ವೈದ್ಯ ವಿದ್ಯಾರ್ಥಿ ನಾಪತ್ತೆ.
ಪಾವಗಡ : ಪಾವಗಡ ಪಟ್ಟಣದ ಧರ್ಮವರಂ ಲೇಔಟ್ ನಿವಾಸಿಯಾದ ಸಿ. ದರ್ಶನ್ ಕುಮಾರ್ ಕಾಣೆಯಾಗಿದ್ದಾರೆಂದು ಅವರ ತಾಯಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ.
ಪಟ್ಟಣದ ಧರ್ಮವರಂ ಲೇಔಟಿನ ನಿವಾಸಿಯಾದ ಶ್ರೀ ದರ್ಶನ್ ಕುಮಾರ್ ದಾವಣಗೆರೆಯ ಎಸ್ ಎಸ್ ಐ ಎಂ ಎಸ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದನೆಂದು, ಓದಿನಲ್ಲಿ ಹೆಚ್ಚಿನ ಏಕಾಗ್ರತೆ ವಹಿಸಿದ್ದರಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು,
ಕುಟುಂಬಸ್ಥರು ಆತನಿಗೆ ಶಿವಮೊಗ್ಗ ನರ್ಸಿಂಗ್ ಹೋಮ್ ನಲ್ಲಿ ಚಿಕಿತ್ಸೆ ಕೊಡಿಸಿದರೆಂದು, ಆದರೆ 28.12.2023 ರಂದು ಮನೆಯಿಂದ ಹೊರಗೆ ಹೋದವನು ಪುನಃ ಹ ಬರಲಿಲ್ಲವೆಂದು ವಿದ್ಯಾರ್ಥಿಯ ತಾಯಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ.
ವೈದ್ಯ ವಿದ್ಯಾರ್ಥಿ ಮನೆಯಿಂದ ಹೊರಗಡೆ ಹೋದಾಗ ನೀಲಿ ಬಣ್ಣದ ಸ್ಪೆಟರ್, ಬಿಳಿಗೆರೆಯ ನೀಲಿ ಬಣ್ಣದ ಟೀ ಶರ್ಟ್ ಸಿಮೆಂಟ್ ಕಲರ್ ಪ್ಯಾಂಟ್ ಧರಿಸಿದ್ದಾನೆಂದು
ಈ ವಿದ್ಯಾರ್ಥಿ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲ್ಲಿ ಪಾವಗಡದ ಹರಿ ಡಿಜಿಟಲ್ ಅಂಗಡಿಯನ್ನು ಸಂಪರ್ಕಿಸಬೇಕೆಂದು ಅಥವಾ 9945136 09 0 ಮತ್ತು 7989022523 ಮೊಬೈಲ್ ನಂಬರ್ ಗೆ ಕರೆ ಮಾಡಬೇಕಾಗಿ ತಿಳಿಸಿದ್ದಾರೆ.
ವರದಿ. ಶ್ರೀನಿವಾಸಲು. A