IMG 20230724 WA0048

ಪಾವಗಡ : ಉನ್ನತ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಒಂದೇ ಮಾರ್ಗ….!

DISTRICT NEWS ತುಮಕೂರು
ಉನ್ನತ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಒಂದೇ ಮಾರ್ಗ. ಶಾಸಕ ಹೆಚ್.ವಿ  ವೆಂಕಟೇಶ್

ಪಾವಗಡ :. ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಾದ ಕನ್ನಡದ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿರಬೇಕು , ಮನೆಯಲ್ಲಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಬೇಕು ಎಂದು. ಶಾಸಕ ಎಚ್.ವಿ ವೆಂಕಟೇಶ್ ತಿಳಿಸಿದರು.

  ಪಟ್ಟಣದ ಎಸ್ ಎಸ್ ಕೆ ರಂಗಮಂದಿರದಲ್ಲಿ ಸೋಮವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಷತ್ತಿನ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉತ್ತಮವಾಗಿ ಓದಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು, ಹೆಚ್ಚಿನ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿರೋದು ಸಂತೋಷದ ವಿಷಯ
ಅದೇ ರೀತಿ ಇತರೆ ವಿಷಯಗಳಲ್ಲಿಯೂ ಉತ್ತಮ ಅಂಕಗಳನ್ನು ಗಳಿಸಿ ತಂದೆ ತಾಯಿಯರಿಗೆ ಗುರುಗಳಿಗೆ ಹಾಗೂ ತಾಲೂಕಿಗೆ ಕೀರ್ತಿ ತರಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಹಾಗೂ ಮಾರ್ಗದರ್ಶನ ನೀಡಿದ ಕನ್ನಡ ಶಿಕ್ಷಕರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥ್ ನಾರಾಯಣ್,  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆಎಸ್ ಸಿದ್ದಲಿಂಗಪ್ಪ,  ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಟ್ಟಾ ನರಸಿಂಹ ಮೂರ್ತಿ,ಎಸ್.ಎಸ್‌.ಕೆ ಸಂಘದ ಅಧ್ಯಕ್ಷ ಕೆ.ವಿ ಶ್ರೀನಿವಾಸ್, ಕೆ ಎಂ ಪ್ರಭಾಕರ್ , ನಾರಾಯಣಪ್ಪ, ರಂಗಪ್ಪ, ಎ.ಡಿ.ಎಂ.ಎಂ ಶಂಕರಪ್ಪ,
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ
ಓ ಧನಂಜಯ್. ಪ್ರಮೋದ್, ಪುರಸಭೆ ಸದಸ್ಯ ಇಮ್ರಾನ್ ಇತರರು ಹಾಜರಿದ್ದರು