IMG 20230909 WA0027

ಪಾವಗಡ : 147 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನ….!

DISTRICT NEWS ತುಮಕೂರು

ಪಾವಗಡ ತಾಲೂಕಿನಲ್ಲಿ 147 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಗೃಹ ಸಚಿವ ಪರಮೇಶ್ವರ್.

ಪಾವಗಡ . ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಗೃಹ ಸಚಿವ ಪರಮೇಶ್ವರ್ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕೆಲಸ ಕಾರ್ಯಗಳು, ಕಾಮಗಾರಿಗಳು ನಿಂತು ಹೋಗಿವೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಆದರೆ ಇಂದು ತಾಲ್ಲೂಕಿನಲ್ಲಿ 147 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇವೆ ಎಂದರು.

IMG 20230909 WA0024
ಯಾವುದೇ ಕಾಮಗಾರಿ ನಿಂತಿಲ್ಲ, ಹಿಂದಿನ ಮುಖ್ಯಮಂತ್ರಿ ಆಯವ್ಯಯ ಮಂಡಿಸಿದ್ದರು. ಗ್ಯಾರಂಟಿ ಯೋಜನೆಗಳು ಹಿಂದಿನ ಆಯವ್ಯದಲ್ಲಿ ಬಂದಿರಲಿಲ್ಲ. ಮತ್ತೊಂದು ಆಯವ್ಯಯ ನೀಡಬೇಕಾದ ಅನಿವಾರ್ಯ ಇತ್ತು. ಹಿಂದಿನ ಕಾಮಗಾರಿ ಪರಿಶೀಲನೆ ನಡೆಸಿ ಶೀಘ್ರ ಮುಗಿಸುವಂತೆ ತಿಳಿಸಿದ್ದಾರೆ. ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗಿದೆ.
ಅವರು ಮೈತ್ರಿ ಮಾಡಿಕೊಳ್ಳುವುದರಲ್ಲಿ ತಕರಾರಿಲ್ಲ. ನಾವೂ ಸಹ ಕಳೆದ ಬಾರಿ ಮೈತ್ರಿ ಮಾಡಿಕೊಂಡಿದ್ದೆವು. ಅವರ ಜೊತೆ ಮೈತ್ರಿ ಮಾಡಿಕೊಂಡಿದ್ದ ಫಲಿತಾಂಶ ಏನು ಎಂಬುದನ್ನು ಇಡೀ ರಾಜ್ಯ ಗಮನಿಸಿದೆ. ಅದರಿಂದ ಬಿಜೆಪಿ ಅಥವಾ ಜೆಡಿಎಸ್ ಗೆ ಏನು ಫಲ ಸಿಗುತ್ತದೆ ಎಂಬುದನ್ನು ಕಾದು ನೋಡೋಣ. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯ ಕಹಿ ಇಲ್ಲ.
ಒಂದು ಪಕ್ಷ ಬಹುಮತ ಪಡೆದು ಜನಮನ್ನಣೆ ಪಡೆದಿದೆ ಎಂದಾಗ ಬಿಜೆಪಿ, ಜೆಡಿಎಸ್ ಪಕ್ಷದವರಿಗೆ ನಡುಕ ಹುಟ್ಟಿದೆ. ಹೀಗಾಗಿ ಅವರು ಪ್ರಯತ್ನ ಪಡುತ್ತಿದ್ದಾರೆಎಂದರು.

IMG 20230909 WA0021

▪️ವೆಂಕಟಮ್ಮನಹಳ್ಳಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ 73 ಲಕ್ಷ ಅನುದಾನದ ಸರ್ಕಾರಿ ಶಾಲೆಗೆ ಚಾಲನೆ.

▪️ಕ್ಯಾತಗಾನಚೆರ್ಲು ಗ್ರಾಮದಲ್ಲಿ ನಿರ್ಮಾಗಣಗೊಂಡಿರುವ 174 ಲಕ್ಷ ಅನುದಾನದ ಸರ್ಕಾರಿ ಶಾಲೆಗೆ ಚಾಲನೆ.

▪️ನಾಗಲಮಡಿಕೆ ಗ್ರಾಮದಲ್ಲಿ ನಿರ್ಮಾಣಗೊಂಡಿರುವ 48 ಲಕ್ಷ ವೆಚ್ಚದ ನಾಡಕಛೇರಿಗೆ ಚಾಲನೆ.
▪️ಪಾವಗಡ ಪಟ್ಟಣದಲ್ಲಿ ಸುಮಾರು 4.50 ಕೋಟಿ ವೆಚ್ಚದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಕಾಮಗಾರಿಗೆ ಭೂಮಿ ಪೂಜೆ
▪️ಪಟ್ಟಣದಲ್ಲಿ 2.20 ಕೋಟಿ ವೆಚ್ಚದ ನೂತನ ಪೊಲೀಸ್ ಠಾಣೆಯ ಕಾಮಗಾರಿಗೆ ಭೂಮಿ ಪೂಜೆ.IMG 20230909 WA0022

ಹಾಗೂ ಗುರುಭವನ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಬಹು ಕೋಟಿ ರೂಗಳ ಹಲವು ಕಾಮಗಾರಿಗಳಿಗೆ ಸಾಮೂಹಿಕವಾಗಿ ಶಂಕುಸ್ಥಾಪನೆ ನೆರವೇರಿಸಲಾಯಿತು..

ಕಾರ್ಯಕ್ರಮದಲ್ಲಿ ಶಾಸಕರಾದ ಹೆಚ್ ವಿ ವೆಂಕಟೇಶ್ , ಮಾಜಿ ಸಚಿವರಾದ ವೆಂಕಟರಮಣಪ್ಪ,ಜಿಲ್ಲಾಧಿಕಾರಿ ಶ್ರೀನಿವಾಸ್ , CEO ಪ್ರಭು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ವಿ ಅಶೋಕ್ ಇಂದು ಪಾವಗಡ ತಾಲ್ಲೂಕಿನಲ್ಲಿ ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ವಿವಿಧ ಇಲಾಖೆಗಳ ವತಿಯಿಂದ ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ಬಂದಿದ್ದ ಸವಲತ್ತುಗಳನ್ನು ವಿತರಿಸಿದರು.

ಇನ್ನೂ ಈ ವೇಳೆ ಪ್ರಮುಖ ಕಾಂಗ್ರೆಸ್ ಮುಖಂಡರುಗಳು ಹಲವು ಜಿಲ್ಲಾ ಮಟ್ಟದ ಅಧಿಕಾರಿಗಳು,ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದರು.