ತಾಲೂಕಿನಲ್ಲಿ ತಾನು ಮಾಡಿದ ಅಭಿವೃದ್ಧಿ ಕೆಲಸಗಳನ್ನು ನೋಡಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡಿ . ಶಾಸಕ ವೆಂಕಟರಮಣಪ್ಪ.
ಪಾವಗಡ. : ಅಭಿವೃದ್ಧಿಗೆ ಮತ್ತೊಂದು ಹೆಸರೇ ಕಾಂಗ್ರೆಸ್ ಪಕ್ಷ ವೆಂದು ಶಾಸಕನಾಗಿ ತಾಲೂಕನ್ನು ಸರ್ವತೋಮುಖ ಅಭಿವೃದ್ಧಿ ಮಾಡಿರುವುದಾಗಿ ಶಾಸಕ ವೆಂಕಟರಮಣಪ್ಪ ತಿಳಿಸಿದರು.
ಪಟ್ಟಣದ ಸಾಯಿರಾಂ ಮಂದಿರದಲ್ಲಿ ಗುರುವಾರ ನಡೆದ ವಾಲ್ಮೀಕಿ ಸಮಾಜದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತನ್ನ ಕಾಲಾವಧಿಯಲ್ಲಿ ತಾಲೂಕಿಗೆ ಸೋಲಾರ್ ಪಾರ್ಕ್, ಡಿಗ್ರಿ ಕಾಲೇಜು, ವಿದ್ಯಾರ್ಥಿಗಳ ವಸತಿ ನಿಲಯ, ವಿವಿಧ ಇಲಾಖೆಗಳನ್ನು ತಾಲೂಕಿಗೆ ತಂದಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದರು.
ತಾಲೂಕಿನಲ್ಲಿ ತಾನು ಮಾಡಿದ ಅಭಿವೃದ್ಧಿ ಕೆಲಸಗಳಷ್ಟು, ತಾಲೂಕಿನ ಯಾವುದೇ ಪಕ್ಷದ ಶಾಸಕರೂ ಮಾಡಿಲ್ಲ ಎಂದರು.
ತಿಮ್ಮರಾಯಪ್ಪನವರು ಕುಮಾರಣ್ಣನ ಅಭಿವೃದ್ಧಿ ನೋಡಿ ತಾಲೂಕಿನಲ್ಲಿ ವೋಟು ಕೇಳುತ್ತಾರೆ, ಆದರೆ ಕುಮಾರಣ್ಣನ ಅಭಿವೃದ್ಧಿಯಿಂದ ನಮಗೇನು ಪ್ರಯೋಜನ.
ಈ ತಾಲೂಕಿನಲ್ಲಿ ಜೆಡಿಎಸ್ ಪಕ್ಷದಿಂದ ಏನು ಅಭಿವೃದ್ಧಿ ಕಾರ್ಯಗಳು ನಡೆದಿದೆ ಎಂದು ಪ್ರಶ್ನಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಕಾಂಗ್ರೆಸ್ ಅಭ್ಯರ್ಥಿ ಎಚ್ ವಿ ವೆಂಕಟೇಶ್ ಮಾತನಾಡಿ,
ನಮ್ಮ ತಂದೆಯನ್ನು ನಾಲ್ಕು ಬಾರಿ ಶಾಸಕರನ್ನಾಗಿ, ಎರಡು ಬಾರಿ ಸಚಿವರನ್ನಾಗಿ, ಮಾಡಿದ್ದೀರಿ, ನಿಮ್ಮೆಲ್ಲರ ಸೇವೆ ಮಾಡಲು ನನಗೆ ಒಂದು ಅವಕಾಶ ನೀಡಿ ಎಂದರು.
ವಾಲ್ಮೀಕಿ ಸಮಾಜ ಮುಖಂಡರು ,ಯುವಕರು, ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಾಗಿ ನಿಲ್ಲಬೇಕೆಂದರು.
ಯುವಕರು ತಮ್ಮ ಭವಿಷ್ಯಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಇದೇ ತಿಂಗಳ 18ರಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಿನೇಷನ್ ಹಾಗಲಾಗುವುದೆಂದು, ನಾಮಿನೇಷನ್ ಕಾರ್ಯಕ್ಕೆ ಡಿಕೆ ಶಿವಕುಮಾರ್ ಆಗಮಿಸುವರೆಂದು, ಸುಮಾರು 50 ಸಾವಿರಕ್ಕೂ ಹೆಚ್ಚು ಜನ ನಾಮಿನೇಷನ್ ಕಾರ್ಯದಲ್ಲಿ ನನ್ನ ಜೊತೆಗಿರುವರು ಎಂದರು.
ಶಾಸಕ ತಿಮ್ಮರಾಯಪ್ಪ ಒಮ್ಮೆ ಕಾಂಗ್ರೆಸ್ ಮತ್ತೊಮ್ಮೆ ಜೆಡಿಎಸ್ ಎಂಬ ಹಗಲು ಕನಸು ಕಾಣುತ್ತಿದ್ದಾರೆ, ತಾಲೂಕಿನ ಜನರು ಮತ್ತೊಮ್ಮೆ ಕಾಂಗ್ರೆಸ್ ಗೆ ಮತ ನೀಡಿ ಜೆಡಿಎಸ್ ಗೆ ಶಾಕ್ ನೀಡಬೇಕೆಂದರು.
ಕಾರ್ಯಕ್ರಮದಲ್ಲಿ ಪಿ.ಹೆಚ್ ರಾಜೇಶ್, ತೆಂಗಿನಕಾಯಿ ರವಿ, ಭರತ್ ಪಾಳೇಗಾರ, ಸುಮನ್, ಓಂಕಾರ್ ನಾಯಕ, ಮತ್ತು ಚಿತ್ತಗಾನಹಳ್ಳಿ ಚಂದ್ರು , ಹರೀಶ್, ಮುಂತಾದ ವಾಲ್ಮೀಕಿ ಸಮಾಜದ ನಾಯಕರು, ಮುಖಂಡರು,ಯುವಕರು ಭಾಗ ವಹಿಸಿದ್ದರು.
ವರದಿ: ಶ್ರೀನಿವಾಸಲು