FB IMG 1644996902375

ಪಾವಗಡ:ಶನೇಶ್ವರ ಸ್ವಾಮಿ ಬ್ರಹ್ಮರಥೋತ್ಸವ…!

DISTRICT NEWS ತುಮಕೂರು

ಶನೇಶ್ವರ ಸ್ವಾಮಿ ಬ್ರಹ್ಮರಥೋತ್ಸವ…….!

ಪಾವಗಡ:  ಇಂದು ಶ್ರೀ ಕ್ಷೇತ್ರ ಪಾವಗಡದಲ್ಲಿ ಜೇಷ್ಠಾದೇವಿ ಸಹಿತ ಶೈನೈಶ್ಚರ ಸ್ವಾಮಿ ಬ್ರಹ್ಮ ರಥೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು. ಕೋವಿಡ್ ನಿಂದಾಗಿ ಎರಡು ವರ್ಷಗಳಿಂದ  ಸರಳವಾಗಿ ರಥೋತ್ಸವ ನಡೆಸಲಾಗಿತ್ತು ಹಾಗೂ ಬೇರೆ ಊರುಗಳಿಂದ ಭಕ್ತಾದಿಗಳು ರಥೋತ್ಸವಕ್ಕೆ ಆಗಮಿಸಲು ನಿರ್ಬಂಧ ವಿಧಿಸಲಾಗಿತ್ತು.  ಆದರೆ ಇಂದು ಕೋವಿಡ್ ಕಡಿಮೆಯಾದ್ದರಿಂದ   ಸಾವಿರಾರು ಭಕ್ತಾದಿಗಳು  ರಥೋತ್ಸವಕ್ಕೆ ಬಂದು ಸ್ವಾಮಿ ಕೃಪೆಗೆ ಪಾತ್ರರಾದರು. 

ಬ್ರಹ್ಮ ರಥೋತ್ಸವದ ಪ್ರಯುಕ್ತ ಸಂಪ್ರದಾಯದಂತೆ ರಥಾಂಗ ಹೋಮ, ಗಣಪತಿ, ನವಗ್ರಹ, ಚಂಡೀ ಹೋಮ, ಕಳಶ ಸ್ಥಾಪನೆ, ಧ್ವಜಾರೋಹಣ, ಸತ್ಯನಾರಾಯಣ ಸ್ವಾಮಿ ಪೂಜೆ ಇತ್ಯಾದಿ ಪೂಜಾ ಕೈಂಕರ್ಯಗಳು ನಡೆದವು.ಮಂಗಳವಾರ ರಾತ್ರಿ ಜ್ಯೇಷ್ಠದೇವಿ ಹಾಗೂ ಶನೈಶ್ಚರ ಸ್ವಾಮಿ ಕಲ್ಯಾಣೋತ್ಸವ ನಡೆಯಿತು.

IMG 20220216 WA0028

ಶೀತಲಾಂಭ ದೇವಿಗೆ ರಥೋತ್ಸವದ ಅಂಗವಾಗಿ ಅಭಿಷೇಕ, ಕುಂಕುಮಾರ್ಚನೆ ಏರ್ಪಡಿಸಲಾಗಿತ್ತು. ಶೀತಲಾಂಭ ದೇವಿ ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.   ಬುಧವಾರ 11.50 ಕ್ಕೆ ಸರಿಯಾಗಿ ವೃಷಭ ಲಗ್ನದಲ್ಲಿ ಮಂಗಳ ವಾಧ್ಯಗೊಂದಿಗೆ ಜ್ಯೇಷ್ಠದೇವಿ ಹಾಗೂ ಶನೈಶ್ಚರ ಸ್ವಾಮಿ ಉತ್ಸವ ಮೂರ್ತಿಗಳನ್ನು ಕರೆ ತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಕೂಡಲೆ ನೆರೆದಿದ್ದ ಭಕ್ತಾದಿಗಳ ಧವನ ಸಿಕ್ಕಿಸಿದ್ದ ಬಾಳೆಹಣ್ಣನ್ನು ರಥದತ್ತ ಎಸೆದು ಶನೈಶ್ಚರ ಸ್ವಾಮಿಯ ಘೋಷಣೆಗಳನ್ನು ಕೂಗಿದರು. 

ರಥವನ್ನು ವಿವಿಧ ಬಣ್ಣದ ಹೂಗಳಿಂದ ಅಲಂಕರಿಸುವ ಕಾರ್ಯವನ್ನು ಪೂಲ್ ಭದ್ರಪ್ಪ ವಂಶಸ್ಥರಾದ ಮಂಜುನಾಥ್ ರವರು ನೆರವೇರಿಸಿದರು.ಶನೇಶ್ವರ ದೇವಾಲಯವನ್ನು ವಿವಿಧ ಹೂಗಳಿಂದ ಹಾಗೂ ಹಲವಾರು ಕಲಾಕೃತಿಗಳಿಂದ ಸಿಂಗರಿಸಲಾಯಿತು. ಅಪಾರ ಭಕ್ತಾದಿಗಳು ದೇವಾಲಯಕ್ಕೆ ಬಂದು ಸ್ವಾಮಿಯ ದರ್ಶನ ಮಾಡಿದರು. ದೇವಸ್ಥಾನದ ಸುತ್ತಲೂ ವಿವಿಧ ಬಗ್ಗೆ ಹೂಗಳಿಂದ ಅಲಂಕರಿಸಲಾಯಿತು

ವರದಿ: ಶ್ರೀನಿವಾಸುಲು ಎ.