ಐಡಿ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎನ್ ನರಸಿಂಹ ರೆಡ್ಡಿ ದಂಪತಿಯಿಂದ ಕೆರೆಗೆ ಬಾಗಿನ ಅರ್ಪಣೆ…………
ಮಧುಗಿರಿ ತಾಲ್ಲೂಕ್ ಐಡಿ ಹಳ್ಳಿ ಗ್ರಾಮದ ಕೆರೆಯ ಮೈದುಂಬಿ ಹರಿಯುತ್ತಿರುವುದರಿಂದ ಸಾಂಪ್ರದಾಯಿಕವಾಗಿ ಕೆರೆಗೆ ಬಾಗಿನ ಅರ್ಪಣೆ ಮಾಡಬೇಕೆಂದು ಊರಿನ ಗ್ರಾಮಸ್ಥರ ಮುಖಂಡರ ಜೊತೆಗೂಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎನ್ ನರಸಿಂಹ ರೆಡ್ಡಿ. ವಿಜಯಲಕ್ಷ್ಮಿ ದಂಪತಿಯೊಂದಿಗೆ . ಐ ಡಿಹಳ್ಳಿಯಲ್ಲಿ ಕೆರೆಗೆ ಬಾಗಿನ ಅರ್ಪಣಾ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಪೂಜಾ ಕಾರ್ಯಕ್ರಮ ನೆರವೇರಿಸಿದನಂತರ ಮಾತನಾಡಿದ ಎನ್ ನರಸಿಂಹ ರೆಡ್ಡಿ ಅವರು ಪ್ರತಿ ವರ್ಷವೂ ಸಹ ಇದೇ ರೀತಿಯಾಗಿ ತಾಲೂಕಿನಾದ್ಯಂತಕೆರೆಗಳು ಮತ್ತು ನಮ್ಮ ಗ್ರಾಮದ ಕೆರೆಯುತುಂಬಿದರೆ ರೈತರಿಗೆ ಮತ್ತು ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ಬಹಳ ಅನುಕೂಲವಾಗುತ್ತದೆ ಹಾಗೂ ಬೆಳೆಗಳನ್ನು ಸಮೃದ್ಧಿಯಾಗಿ ಬೆಳೆಯಲು ಅನುಕೂಲಕರವಾಗಿರುತ್ತದೆ ಎಂದು ತಿಳಿಸಿರುತ್ತಾರೆ. ಮತ್ತು ನಾನು ಗ್ರಾಮ ಪಂಚಾಯತಿ ಅಧ್ಯಕ್ಷನಾದ ಅಧಿಕಾರ ಅವಧಿಯಲ್ಲಿ ಕೆರೆ ತುಂಬಿ ಹರಿಯುತ್ತಿರುವುದು ನನಗೆ ತುಂಬಾ ಸಂತೋಷವಾಗಿ ಈ ದಿನ ಗ್ರಾಮದ ಎಲ್ಲರ ಜೊತೆಗೂಡಿ ಕೆರೆಗೆ ಬಾಗಿನ ಅರ್ಪಣೆ ಮಾಡಬೇಕೆಂದು ಎಲ್ಲರಲ್ಲಿ ಮನವಿ ಮಾಡಿಕೊಂಡಾಗ ತನ್ನ ಜೊತೆಯಲ್ಲಿ ಎಲ್ಲರೂ ಈ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಡಲು ಕಾರಣಭೂತರಾಗಿರುತ್ತಾರೆ ಅವರೆಲ್ಲರಿಗೂ ಕೂಡ ಸಹೃದಯದಿಂದ ವಂದನೆಗಳನ್ನು ತಿಳಿಸುತ್ತೇನೆ ಪೂಜಾ ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಕೆ ಶ್ರೀನಿವಾಸ್ ರೆಡ್ಡಿ ಐಡಿ ಹಳ್ಳಿವಿ ಎಸ್ ಎಸ್ ಏನ್ ಅಧ್ಯಕ್ಷರಾದ ಶನಿವಾರಮರೆಡ್ಡಿ ಕೇಶವರಡ್ಡಿ. ವೆಂಕಟಶಿವಾರೆಡ್ಡಿ ಕಾಮೇಗೌಡನಹಳ್ಳಿ ನಾಗರಾಜು ಸದಾಶಿವಯ್ಯ ಅನಿಲ್ ರೆಡ್ಡಿ ವೇಣುಗೋಪಾಲ್ ರೆಡ್ಡಿ. ಕೃಷ್ಣಾರೆಡ್ಡಿ ಗ್ರಾಮ ಪಂಚಾಯತಿ ಸದಸ್ಯರಾದ ನರಸಿಂಹಮೂರ್ತಿ. ನಿಂಗಯ್ಯ ಸುರೇಶ್. ಗೋಪಿ ನರಸಿಂಹಮೂರ್ತಿ ಹರೀಶ್. ನರೇಂದ್ರಬಾಬು ಶಬ್ಬೀರ್. ಅಂಜನಮೂರ್ತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ. ಲಕ್ಷ್ಮಿಪತಿ ದೊಡ್ಡ ಎಲ್ಕೂರು