IMG 20200630 WA0012

ಪಾವಗಡ: 5 ಜನರಿಗೆ ಕೊರೋನ ಸೋಂಕು ದೃಡ

DISTRICT NEWS Uncategorized ತುಮಕೂರು

ಪಾವಗಡ ದಲ್ಲಿ ಮಂಗಳವಾರ ಮತ್ತೆ 5 ಸೊಂಕು ದೃಢ.*

*ಪಾವಗಡ*: ತಾಲ್ಲೂಕಿನಲ್ಲಿ ಮಂಗಳವಾರ ಮತ್ತೆ 5 ಮಹಾಮಾರಿ ಕೊರೊನಾ ಪ್ರಕರಣ ದೃಢವಾಗಿರೋದು ತಾಲ್ಲೂಕಿನ ಜನರಿಗೆ ಕೊರೊನಾದ ಭಯದ ಛಾಯೆ ಮೂಡಿಸಿದೆ.

ಮಂಗಳವಾರ ಹೊರ ಬಿದ್ದ ಸೋಂಕಿನ ವರದಿಯಲ್ಲಿ ಪಾವಗಡ ತಾಲ್ಲೂಕಿನ ಎಸ್ ಆರ್ ಪಾಳ್ಯದಲ್ಲಿ 3 ಪ್ರಕರಣ, ಪಟ್ಟಣ ಸೇರಿದಂತೆ ಸೂಲನಾಯಕನಹಳ್ಳಿಯಲ್ಲಿ ತಲಾ ಒಂದೊಂದು ಸೋಂಕಿತ ವ್ಯಕ್ತಿಗಳು ಪತ್ತೆಯಾಗಿದ್ದಾರೆ.

ತಾಲ್ಲೂಕಿನ ಎಸ್ ಆರ್ ಪಾಳ್ಯದ 63 ವರ್ಷದ ಹಿರಿಯರೊಬ್ಬರು ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಇವರನ್ನೊಳಗೊಂಡಂತೆ ಸೋಂಕಿತ 5 ವರ್ಷದ ಮಗುವಿಗೂ ಕೂಡ ಕ್ಷಯ ರೋಗವಿರುವುದು ಪತ್ತೆಯಾಗಿತ್ತು.
ಆಗಾಗಿ ಜೂ.26 ರಂದು ಕ್ಷಯ ಪರೀಕ್ಷೆಗೆಂದು ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಆಗ ಇಬ್ಬರಿಗೂ ಕೊರೊನಾ ಸೋಂಕು ಇರುವುದು ದೃಢವಾಗಿದೆ.
ಇನ್ನು ಇದೇ ಗ್ರಾಮದ 45 ವರ್ಷದ ಮಹಿಳೆಗೆ ಜೂನ್ 25 ರಂದು ಗಂಟಲು ದ್ರವ ಮಾದರಿ ಪಡೆಯಲಾಗಿತ್ತು. ಬಳಿಕ ಕೊರೊನಾ ಸೋಂಕು ಖಚಿತವಾಗಿದೆ. ಮಹಿಳೆ ಈ ಹಿಂದೆ ವೈ.ಎನ್ ಹೊಸಕೋಟೆಯ ಜಾಲೋಡು ಗ್ರಾಮದಲ್ಲಿನ ದೇಗುಲಕ್ಕೆ ಹೋಗಿ ಬಂದಿದ್ದರು. ತಮ್ಮ ಸಂಬಂಧಿಕರೊಬ್ಬರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರ ಕುಶಲೋಪರಿ ವಿಚಾರಿಸಲು ಬೆಂಗಳೂರು ನಗರಕ್ಕೆ ಹೋಗಿದ್ದರು. ಜೊತೆಗೆ ಒಂದೆರಡು ಭಾರಿ ಅರಸೀಕೆರೆ ಆಸ್ಪತ್ರೆಗೂ ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಸೂಲನಾಯಕನಹಳ್ಳಿಯ 74 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಇವರು ಕೂಡ ಕ್ಷಯ ರೋಗದಿಂದ ಬಳಲುತ್ತಿದ್ದರು ಹಾಗೂ ಕ್ಯಾನ್ಸರ್ ಕೊನೆ ಹಂತದಲ್ಲಿದ್ದರು ಎಂಬ ಸುದ್ದಿ ಹೊರ ಬಿದ್ದಿದೆ.

ಹಾಗೆಯೇ ಪಾವಗಡ ಪಟ್ಟಣದ  ಸಾಯಿ ರಾಮ್ ಕಲ್ಯಾಣ ಮಂಟದ ಎದುರು  28 ವರ್ಷದ ಯುವಕ ಜೂ 26  ರಂದು  ಗಂಟಲು ದ್ರವ ಪರೀಕ್ಷೆ ನೀಡಿದ್ದರು . ಈಗ ಸೋಂಕಿರುವುದು ದೃಢವಾಗಿದೆ.

ಈ ಹಿಂದೆ ಪಾವಗಡ ತಾಲ್ಲೂಕಿನಲ್ಲಿ 9 ಮಂದಿಗೆ ಸೋಂಕು ದೃಢವಾಗಿತ್ತು. ಅದರಲ್ಲಿ ಗ್ರಾಮೀಣ ಭಾಗಗಳಲ್ಲಿ 7 ಮಂದಿಗೆ ಸೋಂಕು ಇತ್ತು.ಇಂದು 4 ಪ್ರಕರಣಗಳು ಸೇರ್ಪಡೆ ಯಾಗಿರೋದು ಗ್ರಾಮೀಣ ಭಾಗಗಳ ಜನರು ತಲ್ಲಣ ಗೊಂಡಿದ್ದಾರೆ.

ಈಗ ಒಟ್ಟು 14 ಕೊರೋನಾ ಪ್ರಕರಣಗಳು ಪಾವಗಡ  ತಾಲ್ಲೂಕಿನಾದ್ಯಂತ ಪತ್ತೆ ಯಾಗಿವೆ.

ಇದಕ್ಕೆ ಒಂದೇ ಮದ್ದು ಪ್ರತಿದಿನವೂ ಧೈರ್ಯದೊಂದಿಗೆ ಕೊರೊನಾ ನಿಯಂತ್ರಣ ಕ್ರಮಗಳನ್ನು ಅನುಸರಿಸಲೇಬೇಕಿದೆ.

ಪಾವಗಡ ವರದಿ: ನವೀನ್ ಕಿಲಾರ್ಲಹಳ್ಳಿ*