IMG 20220215 WA0039

ಪಾವಗಡ: ಸಂತ ಸೇವಾಲಾಲ್ 283 ನೇ ಜಯಂತಿ ಅಂಗವಾಗಿ ಶಾಲಾ ಬ್ಯಾಗ್ ವಿತರಣೆ …!

DISTRICT NEWS ತುಮಕೂರು

ಸಂತ ಸೇವಾಲಾಲ್ 283 ನೇ ಜಯಂತಿ ಅಂಗವಾಗಿ ಶಾಲಾ ಬ್ಯಾಗ್ ವಿತರಣೆ :ಹೆಲ್ಪ್ ಸೊಸೈಟಿ

ವೈ.ಎನ್.ಹೊಸಕೋಟೆ:ಯುವಕರು ದುಶ್ಯಟ್ಟಕ್ಕೆ ಬಲಿಯಾಗದೆ ನಿಮ್ಮನ್ನು ಹೆತ್ತು ಹೊತ್ತು ಕಷ್ಟ ಪಟ್ಟು ಸಾಕಿದ ತಂದೆ ತಾಯಂದಿರನ್ನು ಸುಖವಾಗಿ ಜೀವಿಸಲು ಪಣ ತೊಟ್ಟು ಸಹಕಾ ರಿಯಾಗುವಂತೆ ಹಾಗೂ ಗ್ರಾಮದಲ್ಲಿ ಅಕ್ರಮ ಚಟುವಟಿಕೆ ನಡೆಯದಂತೆ ಎಚ್ಚರ ವಹಿಸಿ ಶಾಂತಿ ಸೌಹಾರ್ದತೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಎಂದು ವೈ. ಎನ್. ಹೊಸಕೋಟೆ. ಪಿ. ಎಸ್. ಐ. ಭಾರತಿ ತಿಳಿಸಿದರು.

ಸಂತ ಸೇವಾಲಾಲ್ 283 ನೇ ಜಯಂತಿ ಹಾಗೂ ಹೆಲ್ಪ್ ಸೊಸೈಟಿ ವತಿಯಿಂದ ಮಂಗಳವಾರ ಹೋಬಳಿಯ ಮೆಗಲಪಾಳ್ಯ ದೊಡ್ಡ ಹಟ್ಟಿ ತಾಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಬ್ಯಾಗ್ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸಂತ ಸೇವಾಲಾಲ್ ಜಯಂತಿ ಪೂಜಾ ಹಾಗೂ ಶಾಲಾ ಮಕ್ಕಳಿಗೆ ಹೆಲ್ಪ್ ಸೊಸೈಟಿ ವತಿಯಿಂದ ಬ್ಯಾಗ್ ವಿತರಿಸಿ ಮಾತನಾಡಿದ ಸಮಾಜ ಸೇವಕ ಹಾಗೂ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಮಕ್ಕಳು ಒಳ್ಳೆ ವಿದ್ಯಾವಂತರಾಗಿ ಶಿಕ್ಷಣ ನೀಡಿದ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತರುವಂತೆ ಕರೆ ನೀಡಿ ಗ್ರಾಮದ ಅಭಿವೃದ್ಧಿ ಬಗ್ಗೆ ಸದಾ ನಮ್ಮ ಹೆಲ್ಪ್ ಸೊಸೈಟಿ ತಂಡ ನಿಮ್ಮ ಜೊತೆಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀನಿವಾಸ ನಾಯ್ಕ್, ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ, ಹೆಲ್ಪ್ ಸೊಸೈಟಿ ಪದಾಧಿಕಾರಿಗಳಾದ ವೆಂಕಟೇಶ್ ನಾಯ್ಕ್, ಸಾಯಿ, ನಂದೀಶ್ ನಾಯ್ಕ್, ಯುವಕರಾದ ಹರೀಶ್, ಗಣೇಶ್,ಚೇತನ್,ಅರ್ಜುನ್, ಶಾಲೆಯ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ: ಸತೀಶ್