IMG 20230414 WA0021

ಬೆಂಗಳೂರು: JD(S) ಗೆ ಅಸಂತೃಪ್ತರ ದಂಡು…!

POLATICAL STATE

ಮಾಜಿ ಶಾಸಕರಾದ ರಘು ಆಚಾರ್, ದೊಡ್ಡಪ್ಪ ಗೌಡ ಪಾಟೀಲ್, ಗುರುಲಿಂಗಪ್ಪ ಗೌಡ, ಗುರು ಪಾಟೀಲ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

ಮಂಗಳೂರು, ಉತ್ತರ ಕನ್ನಡ, ತುಮಕೂರು, ಚಿತ್ರದುರ್ಗ ಸೇರಿ ವಿವಿಧ ಭಾಗಗಳ ಅಸಂಖ್ಯಾತ ನಾಯಕರು ಸೇರ್ಪಡೆ

ಎಲ್ಲರನ್ನೂ ಸ್ವಾಗತಿಸಿದ ಮಾಜಿ ಸಿಎಂ HD ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ


ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್, ಜೇವರ್ಗಿಯ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಶಹಾಪುರದ ಮಾಜಿ ಶಾಸಕರಾದ ಗುರುಲಿಂಗಪ್ಪ ಗೌಡ, ಗುರು ಪಾಟೀಲ್, ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅನೇಕ ಪ್ರಮುಖ ನಾಯಕರು ಶುಕ್ರವಾರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

IMG 20230414 WA0008

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಬೃಹತ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸೇರಿದಂತೆ ಪಕ್ಷದ ಹಿರಿಯ ನಾಯಕರು ಜೆಡಿಎಸ್ ಶಾಲು ಹಾಕಿ, ಪಕ್ಷದ ಬಾವುಟ ನೀಡಿ ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು.

ಜತೆಗೆ; ಕಾರವಾರದ ಚೈತ್ರ ಕೊಡೇಕರ್, ಪಾವಗಡದ ಶ್ರೀರಾಮ್, ಮಾಯಕೊಂಡದ ಸವಿತಾ ಬಾಯಿ, ಪುತ್ತೂರಿನ ದಿವ್ಯಾ ಪುತ್ತೂರು, ದಿವ್ಯಪ್ರಭಾ ಗೌಡ, ಸಲಾಂ ವಿಟ್ಲ ಸೇರಿದಂತೆ ನೂರಾರು ಪ್ರಮುಖ ನಾಯಕರು ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾದರು.

ಪಕ್ಷ ಸೇರ್ಪಡೆ ಅದ ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಪಿ ಭವನದಲ್ಲಿ ಜೆಪಿ ಭವನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ದಿನ ದೊಡ್ಡ ಪ್ರಮಾಣದಲ್ಲಿ ನಾಯಕರು ವಿವಿಧ ಪಕ್ಷಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ನಮ್ಮ ಪಕ್ಷದ ಶಕ್ತಿ ಏನು ಎಂಬುದು ಎಲ್ಲರಿಗೂ ಮನವರಿಕೆ ಆಗುತ್ತಿದೆ ಎಂದರು.

IMG 20230414 WA0016

ಈ ಚುನಾವಣೆಗೆ ಇಂದು ನಡೆದ ಪಕ್ಷ ಸೇರ್ಪಡೆ ಒಂದು ದಿಕ್ಸೂಚಿಯಾಗಿದೆ. ಕಲ್ಬುರ್ಗಿ, ಕಾರವಾರ, ಮಂಗಳೂರು, ಚಿತ್ರದುರ್ಗ ಜಿಲ್ಲೆಗಳ ನಾಯಕರು ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಮಗೆ ಶಕ್ತಿ ಇಲ್ಲ ಎಂದು ಕೆಲವರು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದರು. ಆ ಭಾಗದಲ್ಲಿ ಕನಿಷ್ಠ 25-30 ಸ್ಥಾನ ಅಲ್ಲಿ ಗೆಲ್ಲುತ್ತೇವೆ ಎಂದು ಹೇಳಲಾಗುತ್ತಿತ್ತು. ಈಗ ನೋಡಿದರೆ 40 ಸ್ಥಾನದ ಮೇಲೆ ಗೆದ್ದರೂ ಆಶ್ಚರ್ಯವಿಲ್ಲ. ಪಕ್ಷವನ್ನು ಸಧೃಡ ಮಾಡಲು ಕಾರ್ಯಕರ್ತರು ಶ್ರಮ ಹಾಕಿದ್ದಾರೆ. ಇದರ ಮೂಲಕ ಫಲ ದೊರಕುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದರು.

IMG 20230414 WA0019

ಇವತ್ತು ಸೇರ್ಪಡೆ ಆದವರನ್ನು ನಾನು ಕಾಂಗ್ರೆಸ್, ಬಿಜೆಪಿಯವರು ಎಂದು ಹೇಳಲ್ಲ. ಏಕೆಂದರೆ, ಅವರೆಲ್ಲಾ ಒಂದಲ್ಲ ಒಂದು ಕಡೆ ಜೆಡಿಎಸ್ ಪರಿವಾರಕ್ಕೆ ಸೇರಿದವರೇ. 2023ಕ್ಕೆ ಜನತಾ ದಳವನ್ನು ಜನ ಬೆಂಬಲಿಸಲಿದ್ದಾರೆ. 123 ಕ್ಷೇತ್ರಗಳ ಗುರಿ ಇಟ್ಟು ಹೊರಾಟ ಮಾಡುತ್ತಿದ್ದೇವೆ. ಇನ್ನೂ ಅನೇಕರು ಪಕ್ಷಕ್ಕೆ ಬರುವವರಿದ್ದಾರೆ ಎಂದು ಅವರು ತಿಳಿಸಿದರು.

ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಮಾತನಾಡಿ, ಜೆಡಿಎಸ್ ಎಲ್ಲಿದೆ ಎಂದು ಕೇಳುತ್ತಿದ್ದವರಿಗೆ ಈಗ ಉತ್ತರ ಸಿಕ್ಕಿದೆ. ನಾನು ಮೊದಲೇ ಹೇಳಿದ್ದೇ, ಬೇರೆ ಪಕ್ಷಗಳ ನಾಯಕರು ದೊಡ್ಡ ಪ್ರಮಾಣದಲ್ಲಿ ಜೆಡಿಎಸ್ ಪಕ್ಷ ಸೇರುತ್ತರೆಂದು. ಈಗ ಆ ಮಾತು ಸತ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ರಘು ಆಚಾರ್, ದೊಡ್ಡಪ್ಪ ಗೌಡ ಪಾಟೀಲ್, ದೊಡ್ಡಪ್ಪ ಗೌಡ ಪಾಟೀಲ್, ಗುರುಲಿಂಗಪ್ಪ ಗೌಡ, ಗುರು ಪಾಟೀಲ್ ಸೇರಿದಂತೆ ಪಕ್ಷಕ್ಕೆ ಸೇರಿದ ಎಲ್ಲ ಪ್ರಮುಖ ನಾಯಕರು ಮಾತನಾಡಿದರು.

ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು ,

IMG 20230414 WA0003

ಪಾವಗಡ : ತುಮುಲ್ ನಿರ್ದೇಶಕರಾದ ಚೆನ್ನಮಲ್ಲಯ್ಯ, ಶಾಂತಿ ಮೆಡಿಕಲ್ ದೇವರಾಜ್ಶು
ನಂಜುಂಡಸ್ವಾಮಿ, ಮಾನಂ ಶ್ರೀಕಾಂತ್ ಪರಿಟಾಲ ಭಾರ್ಗವ್ ಮಾದಿನೇನಿ, ರವಿ ಮನಗೋಲು, ರಮೇಶ್ ಬತ್ತಿನೇನಿ ವೇಣು, ನರಸಿಂಹಪ್ಪ ಲಕ್ಷ್ಮೀನಾರಾಯಣ, ಮುಂತಾದವರು, ಶುಕ್ರವಾರ ಬೆಂಗಳೂರಿನ ಜೆ.ಪಿ ಭವನದ ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಹಾಗೂ ಜೆಡಿಎಸ್ ನ ರಾಜ್ಯಾಧ್ಯಕ್ಷರಾದ ಇಬ್ರಾಹಿಂ ರವರ ನೇತೃತ್ವದಲ್ಲಿ

IMG 20230415 WA0000

ವಿಧಾನ ಪರಿಷತ್ ಸದಸ್ಯರಾದ ಕೆ ಎನ್ ತಿಪ್ಪೇಸ್ವಾಮಿ, ಟಿ.ಎ.ಶರವಣ, ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಸೇರಿದಂತೆ ಪಕ್ಷದ ಅನೇಕ ಮುಖಂಡರು ಹಾಜರಿದ್ದರು.