IMG 20220729 WA0034

ಮಧುಗಿರಿ: ಬೆಸ್ಕಾಂ ಅಧಿಕಾರಿಗಳ ಬೇಜವಬ್ದಾರಿ‌ ನಡೆ…!

DISTRICT NEWS ತುಮಕೂರು

ಬೆಸ್ಕಾಂ ಇಲಾಖೆಯಲ್ಲಿ ಕರ್ತವ್ಯ ನಡೆಸುತ್ತಿರುವ ಸೀನಿಯರ್ ಅಸಿಸ್ಟೆಂಟ್ ಶಶಿಕಲ ಸಾರ್ವಜನಿಕರೊಂದಿಗೆ ಏರು ದನಿಯ ಮಾತುಗಳು

ಇಂತಹ ಅಧಿಕಾರಿಗೆ AO ಹುದ್ದೆ ನಿರ್ವಹಿಸುವ ಅವಶ್ಯಕತೆ ಉಂಟೇ

ಮೇಲಧಿಕಾರಿಗಳು ಶಶಿಕಲಾ ಅವರಿಗೆ ಬುದ್ಧಿ ಕಲಿಸಿ, ಕಾನೂನು ರೀತಿಯ ಕ್ರಮ ಕೈಗೊಳ್ಳುವವರೇ

ಮಧುಗಿರಿ :ಸರ್ಕಾರದ ಆದೇಶದಂತೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಜನಾಂಗದವರಿಗೆ ಉಚಿತವಾಗಿ 75 ಯೂನಿಟ್ ಗಳ ವಿದ್ಯುತ್ ಅನ್ನು ನೀಡುವುದಾಗಿ ಅದಕ್ಕೆ ಸಂಬಂಧಪಟ್ಟಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಈ ತಿಂಗಳ 30ನೇ ತಾರೀಕು ಎಂದು ಯೋಜನೆ ಹೊರಡಿಸಿದೆ.


ಅದರಂತೆ ಇಂದು ಮಧುಗಿರಿಯಲ್ಲಿ ಬೆಸ್ಕಾಂ ಕಚೇರಿಯಲ್ಲಿ ಎಲ್ಲಾ ಪರಿಶಿಷ್ಟ ಜಾತಿ ಪಂಗಡದವರಿಗೆ ಡೆಪಾಸಿಟ್ ಕಟ್ಟಲು ಹೇಳಿದಾಗ ಹಣ ಕಟ್ಟಿದ ನಂತರ ಅರ್ಜಿ ಸಲ್ಲಿಸಿ ಅರ್ಜಿಯ ಸ್ವೀಕೃತ ಪತ್ರ ನಕಲು ಕೇಳಿದಾಗ ನಾವು ಯಾವುದೇ ನಕಲನ್ನು ಕೊಡುವುದಿಲ್ಲ ಆ ರೀತಿಯಾಗಿ ನಮಗೆ ಆದೇಶವೂ ಇಲ್ಲ ಎಂದು ಅಲ್ಲಿ ಬಂದಿರುವಂತಹ ಅರ್ಜಿದಾರರಿಗೆ ಬೆದರಿಕೆಯ ರೀತಿಯಲ್ಲಿ ಉಡಾಫೆ ಉತ್ತರವನ್ನು ಸೀನಿಯರ್ ಅಸಿಸ್ಟೆಂಟ್ ಶಶಿಕಲಾ ಅವರು ನೀಡುತ್ತಿದ್ದಾರೆ.

ಇದರಿಂದ ಕೆಂಡಮಂಡಲಗೊಂಡ ಸ್ಥಳೀಯ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ರಾಘವೇಂದ್ರ ಮಾತನಾಡಿ ಅರ್ಜಿ ಸಲ್ಲಿಸಲು ಅವಿದ್ಯಾವಂತರು ವಿದ್ಯಾವಂತರು ಆಗಮಿಸುತ್ತಾರೆ, ಆದರೆ ಅಧಿಕಾರಿಗಳು ಅದಕ್ಕೆ ತಕ್ಕನಾಗಿ ಯಾವುದೇ ಸ್ವೀಕೃತಿ ನಕಲು ಪತ್ರವನ್ನು ಕೊಡದೆ ದೌರ್ಜನ್ಯ ವಸಗುತ್ತಿದ್ದಾರೆ. ಸ್ವೀಕೃತಿ ಪತ್ರವಿದ್ದರೆ ಅಧಿಕಾರಿಗಳ ವರ್ಗಾವಣೆ ಆದರೂ ಸಹ ಮುಂಬರುವ ಅಧಿಕಾರಿಗಳಿಗೂ ಸಹ ತೋರಿಸಬಹುದು. ಸ್ವೀಕೃತಿ ಪತ್ರ ನೀಡದೆ ಕೆಲ ವಿದ್ಯಾವಂತರಿಗೆ ಸರ್ಕಾರದ ಸವಲತ್ತುಗಳು ಲಭ್ಯವಿದ್ದರೂ ಕೈಗೆಟುಕದೆ, ಅರ್ಜಿಗಳನ್ನು ಕಳೆದುಕೊಂಡಿರುವ

ಘಟನೆ ಸಾಕಷ್ಟು ಇವೆ ಇದರಿಂದಾಗಿ ಬೆಸ್ಕಾಂನ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದರು.

ವರದಿ ಲಕ್ಷ್ಮಿಪತಿ ಎಲ್ಕೂರು