಿಂದ ಈ ಕ್ಷೇತ್ರಕ್ಕೆ ಬಂದು ಇಲ್ಲಸಲ್ಲದ ಆಮಿಷಗಳನ್ನು ಒಡ್ಡಿ ಹಣ ಚೆಲ್ಲಿ ನಿಮನ್ನು ದಾರಿ ತಪ್ಪಿಸಿ ನಿಮ್ಮಿಂದ ಮತ ಪಡೆದುಕೊಂಡು ಹೋಗಿ ಗ್ರಾಮಗಳ ಏಳಿಗೆಗೆ ಶ್ರಮಿಸಿ ಇರೋದಿಲ್ಲ ಎಂದರು.
ಮತ್ತು ಈ ಗ್ರಾಮದ ತಾಯಂದಿರು ಹೆಣ್ಣು ಮಕ್ಕಳು ಏನಿದ್ದೀರಾ ಹಾಗೂ ತಾಲೂಕಿನ ಮಹಿಳೆಯರು ಸೀರೆ ಹಂಚಿಕೆಗೆ ಬೆರಗಾಗಿ ಮತದಾನ ಮಾಡಿರುತ್ತೀರಾ. ನಾನು ಶಾಸಕನಾಗಿದ್ದರೆ ಈ ತಾಲೂಕುನ್ನು ಜಿಲ್ಲೆ ಮಾಡುತ್ತಿದ್ದೆ ಬೆಟ್ಟಕ್ಕೆ ರೂಫ್ಫೆ ಎತ್ತಿನಹೊಳೆ ಕಾಮಗಾರಿ ಅತಿ ತುರ್ತಾಗಿ ಕೆಲಸ ನಡೆಯುತ್ತಿತ್ತು. ಇದೆಲ್ಲವನ್ನು ಮನಗಂಡು ಮುಂದಿನ ಚುನಾವಣೆಯಲ್ಲಿ ನನಗೆ ಅತಿ ಹೆಚ್ಚು ಬಹುಮತ ನೀಡಿ ಗೆಲ್ಲಿಸಿದ್ದೆ ಆದಲ್ಲಿ ನಿಮ್ಮ ಕೆಲಸಗಳು ಮತ್ತು ಸಮಸ್ಯೆಗಳು ಏನೇ ಇದ್ದರೂ ಕೂಡ ನಾನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸೌಹಾರ್ದ ಭೇಟಿಯ ಸಂದರ್ಭದಲ್ಲಿ ದೊಡ್ಡ ಯಲ್ಕೂರು ಗ್ರಾಮ ಪಂಚಾಯಿತಿಯ ಮುಖಂಡರಾದ ಎನ್ ರಾಜ ಮೋಹನ್. ಇಂದಿರಾ ದೇನೇ ನಾಯಕ್, ಪಿಟಿ ಗೋವಿಂದಪ್ಪ, ಕೆ ಶ್ರೀನಿವಾಸ್ ರೆಡ್ಡಿ ಐಡಿ ಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎನ್ ನರಸಿಂಹ ರೆಡ್ಡಿ, ಸುಬ್ಬರಾಯಪ್ಪ ಬಸ ರೆಡ್ಡಿ, ನರಸಿಂಹಮೂರ್ತಿ ಚೌಡಪ್ಪ ಗಂಗಾಧರ್ ಗ್ರಾಮ ಪಂಚಾಯತಿ ಸದಸ್ಯರಾದ ಭೀಮ ನಾಯಕ್, ಜಾನಕಿ ರಾಮಯ್ಯ. ಸಂಜೀವಪ್ಪ ರಮೇಶ್ ವಾಲೆ ನಾಯಕ್ ಕಾಂಗ್ರೆಸ್ಸಿನ ಮುಖಂಡರುಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು.