ಸಂವಿಧಾನ ಪಿತಾಮಹಾ.ಡಾಕ್ಟರ್ ಬಿ .ಆರ್. ಅಂಬೇಡ್ಕರ್ ಪುತ್ತಳಿ ಪ್ರತಿಷ್ಠಾಪನೆ ಹಾಗೂ ನಿರ್ವಹಣಾ ಸಮಿತಿ ವತಿಯಿಂದ ಲೋಕಾರ್ಪಣೆ ಕಾರ್ಯಕ್ರಮ
ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಹೊಸ ವಿಚಾರ
ವಿಚಾರ ಧಾರೆಗಳನ್ನು ಮಾನವತೆಯ ಒಳಿತಿಗೆ ಎಲ್ಲರೂ ಒಗ್ಗೂಡಿ ಪ್ರೀತಿ , ವಿಶ್ವಾಸ ಬೆಳಸಿಕೊಂಡು ಸಮಾಜ ನಿರ್ಮಾಣ ಮತ್ತು
ಜನತೆಯ , ರಾಷ್ಟ್ರದ ಕಲ್ಯಾಣ ಬಯಸುವುದೇ ಸಂವಿಧಾನದ ಮೂಲ ದ್ಯೇಯೋದ್ಧೇಶವಾಗಿದೆ ಎಂದು ಮಾನವ ಬಂಧುತ್ವ ವೇದಿಕೆ ಅಧ್ಯಕ್ಷರು ಹಾಗೂ ಯಮನಕರಡಿ ಶಾಸಕ ಸತೀಶ್ ಜಾರಕಿಹೋಳಿ ತಿಳಿಸಿದರು.
ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಸಂವಿಧಾನ ಪಿತಾಮಹಾ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಪ್ರತಿಷ್ಟಾಪನೆ ಮತ್ತು ನಿರ್ವಹಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ನಮ್ಮ ದೇಶದಲ್ಲಿ ಹುಟ್ಟದೆ ಹೋಗಿದ್ದರೆ ನಮ್ಮ ಪರಿಸ್ಥಿತಿ ಹೇಗಿತ್ತು.? ಮನುವಾದಿಗಳು ನಮ್ಮನ್ನು ಹೇಗೆ ಆಳುತ್ತಿದ್ದರು ಎಂಬುದನ್ನು ಊಹಿಸಲು ಅಸಾಧ್ಯ, ದೇವದಾಸಿ ಅಸ್ಪೃಶ್ಯತೆ, ಶೋಷಣೆ ಇಂತಹ ಅನಿಷ್ಟ ಪದ್ದತಿಗಳನ್ನು ತೊಡೆದು ಹಾಕಿ.
ನವಂಬರ್ 27.ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಕೇವಲ ಪೂಜೆ, ಪುನಸ್ಕಾರಗಳಿಗೆ ಸೀಮಿತವಾಗಬಾರದು. ಅವರ ತತ್ವ ಸಿದ್ದಾಂತಗಳು ಆಚರಣೆಯಲ್ಲಿ ಅನುಷ್ಠಾನಗೊಳ್ಳಬೇಕು,ಅವರ ಹೋರಾಟ , ಸಂಘರ್ಷದ ಬದುಕು ನಮಗೆ ಎಚ್ಚರಿಕೆಯ ಗಂಟೆ ಆಗಬೇಕು.
ಸಂವಿಧಾನ ರಚನೆ ನಂತರ ಎಲ್ಲ ವರ್ಗ ದವರಿಗೂ ಶಿಕ್ಷಣ , ರಾಜಕೀಯ ,ಭೂಮಿ ಹಕ್ಕು , ಸಾಮಾಜಿಕ ಸಮಾನತೆ ದೊರಕುವ ಅವಕಾಶ ಸಿಕ್ಕಿದೆ. ಆದರೆ ಇದನ್ನು ಸಹಿಸದ ಕೆಲವರು ಸಂವಿಧಾನ ದಹಿಸುವುದು ವಿಷಾದನಿಯ ಎಂದರು
ಅಂಬೇಡ್ಕರ್ ರಚಿಸಿರುವ ಸಂವಿಧಾನ ಅತ್ಯಂತ ಶ್ರೇಷ್ಠ ಗ್ರಂಥ, ಸಂವಿಧಾನ ರಕ್ಷಣೆ ದಲಿತರ ಕೆಲಸವಷ್ಠೇ ಅಲ್ಲ, ಬಾರತೀಯ ಪ್ರತಿಯೊಬ್ಬರು ರಕ್ಷಿಸಲು ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಭಾರತೀಯರೆಲ್ಲರ ಹಿತಾಸಕ್ತಿ ಕಾಪಾಡುವಲ್ಲಿ ಸಂವಿಧಾನ ರೂಪಿತಗೊಂಡಿದೆ. ಆ ನಿಟ್ಟಿನಲ್ಲಿ ದೇಶದ ಪ್ರತಿ ಗ್ರಾಮಗಳಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣವಾಗಬೇಕು.ಬುಧ್ಧ,ಬಸವ,ಅಂಬೇಡ್ಕರ್ ವಿಚಾರಗಳನ್ನು ಹೊಸ ಪೀಳಿಗೆ ಅಧ್ಯಯನ ಮಾಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ ,ಅಂಬೇಡ್ಕರ್ ವಿಚಾರ ಧಾರೆಗಳು ಕೇವಲ ಭಾಷಣಕ್ಕೆ ಸೀಮಿತವಾಗಬಾರದು.ಸಂವಿಧಾನ ಮನುಕುಲದ ಆಸ್ತಿ,ಅಂಬೇಡ್ಕರ್ ರಚಿಸಿರುವ ಸಂವಿಧಾನದ ಫಲವಾಗಿ ನಾವುಗಳು ರಾಜಕೀಯ ಅಧಿಕಾರ ಗಳಿಸಲು ಸಾಧ್ಯವವಾಗಿದೆ. ಇಂದಿನ ರಾಜ್ಯಸರಕಾರ ಎಸ್ಸಿ , ಎಸ್‍ಟಿ .ಮತ್ತು ಬಡ ವರ್ಗದ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಟ್ಟಿಲ್ಲ,ಸತ್ಯ ಹೇಳಿದರೆ ತಪ್ಪು ವಾತವರಣ ಸೃಷ್ಠಿಸುತ್ತಾರೆ. ಸಿಎಂ ಸಿದ್ದರಾಮಯ್ಯ ಕಾಲದಲ್ಲಿ ಬಡವರಿಗೆ ತೆರೆದಿದ್ದ ಇಂದಿರಾ ಕ್ಯಾಂಟಿನ್ ಬಂದ್ ಮಾಡಲು ಬಿಜೆಪಿ ಸರ್ಕಾರ ಹೋರಟಿದೆ ಇದು ವಿಷಾದದ ಸಂಗತಿ ಎಂದ ಅವರು, ಈಗಿನ ರಾಜಕೀಯ ವಾತವರಣದಲ್ಲಿ ಜನ ಸೇವೆಗೆ ಬೆಲೆಯಿಲ್ಲ,ಹಣ,ಜಾತಿ ಆಧಾರದ ಮೇಲೆ ರಾಜಕೀಯ ನಡೆಯುತ್ತಿದ್ದು,ನನಗೆ ಜಾತಿ,ಹಣಬಲ ಎರೆಡು ಇಲ್ಲ ನನಗೆ ಬಡವರೆ ಆಧಾರ ಪೋಷಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಲ್ಲರೂ ಅಂಬೇಡ್ಕರ್ ಅವರ ವಿಚಾರ ಧಾರೆ ಅರಿಯಬೇಕು.ಸ್ವಾಭಿಮಾನದ ಬದುಕು ಕಟ್ಟಿಕೊಳ್ಲುವ ವಾತವರಣ ನಿರ್ಮಾಣವಾಗಬೇಕು ಎಂದರು.
ಕ್ಷೇತ್ರದ ಶಾಸಕ ಎಂ.ವಿ.ವೀರಭದ್ರಯ್ಯ ಸಂಭಾವಿತ ವ್ಯಕ್ತಿ , ನನಗೆ ಕಳೆದ ಚುನಾವಣೆಯಲ್ಲಿ ಮತದಾರರು ಎಲ್ಲಿಗೆ ಹೋದರೂ ಹೂವಿನ ಹಾರ ಹಾಕಿ ಜೈ ಘೋಷ ಕೂಗುತ್ತಿದ್ದರು.ಆದರೆ ಮತಗಳನ್ನು ಹಾಕಲಿಲ್ಲ, ಮತಗಳಿಸಿದ್ದರ ಗುಟ್ಟೇನೂ ಅದನ್ನು ನನಗೂ ಹೇಳಿ ಕೊಡಿ ಎಂದು ಶಾಸಕ ವೀರಭದ್ರಯ್ಯ ಅವರಿಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸಭೆಯಲ್ಲಿ ಕೇಳಿದ ಪ್ರಸಂಗ ಜರುಗಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಅಂಬೇಡ್ಕರ್ ಎಲ್ಲ ವರ್ಗದ ಜನರ ಹಿತ ಕಾಪಾಡುವ ಮೂಲಕ ಬೆಳಕು ನೀಡಿದ ಮಹಾತ್ಮ,ಜಗತ್ತಿನಲ್ಲಿ ಅತಿ ಹೆಚ್ಚು ಪ್ರತಿಮೆ ಹೊಂದಿರುವ ಮಹಾನಾಯಕ ಅಂಬೇಡ್ಕರ್ ಅವರ ಪುತ್ಥಳಿಗಳು , ಈ ನೆಲದ,ಧಮನಿತರ,ಶೋಷಿತರ,ದೀನ ದಲಿತರ ಹಾಗೂ ಎಲ್ಲ ವರ್ಗದ ಜನತೆಗೆ ಸಾಮಾಜಿಕ ಸಮಾನತೆ ನ್ಯಾಯ ದೊರಕಿಸಿ ಕೊಟ್ಟ ಮಹಾನಾಯಕ ಅಂಬೇಡ್ಕರ್ ,ಅವರ ಪುತ್ಥಳಿ ಇಲ್ಲಿ ನಿರ್ಮಿಸಿರುವುದು ಶ್ಲಾಘನೀಯ ಎಂದರು.
ಮಾಜಿ ಸಚಿವ ಎಚ್,ಆಂಜನೇಯ ಮಾತನಾಡಿ, ದಲಿತರು ಎಲ್ಲ ಜಾತಿ ಜನಾಂಗದವರ ಸೇವೆ ಮಾಡಿಕೊಂಡು ಬಂದಿರುವವವರು ಶಾಂತಿ,ಸಮಾದಾನ,ಸಹಬಾಳ್ವೆಯಿಂದ ಬಂದವರು,ನಿಷ್ಠೆಗೆ ಮತ್ತೊಂದು ಹೆಸರು ಮಾದಿಗ ಅಥವಾ ದಲಿತರು ನಮ್ಮ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರದ ಸವಲತ್ತುಗಳನ್ನು ಪಡೆಯಲು ಆಗಿಲ್ಲ,ತುಮಕೂರು ಜಿಲ್ಲೆಯಲ್ಲಿ ಮಾದಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು ಕಾಂಗ್ರೆಸ್ ಪಕ್ಷದಲ್ಲಿ ಗ್ರಾಪಂನಿಂದ ಹಿಡಿದು ಎ.ಎಲ್.ಎ, ಎಂಪಿ ವರೆಗೂ ರಾಜಕೀಯ ಟಿಕೆಟ್ ಕೇಳುವ ಗುಣ ಬೆಳಸಿಕೊಳ್ಳಿ, ಎಲ್ಲಿ ಗೆಲ್ತಿವೋ ಅಲ್ಲಿಗೆ ಟಿಕೆಟ್ ಕೊಡಲ್ಲ,ಸೋಲುವ ಕಡೆ ಟಿಕೆಟ್ ಕೊಡುತ್ತಾರೆ.ಒಂದು ಕಾಲದಲ್ಲಿ 25 ಜನ ಮಾದಿಗರು ಶಾಸಕರಿದ್ದರು ಆದರೆ ಈಗ ಅದು ಎಲ್ಲಿಗೆ ಹೋಯಿತು ಎಂದರು.
ವಿಶ್ರಾಂತ ಕುಲಪತಿ ಮಲ್ಲಿಕಾಗಂಟಿ ಮಾತನಾಡಿ ದಲಿತರು ಮನುವಾದಿಗಳ ಕೊಡುಗೆ ಏನೆಂದು ಮೊದಲು ಅರಿಯಬೇಕು ದಲಿತರಿಗೆ ಪೂಜೆ ಮಾಡುವ ಆರ್ಹತೆ ಇಲ್ಲವೆ ಎಂದು ಪ್ರಶ್ನಿಸಿದ ಅವರು ಸಭೆಯಲ್ಲಿ ಚಪ್ಪಾಳೆ ಮತ್ತು ತಮಟೆ ಬಡಿದರೆ ಸಾಲದು ಸಂವಿಧಾನ ಬದಲಿಸುತ್ತೇನೆಂದವರಿಗೆ ಮತದಾನದ ಮೂಲಕ ಬುದ್ದಿ ಕಲಿಸಬೇಕು ಇತ್ತೀಚಿನ ಐ ಸಿ ಎಚ್ ಆರ್ ಸುತ್ತೋಲೆ ಹಾಗೂ ಹಿಂದೂ ಕೋಡ್ ಬಿಲ್ ಗಳ ಬಗ್ಗೆ ತಿಳಿದುಕೊಂಡು ಮಹಾಪುರಷರ ಹೋರಾಟಗಳ ಬಗ್ಗ ಮಕ್ಕಳಿಗೆ ಮನೆಯಲ್ಲಿ ಪೋಷಕರು ಭೋಧನೆ ಮಾಡಬೇಕೆಂದರು.
ಮಧುಗಿರಿ ವಿಕಾಸ ಸಮಿತಿಯ ಅಧ್ಯಕ್ಷ ಭೀಮನಕುಂಟೆ ಹನುಮಂತೆಗೌಡ ಮಾತನಾಡಿ ನಾನು ಅಂಬೇಡ್ಕರ್ ಅನುಯಾಯಿಯಾಗಿದ್ದು ಅವರ ತತ್ವ ಸಿದ್ದಾಂತಗಳನ್ನು ಆಳವಡಿಸಿಕೊಂಡು ಕ್ಷೇತ್ರದಲ್ಲಿ ದೀನ ದಲಿತರ ಹಾಗೂ ಶೋಷಿತರ ಸೇವೆ ಮಾಡಲು ಇಲ್ಲಿಗೆ ಬಂದಿದ್ದೇನೆ ಎಂದರು.
ಜನಮುಖಿ ಸಂಸ್ಥೆ ಅಧ್ಯಕ್ಷ ಎಲ್.ಸಿ.ನಾಗಾರಜು, ಮಧುಚಾರಿಟಬಲ್ ಅಧ್ಯಕ್ಷ ಸಿ.ಎನ್. ಮಧು, ವಕೀಲ ನರಸಿಂಹಮೂರ್ತಿ ಮಾತನಾಡಿದರು.
ಅಂಬೇಡ್ಕರ್ ಪುತ್ಥಳಿ ಸಮತಿ ಅಧ್ಯಕ್ಷ ಡಾ.ಕೆ.ನರಸಿಂಹಪ್ಪ ಕಾಳೇನಹಳ್ಳಿ, ಮಾಜಿ ಸಂಸಂದ ಚಂದ್ರಪ್ಪ, ಚಳ್ಳಕೆರೆ ಶಾಸಕ ರಘುಮೂರ್ತಿ,ಮಾಜಿ ಶಾಸಕ ಗಂಗಹನುಮಯ್ಯ ,ವಿಧಾನಸೌಧ ಜಂಟಿ ಕಾರ್ಯದರ್ಶಿ ಶಶಿಧರ, ಪುರಸಭೆ ಅಧ್ಯಕ್ಷ ತಿಮ್ಮರಾಯಪ್ಪ, ಬಿಜೆಪಿ ತಾ.ಅಧ್ಯಕ್ಷ ಪುರವರ ಮೂರ್ತಿ, ಗ್ರಾ.ಪಂ.ಅಧ್ಯಕ್ಷೆ ನಸ್ರೀನ್ ತಾಜ್ , ಆದಿನಾರಾಯಣರೆಡ್ಡಿ , ಜೆ.ಡಿ.ವೆಂಕಟೇಶ್. ಕೆ .ವಿ ವೆಂಕಟೇಶ್ ಡಿ.ಟಿ.ಸಂಜೀವಮೂರ್ತಿ , ಸಮಿತಿಯ ಪದಾಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು