ಶಾಲೆಗಳ ಪರಿಶೀಲನೆ
ಫಾವಗಡ: ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲೂಕಿನಾದ್ಯಂತ ಇರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸರ್ಕಾರದ S.O.P ನಿಯಮಗಳನ್ನು ಪರಿಶೀಲಿಸುವ ಸಲುವಾಗಿ ಹಾಗೂ ಮಕ್ಕಳ ಆರೋಗ್ಯ ಸ್ಥಿತಿ, ಶಾಲೆಯ ನೈರ್ಮಲ್ಯ ಗಳ, ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳಲು ಶಿಕ್ಷಣ ಇಲಾಖೆಯ 10 ಅಧಿಕಾರಿ ತಂಡಗಳನ್ನು ರಚನೆ ಮಾಡಿದ್ದರು
ಈ ತಂಡವು ತಾಲೂಕಿನಾದ್ಯಂತ ವಿವಿಧ ಶಾಲೆ ಗಳಿ ಗೆ ಭೇಟಿ ಪರಿಶೀಲಿಸಿದರು..ಶಾಲೆಯ ಮುಖ್ಯ ಶಿಕ್ಷಕರಿಗೆ, ಸಹಶಿಕ್ಷಕರಿಗೆ, ಹಾಗೂ ವಿದ್ಯಾರ್ಥಿಗಳಿಗೆ, S.O.P ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು
ಮಕ್ಕಳು ಮನೆಯಿಂದ ಬಿಸಿ ನೀರನ್ನು ತರಬೇಕು ಹಾಗೂ ಶಾಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬ ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆ ಕಂಡು ಬಂದರೆ ಶಿಕ್ಷಕರು ತಕ್ಷಣ ಆರೋಗ್ಯ ಇಲಾಖೆಯವರಿಗೆ ತಿಳಿಸಬೇಕು ಎಂದರು.
ವರದಿ: ಶ್ರೀನಿವಾಸುಲು ಎ