ತೆಲುಗು ಸಿನಿಮಾ ರಂಗದ ರೆಬೆಲ್ ಸ್ಟಾರ್ ಎಂದೇ ಖ್ಯಾತರಾಗಿದ್ದ ಉಪ್ಪಲಪತ್ತಿ ವೆಂಕಟ ಕೃಷ್ಣಂರಾಜು (83 ವರ್ಷ) (Krishnam Raju) ಭಾನುವಾರ ನಸುಕಿನ 3:25ಕ್ಕೆ ತಮ್ಮ ನಿವಾಸದಲ್ಲಿ ನಿಧನರಾಗಿದ್ದು ಈ ಬಗ್ಗೆ ಕುಟುಂಬದ ಮೂಲಗಳು ಮಾಹಿತಿ ನೀಡಿವೆ.
ತೆಲುಗು ಚಿತ್ರರಂಗದ ದಿಗ್ಗಜ ನಟ ಕೃಷ್ಣಂರಾಜು ಅವರು ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 83 ವರ್ಷದ ನಟ ಹೈದರಾಬಾದ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. ಕೃಷ್ಣಂರಾಜು ನಿಧನಕ್ಕೆ ಹಲವು ಸಿನಿ ನಟರು, ಗಣ್ಯರು ಮತ್ತು ಅಭಿಮಾನಿಗಳು ಟ್ವೀಟ್ ಮೂಲಕ ತಮ್ಮ ಸಂತಾಪ ಸಂದೇಶ ಹಂಚಿಕೊಂಡಿದ್ದಾರೆ.
ಉಪ್ಪಲಪತಿ ವೆಂಕಟ ಕೃಷ್ಣಮರಾಜು (ಜನವರಿ 20, 1940 – ಸೆಪ್ಟೆಂಬರ್ 11, 2022) ಒಬ್ಬ ತೆಲುಗು ಚಲನಚಿತ್ರ ನಟ ಮತ್ತು ರಾಜಕಾರಣಿ. ಅವರು ಜನವರಿ 20, 1940 ರಂದು ಜನಿಸಿದರು. ಅವರು 1970 ಮತ್ತು 1980 ರ ದಶಕಗಳಲ್ಲಿ 183 ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಆ ನಂತರ ಅವರು ರಾಜಕೀಯ ಪ್ರವೇಶಿಸಿದರು.
ಅವರು 12 ನೇ ಲೋಕಸಭೆ ಚುನಾವಣೆಯಲ್ಲಿ ಕಾಕಿನಾಡ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಪರವಾಗಿ ಗೆದ್ದರು. ಆ ನಂತರ ನರಸಾಪುರಂ ಲೋಕಸಭಾ ಕ್ಷೇತ್ರದಿಂದ 13ನೇ ಲೋಕಸಭೆಗೆ ಆಯ್ಕೆಯಾಗಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಸ್ಥಾನ ಪಡೆದರು. ಅವರು ಮಾರ್ಚ್ 2009 ರಲ್ಲಿ ಭಾರತೀಯ ಜನತಾ ಪಕ್ಷವನ್ನು ತೊರೆದು ಪ್ರಜಾರಾಜ್ಯಂ ಪಕ್ಷಕ್ಕೆ ಸೇರಿದರು. ಮುಂದಿನ ಚುನಾವಣೆಯಲ್ಲಿ ರಾಜಮಂಡ್ರಿಯಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದರು
ಖ್ಯಾತ ನಟ ಪ್ರಭಾಸ್ ಕೃಷ್ಣಂರಾಜ್ ಅವರ ಕಿರಿಯ ಸಹೋದರ ಸೂರ್ಯನಾರಾಯಣರಾಜ ಅವರ ಪುತ್ರ. ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ತೂರು ಕೃಷ್ಣಂರಾಜು ಅವರ ಕುಟುಂಬದ ಹುಟ್ಟುರು. ಶ್ಯಾಮಲಾ ದೇವಿ ಕೃಷ್ಣರಾಜನ ಪತ್ನಿ. ಅವರು 21 ನವೆಂಬರ್ 1996 ರಂದು ವಿವಾಹವಾದರು. ಅವರಿಗೆ ಪ್ರಸಿದಿ, ಪ್ರಕೀರ್ತಿ ಮತ್ತು ಪ್ರದೀಪ್ತಿ ಎಂಬ ಮೂವರು ಪುತ್ರಿಯರಿದ್ದಾರೆ.