ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ಶಾಸಕ ವೆಂಕಟರಮಣಪ್ಪ ಚಾಲನೆ.
ಪಾವಗಡ… ವಿದ್ಯಾರ್ಥಿ ಜೀವನದಲ್ಲಿ ಶೈಕ್ಷಣಿಕ ಪ್ರವಾಸ ಕೈಗೊಳ್ಳುವುದರಿಂದ ರಾಜ್ಯದ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಅಂಶಗಳನ್ನು ತಿಳಿಯುವುದರ ಜೊತೆಗೆ ಸ್ಥಳದ ಇತಿಹಾಸವನ್ನು ತಿಳಿಯಬಹುದೆಂದು ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ನೀಡಿ ಶಾಸಕ ವೆಂಕಟರಮಣಪ್ಪ ಮಾತನಾಡಿದರು.. ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ 8, 9 ಮತ್ತು 10ನೇ ತರಗತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 127 ವಿದ್ಯಾರ್ಥಿ ಗಳು ಆಯ್ಕೆಯಾಗಿದ್ದು ಐದು ದಿನಗಳ ಕಾಲ ಐದು ಜನ ಶಿಕ್ಷಕರು ಮತ್ತು ಒಬ್ಬ ಪ್ರವಾಸೋದ್ಯಮ ಸಿಬ್ಬಂದಿ ಪ್ರವಾಸ ಕೈಗೊಳ್ಳಲಿದ್ದಾರೆ, ಒಂದು ರಾಜ್ಯ ಒಂದು ಜಗತ್ತು ಎಂಬ ಘೋಷಣೆಯಿಂದ ಕರ್ನಾಟಕ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪ್ರಮುಖ ಯೋಜನೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥ್ ನಾರಾಯಣ್ ತಿಳಿಸಿದರು.
ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಿರುವ ಕುಟುಂಬದವರಿಗೆ ಸ್ವಯಂ ಪ್ರೇರಿತರಾಗಿ ತಮ್ಮ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲ, ತಮ್ಮ ಮಕ್ಕಳಿಗೆ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮದ ಅಡಿಯಲ್ಲಿ ಪ್ರವಾಸ ಕರೆದುಕೊಂಡು ಹೋಗುತ್ತಿರುವುದರಿಂದ ತುಂಬಾ ಸಂತೋಷವಾಗಿದೆ ಎಂದು ಪೋಷಕ ನವೀನ್ ರಾಜ್ ಸಂತೋಷ ವ್ಯಕ್ತಪಡಿಸಿದ್ದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರಾದ ಬಸವರಾಜು, ಸೋಮಶೇಕರ್, ಸುಬ್ಬರಾಯಪ್ಪ, ಸಿ. ಆರ್.ಪಿ.ವಿಶಾಲಾಕ್ಷ್ಮಿ,
ಪ್ರವಾಸೋದ್ಯಮ ಇಲಾಖೆಯ ಮಹೇಶ್, ಇ.ಸಿ.ಒ. ಶಿವಮೂರ್ತಿನಾಯಕ್, ಚಂದ್ರಶೇಖರ್ ಶಿಕ್ಷಕರಾದ ಶ್ರೀಕೃಷ್ಣ, ಯತಿಕುಮಾರ್,ವೇಣುಗೋಪಾಲ ನಾರಾಯಣಪ್ಪ, ಸಿ ಆರ್ ಪಿ ಶ್ರೀನಿವಾಸ್ , ಅದರ್ಶ ಶಾಲೆಯ ಜಿ.ವೆಂಕಟೇಶ್, ಸರ್ಕಾರಿ ಪ್ರೌಢಶಾಲೆಯ ಓ. ಧನುಂಜಯ, ಮತ್ತಿತರರು ಹಾಜರಿದ್ದು ಶೈಕ್ಷಣಿಕ ಪ್ರವಾಸ ಕೈಗೊಂಡಿರುವ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಶುಭಕೋರಿದರು..
ವರದಿ : ಶ್ರೀನಿವಾಸಲು ಎ