IMG 20220805 WA0006

ಮಧುಗಿರಿ:ಲಕ್ಲಲಹಟ್ಟಗ್ರಾಮಕ್ಕೆ ಸಂಪರ್ಕ ಸೇತುವೆ ಕುಸಿದಿ ಬಿದ್ದು ಸಂಚಾರಕ್ಕೆ ಅಡ್ಡಿ…..!

DISTRICT NEWS ತುಮಕೂರು

ಮಿಡಿಗೇಶಿಹೋಬಳಿ.ಲಕ್ಲಲಹಟ್ಟಗ್ರಾಮಕ್ಕೆ ಸಂಪರ್ಕ ಸೇತುವೆ ಕುಸಿದಿ ಬಿದ್ದು ಸಂಚಾರಕ್ಕೆ ಅಡ್ಡಿ..

ಮಧುಗಿರಿ ತಾಲೂಕು ಮಿಡಿಗೇಶಿಹೋಬಳಿ ಲಕ್ಲೇಲಹಟಿ ಗ್ರಾಮಕ್ಕೆ ಹೋಗಲು ಸಂಪರ್ಕ ಸೇತುವೆ ಕುಸಿದು ಬಿದ್ದು ತುಂಬಾ ತೊಂದರೆಯಾಗುತ್ತಿದ್ದನ್ನು ಮನಗಂಡಂತಹ ಗ್ರಾಮದ ಸಾರ್ವಜನಿಕರು ಮುಖಂಡರುಗಳು .

ಮಧುಗಿರಿ ಪಾವಗಡ ಮುಖ್ಯ ರಸ್ತೆಗೆ. ಗ್ರಾಮಸ್ಥರೆಲ್ಲರೂ ರಸ್ತೆಗೆ ಬಂದು ಧರಣಿ ಕುಳಿತರು ಸಂಚಾರಕ್ಕೆ ತುಂಬಾ ಅಡಚಣೆಯಾಗಿ ಬಸ್ಸುಗಳು ದ್ವಿಚಕ್ರ ವಾಹನಗಳು ರಸ್ತೆಯಲ್ಲಿ ನಿಂತುಕೊಂಡಿದ್ದವು.

IMG 20220805 WA0001


ಲಕ್ಲೆ ಹಟ್ಟಿ ಗ್ರಾಮಸ್ಥರು ನಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯು ಕುಸಿದು ಬಿದ್ದು ಸುಮಾರು ದಿನಗಳು ಕಳೆದರೂ ಸೇತುವೆಯ ನಿರ್ಮಾಣ ಮಾಡದೆ ಇರುವುದರಿಂದ ನಾವು ಗ್ರಾಮಕ್ಕೆ ಮತ್ತು ಬೇರೊಂದು ಊರಿಗೆ ಸಂಚರಿಸಲು ತುಂಬಾ ತೊಂದರೆಯಾಗಿರುತ್ತದೆ ಆದ್ದರಿಂದ ಸಂಬಂಧ ಪಟ್ಟ ಜಿಲ್ಲಾಧಿಕಾರಿಗಳಾಗಲಿ ತಾಲೂಕ್ ಆಡಳಿತ ಮತ್ತು ಶಾಸಕರಾಗಲಿ ಇದುವರೆಗೂ ಕುಸಿದಿರುವ ಸೇತುವೆಯ ಪುನರ್ ನಿರ್ಮಾಣ ಮಾಡದೆ ಇರುವುದು ನಮಗೆ ತುಂಬಾ ನೋವಾಗಿದೆ ಆದ್ದರಿಂದ ನಾವುಗಳು ಈ ದಿನ ವರಮಹಾಲಕ್ಷ್ಮಿ ಹಬ್ಬವನ್ನು ಲೆಕ್ಕಿಸದೆ ಆಚರಣೆ ಮಾಡದೆ ನಮಗೆ ಸಂಚಾರ ಮಾಡಲು ದಾರಿ ಮತ್ತು ಸೇತುವೆ ಕುಸಿದಿರುವುದರಿಂದ ನಮಗೆ ತುಂಬಾ ಆಘಾತವಾಗಿದೆ .

ಮಕ್ಕಳು ಶಾಲೆಗೆ ಕಾಲೇಜುಗಳಿಗೆ ಹೋಗಬೇಕಾದರೆ ತುಂಬಾ ಕ್ಲಿಷ್ಟಕರ ಪರಿಸ್ಥಿತಿನಿರ್ಮಾಣವಾಗಿದೆ. ಆದ್ದರಿಂದ ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ನಮಗೆ ಸಂಚಾರ ಮಾಡಲು ಸೇತುವೆಯನ್ನು ನಿರ್ಮಾಣ ಮಾಡಿಕೊಡುವವರೆಗೂ ನಾವು ಈ ರಸ್ತೆ ಬಂದ್ ಮಾಡಿರುವುದನ್ನು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಾಗ ..

ಮಿಡಿಗೇಶಿ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಸ್ಎನ್ ರಾಜು ರವರು ಮಾತನಾಡಿ ಈ ಒಂದು ಕುಗ್ರಾಮಕ್ಕೆ ಸುಮಾರು ವರ್ಷ ಕಳೆದರೂ ನೆನೆಗುದಿಗೆ ಬಿದ್ದಿರುವ ಸೇತುವೆಯನ್ನು ಯಾವ ಅಧಿಕಾರಿಗಳು ಕೂಡ ಭೇಟಿ ನೀಡದೆ ಈ ಸೇತುವೆಯ ಸಂಪರ್ಕಕ್ಕೆ ಅನುಕೂಲ ಮಾಡಿಕೊಡದೆ ಸೇತುವೆಯನ್ನು ದುರಸ್ತಿ ಮಾಡದೆ ಇರುವುದ ಶೋಚನೀಯ ಸಂಗತಿ ಆದ್ದರಿಂದ ನಾನು ಕೂಡ ಇವರ ಜೊತೆಯಲ್ಲಿ ಈ ಸೇತುವೆ ಮಾಡಿಕೊಡುವವರೆಗೂ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಮುಖ್ಯ ರಸ್ತೆಯಲ್ಲಿಯೇ ಧರಣಿ ಕುಳಿತಿರುತ್ತವೆಎಂದು ತಿಳಿಸಿರುತ್ತಾರೆ.

ಮಧುಗಿರಿಯ ಪಾವಗಡ ಮುಖ್ಯ ರಸ್ತೆಯ ಬಂದಾಗಿಸಂಚಾರಕ್ಕೆ ತುಂಬಾ ತೊಂದರೆ ಆಗಿರುತ್ತಿರುವುದನ್ನು ಗಮನಿಸಿದಂತಹ ಸರ್ಕಲ್ ಇನ್ಸ್ಪೆಕ್ಟರ್ ಎಂ ಎಸ್ ಸರ್ದಾರ್ ಅವರು ಕೂಡಲೇ ತಕ್ಷಣ ಧರಣಿ ಕುಳಿತಿರುವ ಎಸ್ ಎನ್ ರಾಜುರವರಿಗೆ ಕರೆ ಮಾಡಿ ಇನ್ನು ಎರಡು ಮೂರು ದಿನಗಳಲ್ಲಿ ಆ ಗ್ರಾಮದ ಸಂಚಾರಕ್ಕೆ ಅಡ್ಡಿಯಾಗಿ ಕುಸುದು ಬಿದ್ದಿರುವ ಸೇತುವೆಯನ್ನು ನಿರ್ಮಾಣ ಮಾಡಿಕೊಡುತ್ತೇವೆ ಎಂದು ಭರವಸೆಯನ್ನು ನೀಡಿದಾಗ ರಸ್ತ್ ಬಂದಾಗಿರುವುದನ್ನು ವಾಪಸ್ಸು ಪಡೆದು ಗ್ರಾಮಸ್ಥರು ಹೊರ ನಡೆದರು..

ವರದಿ. ಲಕ್ಷ್ಮಿಪತಿ ದೊಡ್ಡ ಎಲ್ಕೂರು