ಗ್ರಾಮಸಭೆ
ವೈ.ಎನ್.ಹೊಸಕೋಟೆ : ಹೋಬಳಿಯ ಸಿದ್ದಾಪುರ ಗ್ರಾಮಪಂಚಾಯಿತಿಯಲ್ಲಿ ಮನೆಗಳ ಹಂಚಿಕೆ ವಿಚಾರವಾಗಿ ಬುಧವಾರ ಗ್ರಾಮಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ನಾಗಣ್ಣ ರವರು, ಅರ್ಹ ಫಲಾನುಭವಿಗಳಿಗೆ ಮನೆಗಳ ವಿತರಣೆ ಮಾಡಲಾಗುವುದು. ಅರ್ಜಿ ಕೊಟ್ಟಿರುವ ಪ್ರತಿಯೊಬ್ಬ ಆಕಾಂಕ್ಷಿಯ ಸ್ಥಳ ಮತ್ತು ಮನೆ ಪರಿಶೀಲನೆ ಮಾಡಿ ಅರ್ಹರೆಂದು ಕಂಡುಬಂದರೆ ಅವರಿಗೆ ಮಾತ್ರ ಮಂಜೂರಾತಿ ಮಾಡಲಾಗುತ್ತದೆ. ಯಾವುದೇ ಮಧ್ಯವರ್ತಿಗಳ ಮಾತು ನಂಬಿ ಮೋಸ ಹೋಗಬೇಡಿ ಎಂದು ತಿಳಿಸಿದರು
ಗ್ರಾಮಪಂಚಾಯಿತಿಗೆ ಅಮೃತಗ್ರಾಮಪಂಚಾಯಿತಿ ಯೋಜನೆಯಡಿ 40 ಮನೆಗಳು ಮಂಜೂರಾಗಿದ್ದು, ಬಸವ ವಸತಿ ಯೋಜನೆಯ 30 ಮತ್ತು ಅಂಬೇಡ್ಕರ್ ವಸತಿ ಯೋಜನೆಯ 10 ಮನೆಗಳು ಒಳಗೊಂಡಿವೆ.
ಗ್ರಾಮಸಭೆಯಲ್ಲಿ 60 ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಷರತ್, ಉಪಾಧ್ಯಕ್ಷೆ ಶಿವಮ್ಮ, ಸದಸ್ಯರಾದ ಓಬಳಪತಿ, ಹನುಮಂತರಾಯ.ಎ, ಮಾರುತಿ ಪ್ರಸನ್ನ, ಗಂಗಮ್ಮ, ಲಕ್ಷ್ಮಿದೇವಮ್ಮ, ಕವಿತ, ಈರಪ್ಪ, ಶಾರದಮ್ಮ, ಶೃತಿ, ಮುನಿಸ್ವಾಮಿ, ಗಂಗೋತ್ರಿ, ರೂಪಾ.ಟಿ, ಪಿಡಿಓ ಎ.ರಾಮಪ್ಪ ಸಿಬ್ಬಂದಿಯಾದ ಮಂಜು, ಹನುಮಂತರಾಯ, ಪ್ರತಾಪ್ ಇದ್ದರು.
ವರದಿ: ಸತೀಶ್