ಸಾರ್ವಜನಿಕ ಸ್ಥಳದಲ್ಲಿ ನಿರ್ಮಿಸಬೇಕಿದ್ದ ಭದ್ರಾ ನೀರಿನ ಓವರ್ ಹೆಡ್ ಟ್ಯಾಂಕ್ , ಖಾಸಗಿ ಬಡಾವಣೆಯಲ್ಲಿ ನಿರ್ಮಾಣ, ಸ್ಥಳೀಯರ ಆಕ್ರೋಶ.
ಪಾವಗಡ ಜೂನ್ ೧೧: ಟಿ.ಎನ್ ಪೇಟೆಯಲ್ಲಿ ಭದ್ರಾ ನೀರು ಹರಿಸುವ ಓವರ್ ಹೆಡ್ ಟ್ಯಾಂಕನ್ನು ಖಾಸಗಿ ಬಡಾವಣೆಯಲ್ಲಿ ನಿರ್ಮಾಣ ಮಾಡುತ್ತಿರುವುದನ್ನ ಸಾರ್ವಜನಿಕರು ವಿರೋಧಿಸಿ ಪ್ರತಿಭಟಿಸಿದ ಘಟನೆ ಪಾವಗಡ ತಾಲ್ಲೂಕಿನ ರೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಹಲ ವರ್ಷಗಳಿಂದ ಸಮರ್ಪಕ ಮಳೆ, ಬೆಳೆಯಾಗದೆ ಬರಗಾಲದ ಛಾಯೆ ಪಾವಗಡ ತಾಲ್ಲೂಕನ್ನು ಆವರಿಸಿದೆ. ಶುದ್ಧ ಕುಡಿಯುವ ನೀರಿನ ಅಭಾವಂತೂ ಪೆಡಂಭೂತವಾಗಿ ಕಾಡಿದ್ದಿದೆ. ಅಲ್ಪ ಸ್ವಲ್ಪ ಕುಡಿಯಲು ನೀರು ಸಿಕ್ಕರೂ ಅದೂ ಕೂಡ ಪ್ಲೋರೈಡ್ ಮಿಶ್ರಿತ ವಿಷಯುಕ್ತ ನೀರು ಅದೇ ನೀರನ್ನೇ ಕುಡಿದು ಜೀವಿಸೊ ಹೀನಾಯ ಸ್ಥಿತಿ ತಾಲ್ಲೂಕಿನ ಜನರದ್ದು. ಇದರ ಪರಿಣಾಮ ಅನೇಕರು ಅನೇಕ ರೋಗ ಗಳಿಗೆ ತುತ್ತಾಗುತ್ತಿದ್ದಾರೆ.ಚಿಕ್ಕ ವಯಸ್ಸಿಗೆ ಅಂಗಾಂಗಗಳ ವೈಫಲ್ಯಕ್ಕೆ ತುತ್ತಾಗುತ್ತಿದ್ದಾರೆ. ಆಗಾಗಿ
ಹೇಗಾದರೂ ಮಾಡಿ ತಾಲ್ಲೂಕಿಗೆ ಕುಡಿಯುವ ಭದ್ರಾ ನದಿ ನೀರನ್ನು ತರಬೇಕು ಎನ್ನುವ ಹೋರಾಟದ ಫಲವೇ ಇಂದು ಪಾವಗಡ ತಾಲ್ಲೂಕಿನ ಪ್ರತಿ ಹಳ್ಳಿಗಳಿಗೂ ತುಂಗಾ ಭದ್ರಾ ನಡಿ ನೀರು ಸರಬರಾಜು ಮಾಡುವ ಓವರ್ ಹೆಡ್ ಟ್ಯಂಕರ್ಗಳನ್ನು ನಿರ್ಮಿಸುವ ಗುರಿ ಇದೆ. ಆದರೆ ಇತ್ತೀಚಿಗೆ ಸಾರ್ವಜನಿಕರ ಹಿತಾಸಕ್ತಿಗಿಂತ ಅಧಿಕಾರಿಗಳ ಸ್ವಹಿತಾಸಕ್ತಿಗಳೇ ಮೇಲುಗೈ ಸಾದೀಸುತ್ತಿವೆ. ಅದಕ್ಕೆ ನೈಜ ನಿದರ್ಶನವೆಂದರೆ ಪಾವಗಡ ತಾಲ್ಲೂಕಿನ ಟಿ.ಎನ್ ಪೇಟೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ಸ್ಥಳದಲ್ಲಿ ನಿರ್ಮಿಸಬೇಕಿದ್ದ ನೀರು ಸಂಗ್ರಹ ಟ್ಯಾಂಕನ್ನು ಯಾವುದೋ ಖಾಸಗಿ ಲೇಜೌಟ್ ನಲ್ಲಿ ನಿರ್ಮಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡುವುದರ ಜೊತೆಗೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಇಂಜಿನೀಯರ್ ಬಸವಲಿಂಗಪ್ಪ ಅವರನ್ನು ವಿಚಾರಿಸಿದ್ರೆ ಟಿ.ಎನ್ ಪೇಟೆಯಲ್ಲಿ ಟ್ಯಾಂಕ್ ನಿರ್ಮಿಸಲು ಸ್ಥಳಾವಕಾಶವಿಲ್ಲ ಆಗಾಗಿ ಖಾಸಗಿ ಬಡಾವಣೆಯಲ್ಲಿಯೇ ನಿರ್ಮಿಸುವಂತೆ ಸೂಚಿಸಿ ರೊಪ್ಪ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಪತ್ರ ಬರೆದಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ . ಈ ವಿಷಯದಲ್ಲಿ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜನ ಸಾಮಾನ್ಯರ ಸಲಹೆ ಸೂಚನೆಗಳನ್ನು ಸ್ವೀಕರಿಸದೆ ಏಕಾಏಕಿ ಇಂತಹ ಸರ್ವಾಧಿಕಾರದ ನಿರ್ಣಯಗಳನ್ನು ತೆಗೆದುಕೊಂಡು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವುದು ಜನ ಸಾಮಾನ್ಯರ ಆಕ್ರೋಶಕ್ಕೆ ದಾರಿ ಮಾಡಿ ಕೊಟ್ಟಿದೆ.
ಈ ಕೂಡಲೇ ಖಾಸಗಿ ಬಡಾವಣೆಯಲ್ಲಿ ನಿರ್ಮಿಸುತ್ತಿರುವ ನೀರು ಶೇಖರಿಸೊ ಟ್ಯಾಂಕನ್ನು ಸ್ಥಗಿತಗೊಳಿಸಿ..ಸಾರ್ವಜನಿಕ ಹಿತಾಸಕ್ತಿ ಸ್ಥಳದಲ್ಲಿಯೇ ನಿರ್ಮಿಸಬೇಕಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಟಿ.ಎನ್ ಪೇಟೆ ಗ್ರಾಮದ ಜನರು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರಾಮಪ್ಪ,ಎಸ್ ನಾರಾಯಣಪ್ಪ, ನವೀನ್, ಉದಯ್, ಕೊಲ್ಲಪ್ಪ,ಶ್ರೀಕಾಂತ್, ಗಂಗಾಧರ್, ಅನಿಲ್, ಶಶಿ ಹಲವಿದ್ದರು.
ವರದಿ: ನವೀನ್ ಕಿಲಾರ್ಲಹಳ್ಳಿ