IMG 20201117 WA0017

ಪಾವಗಡ: ಅಕ್ಕಿಪಿಕ್ಕಿ, ಬುಡುಬುಡಿಕೆ ಜನರ ನೆರವಿಗೆ ಬಂದ ಸ್ವಾಮೀಜಿ….!

DISTRICT NEWS ತುಮಕೂರು

 

ಪಾವಗಡ:- ಪಟ್ಟಣದಲ್ಲಿ ವಾಸವಿರುವ ಅಕ್ಕಿಪಿಕ್ಕಿ, ಬುಡುಬುಡಿಕೆ ಅಲೆಮಾರಿ ಜನಾಂಗದವರ ದುಸ್ಥರದ ಬದುಕನ್ನ ಕಂಡ ಶ್ರೀ ಸರ್ವಧರ್ಮ ಶಾಂತಿ ಪೀಠ ಆಶ್ರಮದ ರಾಮೂರ್ತಿ ಸ್ವಾಮೀಜಿಗಳು ಆಹಾರದ ಪಡಿತರ ವಿತರಿಸಿ ಅವರಲ್ಲಿ ವಿಶ್ವಾಸ ತುಂಬಿದರು.

ಕೊರೊನಾ ಆರಂಭದಿಂದಲೂ ಶ್ರೀ ರಾಮಾ ಮೂರ್ತಿ ಸ್ವಾಮೀಜಿಗಳು ತಮ್ಮ ಶಕ್ತಿ ಮೀರಿ ಬಡ ಬಗ್ಗರಿಗೆ, ನಿರ್ಗತಿಕರಿಗೆ ಆಹಾರವನ್ನ, ದವಸಧಾನ್ಯಗಳನ್ನು ವಿತರಿಸುವ ಮಹಾ ಮಾನವೀಯತೆ ಧರ್ಮವನ್ನ ಮೆರೆದಿದ್ದಾರೆ.
ಇನ್ನು ಅಂದಂದಿನ ಊಟಕ್ಕೂ ಪರದಾಡುವ ಅದೆಷ್ಟೋ ಮಂದಿಗೆ ಹಣ್ಣು ಹಾಲು, ಬಟ್ಟೆಗಳನ್ನ ನೀಡುತ್ತ ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗಿದ್ದಾರೆ. ಅಷ್ಟೇ ಅಲ್ಲದೆ ಅನಾಥಾಶ್ರಮದಲ್ಲಿನ ವೃದ್ದರಿಗೆ ಸೇವೆ ಮಾಡಿರುವ ಇಂದಿಗೂ ಮಾಡುತ್ತಿರುವ ನಿದರ್ಶನಗಳಿವೆ. ಅಂತಹ ಸೇವಾ ಕಾರ್ಯಗಳಲ್ಲಿ ಇದು ಕೂಡ ಒಂದು ಎಂದರೆ ತಪ್ಪೆನಿಸಿದು.

IMG 20201118 WA0000

ಸದಾ ನಿರ್ಗತಿಕ ನಿರಾಶ್ರಿತರ ನೊಂದವರ ನಾಡಿಮಿಡಿತ ಅರಿತಿರುವ ಶ್ರೀ ಸರ್ವಧರ್ಮ ಪೀಠದ ಪೂಜ್ಯ ರಾಮೂರ್ತಿ ಸ್ವಾಮೀಜಿಗಳು ಮಾತನಾಡುತ್ತ ಇಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳ ಗುಡಿಸಲುಗಳಿವೆ…ಇಂದಿಗೂ ಇವರಿಗೆ ಸಲ್ಲಬೇಕಾದ ಸರ್ಕಾರದ ಸವಲತ್ತು ಸಲ್ಲುತ್ತಿಲ್ಲ ಕಾರಣ ಅವರಿಗೆ ಅವಶ್ಯವಿರುವ ಆಧಾರ್,ಪಡಿತರ,ಚುನಾವಣೆ ಚೀಟಿ ಯಾವುದೇ ಗುರುತಿನ ಆಧಾರಗಳಿಲ್ಲದೆ ಇವರ ಬದುಕು ಮೂರಾಬಟ್ಟೆಯಾಗಿದೆ. ಆಗಾಗಿ ಸಂಬಂಧಿಸಿದ ಆಡಳಿತ ವರ್ಗ ಇಂತಹ ನೊಂದವರ ಬದುಕನ್ನೊಮ್ಮೆ ಕಂಡು ಆಸರೆಗೆ ನಿಂತು ನಿವೇಶನ ಕಲ್ಪಿಸಿ ಕೊಡಬೇಕಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.

*ವರದಿ: ನವೀನ್ ಕಿಲಾರ್ಲಹಳ್ಳಿ*