IMG 20200615 WA0166

ಪಾವಗಡ: ಶಿಕ್ಷಕರ ಗೋಳು ಕೇಳೋರ್ಯಾರು….!

DISTRICT NEWS ತುಮಕೂರು

ಪಾವಗಡ ತಾಲ್ಲೂಕಿನ ಖಾಸಗಿ ಶಾಲೆ ಗಳಲ್ಲಿ ಕೆಲಸ ಮಾಡುತ್ತಿರುವ. ಶಿಕ್ಷಕರ ಗೋಳು ಕೇಳೋರ್ಯಾರು….? ಇವರ ನೆರವಿಗೆ ಬರಬೇಕಾಗ ಶಿಕ್ಷಣ ಇಲಾಖೆ ಕಣ್ಣು ಮುಚ್ಚಿ ಕೂತಿದೆ…!

ಪಾವಗಡ : ಯಾವಾಗ ಕೊರೊನಾ ಅನ್ನುವ ಮಹಾಮಾರಿಯ ಅಟ್ಟಹಾಸ ಶುರುವಾಯ್ತೊ ಅಂದಿನಿಂದ ಇಂದಿನವರೆಗೂ ಖಾಸಗಿ ಶಾಲೆಯ ಶಿಕ್ಷಕರ ಬದುಕಿನ ಗೋಳಂತೂ ನರಕಸದೃಶ್ಯವಾಗಿದೆ.

ಅದರಲ್ಲೂ ಪಾವಗಡ ತಾಲ್ಲೂಕಿನಾದ್ಯಂತ ಸುಮಾರು 45 ಖಾಸಗಿ ಶಾಲೆಗಳಿವೆ. ಆ ಪೈಕಿ ಸರಿ ಸುಮಾರು 450 ಮಂದಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಡಿ ಕುಟುಂಬದ ನಿರ್ವಹಣೆ ಹೊತ್ತಿದ್ದ ಈ ಬಡ ಶಿಕ್ಷಕರಿಗೆ ಕಳೆದ ಮೂರು ತಿಂಗಳಿಂದ ವೇತನ ಸಿಕ್ಕಿಲ್ಲ, ಈ ಬಗ್ಗೆ ಸರ್ಕಾರವಾಗಲಿ, ಸಂಸ್ಥೆಯ ಮಾಲೀಕರಾಗಲಿ ಚಕಾರ ಎತ್ತದೆ ಮೌನಕ್ಕೆ ಜಾರಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವಂತಿದೆ. ಪರಿಣಾಮ ಶಿಕ್ಷಕರು ವೃದ್ದ ತಂದೆ ತಾಯಿಂದರ ಆರೋಗ್ಯ ಸುಧಾರಿಸಲಾಗದೆ, ಹೆಂಡತಿ ಮಕ್ಕಳ ದೈನಂದಿನ ಅವಶ್ಯಗಳನ್ನು ತೀರಿಸಲಾಗದೆ ಒಂದೇ ಮಾತಲ್ಲಿ ಪ್ರಚುರಪಡಿಸುವುದಾದರೆ ಪ್ರತಿದಿನ ಅಂದಂದಿನ ಊಟಕ್ಕೂ ಚಿಂತಿಸುವ ಪರಿಸ್ಥಿತಿ ಬಂದೊದಗಿದೆ.

IMG 20200615 WA0168
ಇವರ ಪ್ರತಿಭೆಗಳನ್ನು ..ಕಾರ್ಯ ಚತುರತೆಯನ್ನು ಹೊರ ಹಾಕಿಸಿ ಸಂಸ್ಥೆ ಉದ್ದರಿಸಿಕೊಳ್ಳುವ ಖಾಸಗಿ ಸಂಸ್ಥೆಯವರು ಯವರು ..ಶಿಕ್ಷಕರು ಬದುಕು ನಡೆಸಲಾಗದೆ ವಿಲ ವಿಲ ಒದ್ದಾಡುತ್ತಿದ್ದರು ಯಾಕೆ ಅವರ ಆರ್ತನಾದ ಅರಿವಾಗುತ್ತಿಲ್ಲ ಅನ್ನುವುದು ಯಕ್ಷ ಪ್ರಶ್ನೆ ಸಾರ್ವಜನಿಕರಲ್ಲಿ ಪಿಸುಗುಡುತ್ತಿದೆ.
ಇಲ್ಲಿಯವರೆಗೂ ತಾಲ್ಲೂಕಿನಾದ್ಯಂತ ಎಲ್ಲಿಯೂ ಖಾಸಗಿ ಶಿಕ್ಷ ಕರಿಗೆ ವೇತನ ಹಾಗೂ ಆಹಾರದ ನೆರವಿನ ಕಿಟ್ ಗಳನ್ನು ವಿತರಿಸಿಲ್ಲದಿರುವುದು ದುರಂತವೆಂದು ಕೆಲ ಹೆಸರೇಳದ ಶಿಕ್ಷಕರು ಅಳಲನ್ನು ಹೊರ ಹಾಕ್ತಾರೆ.

ಹೇಗೋ ಕೂಲಿ ನಾಲಿ ಮಾಡಿ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಬಹು ದೊಡ್ೞ ಸ್ಥಾನದಲ್ಲಿ ಕಾಣಬೇಕು ಅನ್ನುವ ಕನಸ್ಸಿನ ಗೋಪುರವನ್ನು ತಂದೆ ತಾಯಂದಿರು ಕಟ್ಟಿಕೊಳ್ತಾರೆ. ಆದರೆ ದೊಡ್ೞ ಮಟ್ಟದ ಪದವಿ ಮುಗಿಸಿದ ಮಕ್ಕಳು ಈ ರೀತಿ ತಮ್ಮ ಎದುರೆ ಜೀವನ ನಡೆಸಲಾಗದೆ ಅಂಗಾತ ಬಿದ್ದರೆ ಅವರಿಗಾಗೋ ಬಾಧೆ ಎಷ್ಟಿರಬಹುದು ಒಮ್ಮೆ ಯೋಚಿಸಬೇಕಿದೆ.

ಸುಖಾಸುಮ್ಮನೆ ಪಬ್ಲಿಸಿಟಿ ಗೀಳಿರೊ ಕೆಲ ಸಂಘ ಸಂಸ್ಥೆಯವರು ಬರೀ ಪೋಟೋಗಳಿಗಾಗಿ ಆಹಾರಗಳನ್ನು .ದಿನಸಿ ಕಿಟ್ಗಳನ್ನು ವಿತರಿಸೊ ಮಹಾಪುರುಷರಿಗೆ ಈ ಶಿಕ್ಷಕರ್ಯಾಕೆ ಕಾಣಲಿಲ್ಲ ಅನ್ನೋದು ವಿಪರ್ಯಾಸದ ಸಂಗತಿ.

ಶಿಕ್ಷಕ ಈ ದೇಶದ ಶಕ್ತಿ, ಯುಕ್ತಿ,ಭಕ್ತಿ ಹೀಗೆಲ್ಲ ಸಂಭೋದಿಸುವ ದೊಡ್ೞ ವ್ಯಕ್ತಿಗಳು, ಜನಪ್ರತಿನಿಧಿಗಳಿಗೇಕೆ ಇವರ ಬದುಕಿನ ಅತಂತ್ರದ ಸ್ಥಿತಿ ಗೋಚರಿಸುತ್ತಿಲ್ಲ.
ಜೊತೆಗೆ ಖಾಸಗಿ ಶಾಲೆಯವರಿಗೆ ಶಿಕ್ಷಕರೆಂದರೆ ಕೇವಲ ಅವಶ್ಯಕತೆಗಷ್ಟೆ ಸೀಮಿತಾನ ? ಅವರ ನೋವು ಗಳಿಗೆ ಸ್ಪಂದಿಸುವ ಮನಸ್ಥಿತಿ ಅವರಲ್ಲಿ ಯಾಕಿಲ್ಲ ಎನ್ನುವ ಮಾತು ಶಿಕ್ಷಕವಲಯದಲ್ಲಿ ಕೇಳಿ ಬರ್ತಿದೆ.

IMG 20200615 WA0167

ನಮ್ಮ ಮನೆಯಲ್ಲಿ ನಾನೊಬ್ಬನೆ ಮಗ ಅನಾರೋಗ್ಯಕ್ಕೆ ತುತ್ತಾದ ತಂದೆ ತಾಯಿ, ವಯಸ್ಸಿಗೆ ಬಂದ ಸಹೋದರಿ, ಗಂಡ ಬಿಟ್ಟು ಬಂದ ಅಕ್ಕನ ಕುಟುಂಬ ಎಲ್ಲಾವನ್ನು ನಾನೊಬ್ಬನೇ ನಿಭಾಯಿಸಬೇಕು ಆದರೆ ಈಗಿರುವ ತೊಂದರೆಯಿಂದ ಅತ್ತ ಶಾಲೆಯಿಂದ ಸಂಬಳನೂ ಇಲ್ಲ ಕೆಲಸವೂ ಇಲ್ಲದಂತಾಗಿ ಸಾಯುವ ಪರಿಸ್ಥಿತಿ ಬಂದಿದೆ ಎಂದು ಹೆಸರು ಹೇಳಲಿಚ್ಚಿಸದ ಶಿಕ್ಷಕರೊರ್ವರು ಅಳಲು ತೋಡಿಕೊಂಡಿದ್ದು ಹೀಗೆ.

 

ಈಗಾಗಲೇ ಸರ್ಕಾರ ಸುತ್ತೋಲೆ ಹೊರಡಿಸಿರುವ ಹಾಗೆ ಖಾಸಗಿ ಶಾಲೆಗಳಲ್ಲಿನ ಮಕ್ಕಳಿಂದ ಒತ್ತಾಯಪಡಿಸದೆ ಪಡೆದ ಪೀಸ್ ನಲ್ಲಿ ಶಿಕ್ಷಕರಿಗೆ ವೇತನ ನೀಡಬೇಕಿದೆ. ಎಂದು 

ಸಿದ್ದಗಂಗಯ್ಯ, ಪಾವಗಡ  ಕ್ಷೇತ್ರ ಶಿಕ್ಷಣಾಧಿಕಾರಿಗಳು. ತಿಳಿಸಿದ್ದಾರೆ.

 

ಏನೇ ಆಗಲಿ ತಮ್ಮ ಇಡಿ ಬದುಕಿನ ಸಮಯವನ್ನ ಒಂದು ಶಾಲೆಯ ಶ್ರೇಯೋಭಿವೃದ್ದಿಗಾಗಿ ಮೀಸಲಿಟ್ಟಿರುವ ಶಿಕ್ಷಕರು ಬದುಕಿನ ಆಸರೆಗೆ ಸರ್ಕಾರವಾಗಲಿ ಇತ್ತ ಖಾಸಗಿ ಶಾಲೆಯ ಮಾಲೀಕರಾಗಲಿ ಕ್ಯಾರೇ ಅನ್ನದೆ ನಿರ್ಲಕ್ಷ್ಯ ವಹಿಸಿರೋದು ಅಮಾನವೀಯ ಸಂಗತಿ ಎಂದರೆ ಅತಿಶಯೋಕ್ತಿಯಲ್ಲ.

ಆಗಾಗಿ ಈ ಕೂಡಲೇ ಸಂಬಂಧಿಸಿದ ಸರ್ಕಾರದ ಇಲಾಖಾ ಮಂತ್ರಿಗಳು ಮತ್ತು ಶಾಲೆಗಳ ಮುಖ್ಯಸ್ಥರು ಇವರ ಗೋಳಿಗೆ ಸ್ಪಂದಿಸಿ ಸಹಕರಿಸಬೇಕಿದೆ.

ವರದಿ: ನವೀನ್ ಕಿಲಾರ್ಲಹಳ್ಳಿ