ಕೊರೋನಾ ಸೋಂಕಿತರ ಮನೆಗೆ ಬೇಟಿ ನೀಡಿ ಜಾಗೃತಿ
ವೈ.ಎನ್.ಹೊಸಕೋಟೆ : ಹೋಬಳಿ ಪೋತಗಾನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಿಡಿಓ ಮತ್ತು ಆಶಾ ಕಾರ್ಯಕರ್ತರು ಮಂಗಳವಾರದಂದು ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಕೋರೋನಾ ಸೋಂಕಿತರ ಮನೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಪಿಡಿಓ ಮುತ್ಯಾಲಪ್ಪ ಪ್ರತಿ ಕೊರೋನಾ ಸೋಂಕಿತರಿಗೆ ಮಾರ್ಗಸೂಚಿಗಳನ್ನು ವಿವರಿಸುತ್ತಾ, ಕೊರೋನಾ ಬಗ್ಗೆ ಭಯ ಬೇಡ. ದೈರ್ಯದಿಂದ ಇರಿ. ಆರೋಗ್ಯ ಇಲಾಖೆಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ. ಗುಣಮುಖರಾಗುವವರೆಗೆ ಮನೆ ಬಿಟ್ಟು ಬೇರೆಡೆ ಹೋಗಬೇಡಿ. ಇದರಿಂದ ಮತ್ತೊಬ್ಬರಿಗೆ ಸೋಂಕು ಹರಡಿ ತೊಂದರೆಯಾಗುತ್ತದೆ ಎಂದು ತಿಳಿಸಿದರು.
ಮುಖಂಡ ಆರ್.ಡಿ.ರೊಪ್ಪದ ಆನಂದ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕೋರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕಾಗಿ ಸರ್ಕಾರ ಉತ್ತಮ ಕ್ರಮಗಳನ್ನು ಅನುಸರಿಸುತ್ತಿದೆ. ಶಾಸಕರ ಪ್ರೋತ್ಸಾಹ, ಪಿಡಿಓ ಮತು ಸದಸ್ಯರ ಸಹಕಾರದಿಂದ ಗ್ರಾಮಪಂಚಾಯಿತಿಯಲ್ಲಿ ಕೊರೋನಾ ನಿಯಂತ್ರಣಕ್ಕೆ ಉತ್ತಮ ಕಾರ್ಯಗಳು ನಡೆಯುತ್ತಿದ್ದು, ಕೊರೋನಾ ಮುಕ್ತ ಗ್ರಾಮಗಳನ್ನಾಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಪಂಚಾಯಿತಿ ವ್ಯಾಪ್ತಿಯ ಪೋತಗಾನಹಳ್ಳಿ, ಹೊಸದುರ್ಗ, ಆರ್.ಡಿ.ರೊಪ್ಪ, ಭೀಮನಕುಂಟೆ, ದಳವಾಯಿಹಳ್ಳಿ, ಕುಣಿಹಳ್ಳಿ ಮತ್ತು ಇಂದ್ರಬೆಟ್ಟ ಗ್ರಾಮಗಳಿಗೆ ಬೇಟಿ ನೀಡಿ ಕೊರೋನಾ ಸೋಂಕಿತರಿಗೆ ಸ್ಯಾನಿಟೈಸರ್ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷೆ ನಾಗಮ್ಮಪಾತಲಿಂಗಪ್ಪ, ಉಪಾಧ್ಯಕ್ಷ ಚನ್ನಾರೆಡ್ಡಿ, ಸದಸ್ಯರಾದ ಜ್ಯೋತಿಆನಂದಕುಮಾರ್, ಶಿವಣ್ಣ, ಉಗ್ರನರಸಿಂಹಪ್ಪ, ಮಂಜುಳಾಮಂಜುನಾಥ, ರಘು ಮುಖಂಡರಾದ ದಿವಾಕರಪ್ಪ, ಮಹಲಿಂಗಪ್ಪ, ಪೂಜಾರಿ ತಿಮ್ಮಯ್ಯ, ಸಿಬ್ಬಂದಿ ಮಂಜುನಾಥ, ಮಾರಪ್ಪ, ಹನುಮೇಶ್ ಮತ್ತು ಆಶಾ ಕಾರ್ಯಕರ್ತರು ಇದ್ದರು.
ವರದಿ: ಸತೀಶ್