ಆಕಸ್ಮಿಕ ಬೆಂಕಿ ತಗಲಿ ಎರಡು ಗುಡಿಸಲುಗಳು ಭಸ್ಮ
ಮಧುಗಿರಿ. ಐ.ಡಿ.ಹಳ್ಳಿ ಹೋಬಳಿ ಶ್ರೀನಿವಾಸಪುರ ಗ್ರಾಮದ ವಾಸಿಗಳಾದ ಮಲ್ಲಣ್ಣ ಬಿನ್ ಮಲ್ಲಣ್ಣ ಮಕ್ಕಳಾದ ಸಕ್ಕಣ್ಣ ಬಿನ್ ಮಲ್ಲಣ್ಣ ನಾಗಣ್ಣ ಬಿನ್ ಮಲ್ಲಣ್ಣ ಇವರುಗಳು ಶ್ರೀನಿವಾಸಪುರ ಗ್ರಾಮದ ಸರ್ವೆ ನಂಬರ್ 55ರಲ್ಲಿ ತೆಂಗಿನ ಗರಿಗಳಿಂದ ವಾಸ ಮಾಡಲು ಗುಡಿಸಲು ನಿರ್ಮಾಣ ಮಾಡಿ ಕೊಂಡಿರುತ್ತಾರೆ. ದಿನಾಂಕ 29 .9 .2023 ರಂದು 6.30 ರ ಸಮಯದಲ್ಲಿ ಇದ್ದಕ್ಕಿದ್ದಂತೆ ಗುಡಿಸಲುಗಳಿಗೆ ಬೆಂಕಿ ತಗಲಿ ಎರಡುಗೂಡಿಸಲು ಸಂಪೂರ್ಣವಾಗಿ ಭಸ್ಮವಾಗಿರುತ್ತವೆ. ಗುಡಿಸಲುಗಳಿದಂತಹ ದವಸ ಧಾನ್ಯಗಳು ಇನ್ನಿತರ ಗೃಹ ಉಪಯೋಗಿವಸ್ತುಗಳು ಸುಟ್ಟುವಾಗಿರುತ್ತವೆ ಮತ್ತು ಎರಡು ಕುಟುಂಬಗಳ ಯಜಮಾನರುಗಳ ಮತ್ತು ಸೊಸೆಯಂದಿರ ಮೊಮ್ಮಕ್ಕಳ ಆಧಾರ್ ಕಾರ್ಡುಗಳು ಬ್ಯಾಂಕ್ ಪಾಸ್ ಪುಸ್ತಕಗಳು ಮತ್ತು ಕುರಿ ಮರಿಗಳು ಮಾರಿಕೊಂಡು ಬಂದಿರುವ ರೂ.30000 ಹಣವು ಸಹ ಸಂಪೂರ್ಣವಾಗಿ ಸುಟ್ಟು ಹೋಗಿರುತ್ತದೆ.
ಈ ಒಂದು ಘಟನೆಗೆ ಸಂಬಂಧಿಸಿದಂತೆ ಮಿಡಿಗೇಶಿ ಪೊಲೀಸ್ ಠಾಣೆಗೆ ದೂರು ನೀಡಿದಾಗ ಘಟನೆ ಸ್ಥಳಕ್ಕೆ ಎ. ಎಸ್ .ಐ ಪ್ರಕಾಶ.ಭೇಟಿ ನೀಡಿ ಪರಿಶೀಲನೆ ಮಾಡಿ ಸುಮಾರು 90 ಸಾವಿರಗಳಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ವಿಚಾರವಾಗಿ ದೂರು ದಾಖಲಿಸಿಕೊಂಡು 30. 9. 2023 ರಂದು ಸಮಯ 2:30ಕ್ಕೆ ಎಫ್. ಐ. ಆರ್. ದಾಖಲು ಮಾಡಿ ದೂರುದಾರರಿಗೂ ಸಹ ಎಫ್.ಐ.ಆರ್ .ಪ್ರತಿಯನ್ನು ಕೂಡ ದೂರುದಾರರಿಗೆ ನೀಡಿರುತ್ತಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಆರ್. ಐ. ಚಿಕ್ಕ ರಾಜು ರವರು ಆ ವ್ಯಾಪ್ತಿಗೆ ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿ ಕಿರಣ್ ಕುಮಾರ್ ಗೆ ಫೋನ್ ಮುಖಾಂತರ ಕರೆ ಮಾಡಿ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿ ವರದಿ ನೀಡಿರುವಂತೆ ಸೂಚಿಸಿದಾಗ ಗ್ರಾಮ ಲೆಕ್ಕಾಧಿಕಾರಿಗಳು ಘಟನಾ ಸ್ಥಳಕ್ಕೆ ಭಾವಿಸಿ ಸುಟ್ಟು ಬಸ್ಮವಾಗಿರುವ ಗುಡಿಸಲುಗಳನ್ನು ಪರಿಶೀಲಿಸಿ, ನಷ್ಟವಾಗಿರುವ ಬಗ್ಗೆ ವರದಿ ಮಾಡಿ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿರುತ್ತಾರೆ. ಈ ಒಂದು ನೊಂದ ಬಡ ಕುಟುಂಬಗಳಿಗೆ ಆದಷ್ಟು ಬೇಗನೆ ಪರಿಹಾರ ದೊರಕಿಸಿ ಕೊಡಲಿ ಎಂದು ಪತ್ರಿಕೆಯು ಸಹ ಆಗ್ರಹಿಸುತ್ತದೆ.
ವರದಿ. ಲಕ್ಷ್ಮಿಪತಿ ದೊಡ್ಡ ಯ ಲ್ಕೂರು.