IMG 20230929 WA0033

ಪಾವಗಡ: ಉತ್ತಮ ಜೀವನಶೈಲಿಯಿಂದ ಹೃದಯಘಾತವನ್ನು ತಪ್ಪಿಸಬಹುದು….!

DISTRICT NEWS ತುಮಕೂರು

ಉತ್ತಮ ಜೀವನಶೈಲಿಯಿಂದ ಹೃದಯಘಾತವನ್ನು ತಪ್ಪಿಸಬಹುದು. ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿ ಡಾ.ಕಿರಣ್

ಪಾವಗಡ : ನಮ್ಮ ದೈನಂದಿನ ಕೆಲಸಗಳ ಒತ್ತಡದಿಂದಾಗಿ ಹೃದಯದ ಮೇಲೆ ಅತಿಯಾದ ಒತ್ತಡ ಹಾಕುತ್ತೇವೆ. ಇದರಿಂದ ಹೃದಯದ ಸಮಸ್ಯೆಗಳು ಆಗಾಗ ಕಾಡುತ್ತಲೇ ಇರುತ್ತವೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾದ ಡಾಕ್ಟರ್ ಕಿರಣ್ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶುಕ್ರವಾರ NCD ವಿಭಾಗದ ವತಿಯಿಂದ ವಿಶ್ವ ಹೃದಯ ದಿನಾಚರಣೆ ಯನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿಗಳಾದ ಡಾ.ಕಿರಣ್ ಹೃದಯವನ್ನು ಬಳಸಿ ಹೃದಯವನ್ನು ತಿಳಿಯಿರಿ ಎಂಬ ಘೋಷ ವಾಕ್ಯ ಕೂಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ಮೂವತ್ತು ವರ್ಷ ವಯಸ್ಸಿನ ನಂತರ ಆರು ತಿಂಗಳಿಗೊಮ್ಮೆ ಕೊಲೆಸ್ಟ್ರಾಲ್, ಬಿಪಿ, ಸಕ್ಕರೆ ಕಾಯಿಲೆ ಪರೀಕ್ಷೆ, ಮಾಡಿಸಿ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದರ ಮೂಲಕ ಮುಂದೆ ಆಗುವಂತಹ ಅನಾಹುತಗಳನ್ನು ತಡೆಯಬಹುದು ಎಂದರು.

ಈ ವಿಷಯವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಆರೋಗ್ಯ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ. ಮೌನಿಕರಾಜ್ ,ಎನ್. ಸಿ.ಡಿ.ಸಿಬ್ಬಂದಿ ಚಂದ್ರಕಲಾ,M D ಖಾಸಿಂ,ಓಂಕಾರ್ .ಆರ್ ಗೊಳ್ಳಾಲ್ಲಪ್ಪ , ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಯವರು,ಸಾರ್ವಜನಿಕ ರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ವರದಿ. ಶ್ರೀನಿವಾಸಲು.ಎ