ತಾಲ್ಲೂಕಿನಲ್ಲಿ ಮುಕ್ತ ಮಾರುಕಟ್ಟೆಗೆ ಅವಕಾಶ ಅಗತ್ಯ. ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್
ಪಾವಗಡ : ಅನೇಕ ವರ್ಷಗಳಿಂದ ತಾಲ್ಲೂಕಿನಲ್ಲಿ ಒಂದೇ ಕ್ರಷರ್ ಕಾರ್ಯ ನಿರ್ವಹಿಸುತ್ತಿದ್ದು. ಏಕ ಸ್ವಾಮ್ಯ ಪದ್ಧತಿಯಿಂದ ಕೂಡಿದೆ ಎಂದು ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪಟ್ಟಣ ಬೆಳೆದಂತೆ ಗೃಹ ನಿರ್ಮಾಣ, ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣ ಕಾರ್ಯಗಳಿಗೆ ಬೇಕಾಗುವ ವಸ್ತುಗಳಾದ ಎಂ ಸ್ಯಾಂಡ್,ಪಿ ಸ್ಯಾಂಡ್, 20ಎಂ ಎಂ, 30 ಎಂ ಎಂ,
ಕಲ್ಲುಗಳನ್ನು ಒಂದೇ ಕ್ರಷರ್ ನಿಂದ ಪೂರೈಕೆ ಆಗುತ್ತಿದ್ದು, ಇತರೆ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಬೆಲೆಯೂ ಸಹ ಹೆಚ್ಚಾಗಿದೆ ಎಂದರು.
ಬೇಡಿಕೆ ಹೆಚ್ಚಿದಂತೆ ಪೂರೈಸಲು ಸಾಧ್ಯವಾಗದಿದ್ದಾಗ ಇತರೆ ಕ್ರಷರ್ ಗಳಿಗೂ ಅವಕಾಶ ನೀಡಬೇಕು, ಏಕಸ್ವಾಮ್ಯ ಧೋರಣೆಯನ್ನು ಶಾಸಕರು ಅನುಸರಿಸುತ್ತಿದ್ದು ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಪಕ್ಕದ ಆಂಧ್ರ ದಿಂದ ಎಂ ಸ್ಯಾಂಡ್, ಪಿ ಸ್ಯಾಂಡ್, ಮತ್ತು ಕಲ್ಲುಗಳನ್ನು ತರುವ ಟಿಪ್ಪರ್ ಗಳನ್ನು ಪಾವಗಡ ಪಟ್ಟಣಕ್ಕೆ ಬರೆದಂತೆ ಅಧಿಕಾರಿಗಳ ಮೂಲಕ ನಿರ್ಬಂಧ ಏರಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಗಡಿನಾಡು ಪ್ರದೇಶವಾದ ಪಾವಗಡ ಪಕ್ಕದ ಆಂಧ್ರದೊಂದಿಗೆ ಉತ್ತಮ ಬಾಂಧವ್ಯ ಹೊಂದುವುದುಅಗತ್ಯವೆಂದರು.
ತಾಲ್ಲೂಕಿನಲ್ಲಿ ಮುಕ್ತ ಮಾರುಕಟ್ಟೆಗೆ ಅವಕಾಶ ನೀಡಿ ಕಟ್ಟಡ ನಿರ್ಮಾಣ ಮಾಡುವಂತಹ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದರು.
ಕರ್ನಾಟಕದಲ್ಲಿ ಮರಳು ಹೊಡೆಯುವುದನ್ನು ಸರ್ಕಾರ ನಿಷೇಧಿಸಿದ್ದು, ಎಂ ಸ್ಯಾಂಡ್, ಪಿ ಸ್ಯಾಂಡ್ ಇತ್ತೀಚೆಗೆ ಬೇಡಿಕೆ ಹೆಚ್ಚಾಗಿದೆ ಎಂದರು.
ಇತ್ತೀಚೆಗೆ ಸರ್ಕಾರ ಮರಳಿನ ಬಗ್ಗೆ ಆದೇಶವನ್ನು ಮಾಡಿ ಮರಳನ್ನು ಮುಕ್ತವಾಗಿ ಅಗತ್ಯವಿದ್ದರಿಗೆ ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದು ಸ್ವಾಗತಾರ್ಹ ಅರ್ಹ ಅರ್ಹವಾಗಿದೆ ಎಂದರು
ಗ್ರಾಮ ಪಂಚಾಯಿತಿಗಳಲ್ಲಿ, ಸಭೆ ಮಾಡಿ ತಹಶೀಲ್ದಾರ್ ಮತ್ತು ಶಾಸಕರ ನೇತೃತ್ವದಲ್ಲಿ ಮರಳು ಶೇಖರಿಸಿ ಹರಾಜು ಹಾಕುವ ಪ್ರಕ್ರಿಯೆಗೆ ಶಾಸಕರು ಏಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.
ಪಾವಗಡದ ನಾಗಲ ಮಡಿಕೆಗೆ ಆಂಧ್ರದಿಂದ ಕೃಷ್ಣಾ ನದಿಯ ಹಿನ್ನೀರನ್ನು ಬಿಡುವುದನ್ನು ಮಾಜಿ ಶಾಸಕ ವೆಂಕಟರಮಣಪ್ಪ ವಿರೋಧಿಸಿದ್ದು, ಅದೇ ನೀರು ಅಗಸರಕುಂಟೆಗೆ ಹಾಯಿಸಿದಾಗ ಗಂಗ ಪೂಜೆ ಮಾಡಿದರೆಂದು ತಿಳಿಸಿದರು.
ತಾಲ್ಲೂಕಿನಲ್ಲಿ ಇದೇ ರೀತಿಯ ಧೋರಣೆ ಮುಂದುವರೆದರೆ ಪಕ್ಕದ ರಾಜ್ಯಗಳಿಂದ ಟಿಪ್ಪರ್ ಗಳನ್ನು ತರಿಸಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅಗತ್ಯವಾದ ವಸ್ತುಗಳನ್ನು ನಾವೇ ಮುಂದೆ ನಿಂತು ಕಳಿಸಲು ಮುಂದಾಗುತ್ತೇವೆ ಎಂದರು.
ಪಾವಗಡದಲ್ಲಿ ಇತರರೂ ಸಹ ಕ್ರಷರ್ ಗಳನ್ನು ಸ್ಥಾಪಿಸಲು ಮುಕ್ತ ಅವಕಾಶ ಅಗತ್ಯವೆಂದರು.