IMG 20210530 WA0005

ಪಾವಗಡ: ಆಶಾ ಕಾರ್ಯಕರ್ತರಿಗೆ ದಿನಸಿ ಕಿಟ್ ವಿತರಣೆ…!

DISTRICT NEWS ತುಮಕೂರು

ಪಾವಗಡ : ತಾಲ್ಲೂಕಿನ ಸುಮಾರು  240 ಆಶಾ ಕಾರ್ಯಕರ್ತರಿಗೆ  ದಿನಸಿ ಕಿಟ್ ಹಾಗೂ ಮಾಸ್ಕ್ ವಿತರಣಾ ಕಾರ್ಯಕ್ರಮವನ್ನು  ಪಾವಗಡದ ಎಸ್ ಎಸ್ ಕೆ ಬಯಲು ಮಂದಿರದಲ್ಲಿ   ಬ್ಲಾಕ್ ಕಾಂಗ್ರೆಸ್ ವತಿಯಿಂದ  ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ವೆಂಕಟರಮಣಪ್ಪ ನವರು ಮಾತನಾಡುತ್ತಾ, ಕೊರೋನ ಸಾಂಕ್ರಾಮಿಕ ರೋಗದ ಪಾಸಿಟಿವ್ ಬಂದ ವ್ಯಕ್ತಿಯನ್ನು ಮಾತನಾಡಿಸಲು ಸಹ ಹೆದರುವಂತಹ ಸನ್ನಿವೇಶದಲ್ಲಿ ಅವರ ಮನೆಗೆ ಹೋಗಿ ಅವರ ಯೋಗಕ್ಷೇಮವನ್ನು ವಿಚಾರಿಸಿ ತಮ್ಮ ಪ್ರಾಣದ ಹಂಗನ್ನು ತೊರೆದು ಅವರನ್ನು ನೇರವಾಗಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡುವ ಕಾರ್ಯ ಆಶಾ ಕಾರ್ಯಕರ್ತರ ಸೇವೆ ನಿಜಕ್ಕೂ ಶ್ಲಾಘನೀಯ
ತಾಲೂಕಿನ ಯಾವುದೇ ಗ್ರಾಮಗಳಲ್ಲಿ 4 ರಿಂದ5 ಜನಕ್ಕೆ ಕೊರೋನ ಪಾಸಿಟಿವ್ ಕಾಣಿಸಿಕೊಂಡರೆ ಸದರಿ ಗ್ರಾಮದಲ್ಲಿರುವ ಸರಕಾರಿ ಶಾಲೆಗಳನ್ನು ಕೊರೋನ ಕೆರ್ ಸೆಂಟರ್ ಗಳನ್ನಾಗಿ ಪರವರ್ತಿಸಿ, ಪಾಸಿಟಿವ್ ಬಂದಂತ ವ್ಯಕ್ತಿಗಳನ್ನು ಕರೆತಂದು ಸೂಕ್ತ ಚಿಕಿತ್ಸೆ ನೀಡ ಬೇಕು ಕೋವಿಡ್ – 19 ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಕೊರೋನಾ ಸೋಂಕು ಭೀತಿಯಿಂದ ಪ್ರತಿಯೊಬ್ಬರೂ ಆಂತಕದಲ್ಲಿದ್ದಾಗ ಆಶಾ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುವುದಲ್ಲದೇ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ 4 ತಿಂಗಳಿಂದ ಸಂಬಳ ಇಲ್ಲದಿದ್ದರೂ ಸೇವೆ ಸಲ್ಲಿಸುತ್ತಿದ್ದಾರೆ ಆಶಾ ಕಾರ್ಯಕರ್ತೆಯರಿಗೆ ಇಂದು ಪ್ರತಿಯೊಬ್ಬರು ಗೌರವ ಸಲ್ಲಿಸಬೇಕು.IMG 20210530 WA0004

ಜನಸಾಮಾನ್ಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ಸಲ್ಲಿಸುತ್ತಿರುವ ಸೇವೆ ಅನನ್ಯವಾದದ್ದು ಅವರ ಸೇವೆಯನ್ನು ಗುರುತಿಸಿ ಇಂದು ನನ್ನ ಕೈಲಾದಷ್ಟು ಸಹಾಯ ಹಸ್ತ ನಿಡುತ್ತಿದ್ದೇನೆ ಈ ತಾಲೂಕಿನ ಜನತೆಯ ಋಣ ತೀರಿಸುವ ಕೆಲಸ ನನ್ನದು ಜನ ಸೇವೆ ಜನಾರ್ಧನ ಸೇವೆ ಎಂದು ಕೆಲಸ ಮಾಡುವುದಕ್ಕೆ ಮುಂದೆ ಬಂದಿದ್ದೇವೆ ಗ್ರಾಮಗಳಲ್ಲಿ ಕೊರೋನ ವೈರಸ್ ಹೆಚ್ಚಾಗಬಾರದು ಎಂದು ಈ ನಿಟ್ಟಿನಲ್ಲಿ ಗ್ರಾಮಪಂಚಾಯಿತಿಯ ಪಿಡಿಒ ಮತ್ತು ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳ ಬೇಕು. 15 ನೇ ಹಣಕಾಸಿನ ಯೋಜನೆಯ ಅನುದಾನವನ್ನು ಇವರ ಚಿಕಿತ್ಸೆ ಮತ್ತು ಊಟ ತಿಂಡಿ ನಿದ್ದೆ ಎಲ್ಲಾ ರೀತಿಯ ಸೌಲಭ್ಯ ಇದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತಿ ಸದಸ್ಯರಾದ ಎಚ್ ವಿ ವೆಂಕಟೇಶ್ ಮಾತನಾಡುತ್ತಾ, ತಾಲೂಕಿನ ಜನತೆ ಕೋರೋಣ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಅನೇಕ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ.

ಕೊರೋನ ಸೋಂಕಿತರನ್ನು ಕೆರೆ ತರಲು ಎರಡು ಆಂಬುಲೆನ್ಸ್ ಗಳನ್ನು ಉಚಿತವಾಗಿ ನೀಡಲಾಗಿದೆ ಮತ್ತು ಶವ ಸಂಸ್ಕಾರಕ್ಕಾಗಿ ಜೆಸಿಬಿ ಯಂತ್ರಯನ್ನು ಸಹಾ ಉಚಿತವಾಗಿ ನೀಡಲಾಗಿದೆ ಮತ್ತು 50 ಲಕ್ಷ ರೂಪಾಯಿಗಳನ್ನು ಆಕ್ಸಿಜನ್ ತಯಾರಿಕಾ ಘಟಕಕ್ಕೆ ನೀಡಲಾಗಿದೆ. ಸುಮಾರು15 ದಿನಗಳಿಂದ ತಾಲ್ಲೂಕಿನಲ್ಲಿ ವಿವಿದ ಭಾಗಗಳಲ್ಲಿ ಒಂದು ದಿನಕ್ಕೆ 1000 ಜನಕ್ಕೆ ಊಟ ನೀಡಲಾಗುತ್ತದೆ ಕೊರೊನಾ ಸಂಕಷ್ಟದ ಸಂದರ್ಭದಲ್ಲಿಅನನ್ಯ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯವಾಗಿದೆ.ಇಂತಹ ಸಂಕಷ್ಟದಲ್ಲಿಯೂ ಜನರ ಆರೋಗ್ಯ ರಕ್ಷಣೆಯಲ್ಲಿ ಸದಾ ತೊಡಗಿಸಿಕೊಂಡ ಆಶಾ ಕಾರ್ಯಕರ್ತೆಯರಿಗೆ ನನ್ನ ಧನ್ಯವಾದಗಳು ಎಂದರು.

ಮುಂದೆ ಯಾರೂ ಯಾರು ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದ್ದಾರೆ ಅವರಿಗೆಲ್ಲಾ ಮುಂದಿನ ದಿನಗಳಲ್ಲಿ ಸನ್ಮಾನಿಸಲಾಗುವುದು ನನ್ನ ಮತ್ತು ನನ್ನ ತಂದೆ ಈ ತಾಲೂಕಿಗೆ ಒಂದು ಅಳಿಲು ಸೇವೆ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಶಾಸಕರಾದ ವೆಂಕಟರಮಣಪ್ಪ ಮತ್ತು ಜಿಲ್ಲಾ ಪಂಚಾಯತಿ ಸದಸ್ಯ ರಾದ ವೆಂಕಟೇಶ್ ಅವರು ಕಾರ್ಯಕ್ರಮ ವನ್ನು ಆಯೋಜಿಸಿದ್ದರು.

ಬ್ಲಾಕ್ ಕಾಂಗ್ರೆಸ್  ಪಾವಗಡ ನಗರ ಅಧ್ಯಕ್ಷ ರಾದ ಸುರೇಶ್ ಬಾಬು ,ಪುರಸಭಾ ಅಧ್ಯಕ್ಷರಾದ ರಾಮಾಂಜಿನಪ್ಪ ಪುರಸಭೆ ಸದಸ್ಯರಾದ ರವಿ ರಾಜೇಶ್ ವೆಂಕಟರವಣಪ್ಪ ಸುಬ್ರಹ್ಮಣ್ಯಂ. ವೇಲು ರಾಜ್. ಪುರಸಭೆ ಮಾಜಿ ಅಧ್ಯಕ್ಷ ಶಂಕರ್ ರೆಡ್ಡಿ ಮುಖಂಡರಾದ ಪ್ರಮೋದ್ ಕುಮಾರ್. ಅಲಿ. ಶ್ರೀನಿವಾಸ.ಕನಿಕಲಬಂಡೆ ಅನಿಲ್. ಪಳವಳ್ಳಿ ಶಿವ. ಪಾಪಣ್ಣ. ಹರೀಶ್. ಪಾವಗಡ ಯುವ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷರಾದ ಸುಜಿತ್,ನಗರ ಅಧ್ಯಕ್ಷರಾದ ಮಹೇಶ್ ಜಿ, ಎಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಇನ್ನು ಹಲವಾರು ಮಂದಿ ಭಾಗವಹಿಸಿದ್ದರು.

ವರದಿ – ಬುಲೆಟ್ ವೀರಸೇನಯಾದವ್.