*ತಾಲೂಕಿನ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ಸರ್ಕಾರಿನೌಕರರ ನಿವೃತ್ತಿ ಬೀಳ್ಕೊಡುಗೆ ಕಾರ್ಯಕ್ರಮ* …....
ಮಧುಗಿರಿ ತಾಲೂಕಿನ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ಸರ್ಕಾರಿ ನೌಕರರು ಇಂದು ನಿವೃತ್ತಿಯಾಗಿದ್ದಾರೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸೇವೆ ಸಲ್ಲಿಸಿದ ಎಇ ಇ ಬಸವರಾಜು ರವರು ಜುಲೈ 31. 2023 ರಂದು ಸರ್ಕಾರಿ ಸೇವೆಯಿಂದ ನಿವೃತ್ತಿಯಾಗಿದ್ದಾರೆ ಅವರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ವಹಿಸಿಕೊಂಡಿದ್ದರು ಕಾರ್ಯಕ್ರಮ ಮೊದಲಿಗೆ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ವೇದಿಕೆ ಮೇಲೆ ಇದ್ದಂತಹ ಗಣ್ಯರನ್ನು ಸ್ವಾಗತಿಸಿ.
ಬೀಳ್ಕೊಡುಗೆ ಸಮಾರಂಭದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಧುಗಿರಿ ತಾಲೂಕಿನ ಸರಕಾರಿ ನೌಕರ ಸಂಘದ ಅಧ್ಯಕ್ಷರಾದ ಜಯರಾಮಯ್ಯ ಮಾತನಾಡಿ ನಾವು ಬಹುದಿನಗಳ ಕಾಲದಿಂದ ಆತ್ಮೀಯ ಸ್ನೇಹಿತರಾಗಿ ಒಂದೇ ಶಾಲೆಯಲ್ಲಿ ಓದಿಕೊಂಡು ಬಂದಿದ್ದೇವೆ ಅವರು ಮೊದಲಿಗೆ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ತದನಂತರ ಅವರು ಇಂಜಿನಿಯರ್ ಆಗಿ ನೇಮಕಗೊಂಡು ಬಹು ದಿನಗಳ ಕಾಲ ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇಂದು ಅವರು ನಿವೃತ್ತಿಯಾಗಿದ್ದಾರೆ ಅವರ ಕುಟುಂಬಕ್ಕೆ ಆರೋಗ್ಯ ಐಶ್ವರ್ಯ ಕೊಡಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಮತ್ತು ನಮ್ಮ ಅವರ ಒಡನಾಟ ವಿದ್ಯಾರ್ಥಿಯ ಆಗಿನಿಂದಲೂ ಕೂಡ ನಾವುಗಳ ಜೊತೆಯಾಗಿಯೇ ವಿದ್ಯಾಭ್ಯಾಸ ಮಾಡಿದ್ದೇವೆ ಎಂದು ತಿಳಿಸಿದರು.
ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ರೋಟರಿ ಕ್ಲಬ್ ನ ಅಧ್ಯಕ್ಷರಾದ ಎಮ್. ಶಿವಲಿಂಗಪ್ಪನವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ. ಬಸವರಾಜು ಅವರ ಕುಟುಂಬ ಸರ್ಕಾರಿ ನೌಕರರಿಂದ ಕೂಡಿದೆ ಅವರ ಐದು ಜನ ಅಣ್ಣತಮ್ಮಂದಿರು ಕೂಡ ಏನೇ ಕೆಲಸ ಕಾರ್ಯಗಳು ನಡೆದರೂ ಕೂಡ ಒಟ್ಟಿಗೆ ಸೇರಿ ಕಾರ್ಯಗಳನ್ನು ನಡೆಸಿಕೊಡುತ್ತಾರೆ ಮತ್ತು ಅಷ್ಟೇ ಆತ್ಮೀಯತೆವಾಗಿ ಅಣ್ಣತಮ್ಮಂದಿರು ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದಾರೆ ಮತ್ತು ನಾನೂ ಕೂಡ ಈ ಕುಟುಂಬಕ್ಕೆ ಹತ್ತಿರದವನಾಗಿದ್ದಾನೆ ಅವರು ಇಂದು ನಿವೃತ್ತಿಯಾಗಿರುವುದು ಒಂದು ಕಡೆ ಸಂತೋಷ ಮತ್ತು ಎಂದು ಕಡೆ ದುಃಖ ಏಕೆಂದರೆ ಇನ್ನೂ ಕೂಡ ಅವರು ಸರ್ಕಾರಿ ಕೆಲಸದಲ್ಲಿ ಸೇವೆ ಮಾಡುವ ಅವಕಾಶ ಇರಬೇಕಾಗಿತ್ತು. ಆದರೆ ಸರ್ಕಾರಿ ಸೇವೆಗೆ ಸೇರಿದ ನಂತರ ನಿವೃತ್ತಿ ಕಡ್ಡಾಯ ಆದ್ದರಿಂದ ಭಗವಂತ ಅವರಿಗೆ ಮತ್ತುಅವರ ಕುಟುಂಬಕ್ಕೆ ಆರೋಗ್ಯ ಐಶ್ವರ್ಯ ಲಭಿಸಲಿ ಮತ್ತು ಈ ದಿನ ಅಪಾರ ನೌಕರರ ಹಾಗೂ ಜನರ ಪ್ರೀತಿ ಗಳಿಸಿ ಈ ದಿನ ಅವರು ನಿವೃತ್ತಿಯಾಗಿದ್ದಾರೆ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಆಶಿಸುತ್ತೇನೆ ಎಂದರು.
ಇವರ ಜೊತೆಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಕೀರ್ತಿ ನಾಯಕ್ ಎಇ ಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕೊರಟಗೆರೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆರು ವರ್ಷಗಳಿಂದ ತುಂಬಾ ಆತ್ಮೀಯತೆಯಿಂದ ಇದ್ದೇವೆ ನಾನು ಮದುಗಿರಿಯಲ್ಲಿ ಇಂಜಿನಿಯರ್ ಆಗಿ ಎತ್ತಿನಹೊಳೆಯಲ್ಲಿ ಕೆಲಸ ಮಾಡುತ್ತಿರುವಾಗ ಬಸವರಾಜ್ ಸರ್ ಅವರು ನಮಗೆ ತುಂಬಾ ಸ್ಪಂದಿಸಿ ನಮ್ಮ ಜೊತೆ ಇದ್ದು ಜಮೀನಿನ ಪ್ರಬಾರೆಯನ್ನು ಮಾಡಿಸಿಕೊಟ್ಟಿದ್ದಾರೆ ಅವರ ಮಾರ್ಗದರ್ಶನ ನಿವೃತ್ತಿಗೊಂಡರು ಸಹ ನಮಗೆ ಅಗತ್ಯವಾಗಿದೆ ಈ ನಿವೃತ್ತಿ ಸಮಯದಲ್ಲಿ ಅವರು ಗಳಿಸಿರುವ ಪ್ರೀತಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸರ್ಕಾರಿ ನೌಕರರು ಹಾಗೂ ಅವರ ಹಿತೈಷಿಗಳೇ ಸಾಕ್ಷಿ ದೇವರು ಅವರಿಗೆ ಒಳ್ಳೆಯ ಆರೋಗ್ಯ ಹಾಗೂ ಇನ್ನೂ ಹೆಚ್ಚಿನ ಐಶ್ವರ್ಯ ಲಭಿಸಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದರು.
ಶಿಕ್ಷಣ ಇಲಾಖೆಯ ಜನಕಲೊಟಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ್( ಚಂದ್ರಣ್ಣ) ಅವರು ಕೂಡ ಸುಮಾರು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಒಳ್ಳೆಯ ಗುರುಗಳಾಗಿ ಹೊರಹೊಮ್ಮಿದ್ದಾರೆ ಈ ದಿನ ಅವರು ಕೂಡ ನಿವೃತ್ತಿಯಾದ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಅವರನ್ನು ಬೀಳ್ಕೊಡುಗೆ ಸಮಾರಂಭ ನಡೆಯಿತು ನಿವೃತ್ತಿಯ ಜೀವನ ಒಳ್ಳೆಯ ಸುಖಮಯವಾಗಿರಲಿ ಭಗವಂತ ಒಳ್ಳೆಯ ಆರೋಗ್ಯ ಐಶ್ವರ್ಯ ಕೊಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆಂದು ಪ್ರಾಥ ಮಿಕಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಂಜಯ್ ರವರು ತಿಳಿಸಿದರು ಮತ್ತು ಶಾಲೆಯ ಎಲ್ಲಾ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅವರ ಮಿತ್ರ ಬಳಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಜಯರಾಮಯ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ಸರ್ಕಾರಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ನಟರಾಜು. ಎಮ್ ಶಿವಲಿಂಗಪ್ಪ ಡಾಕ್ಟರ್ ರವೀಶ್. ಎಇ ಇಕೀರ್ತಿ ನಾಯಕ್. ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಎ ಇ ಇ ಮಂಜುನಾಥ್. ಎ ಆರ್ ಓ ಸಣ್ಣಪ್ಪಯ್ಯ. ಇಂಜಿನಿಯರ್ ಫಿರೋಜ್.ಚಿಕ್ಕ ರಂಗಯ್ಯ ವೆಂಕಟರಾಮು. ನಿರ್ಮಲ ಬಸವರಾಜು ಪ್ರಾಂಶುಪಾಲರಾದ ನೇರಂ ನಾಗರಾಜು.ಚಲವಾದಿ ಮಹಾಸಭಾ ಅಧ್ಯಕ್ಷರಾದ ಕೆ. ವಿ ವೆಂಕಟೇಶ್ ಶಿಕ್ಷಕರಾದ ರಮೇಶ್.ಅಂಬೇಡ್ಕರ್ ಬಸವರಾಜು ಧ್ರುವ ಕುಮಾರ್ ಶಿಕ್ಷಕರಾದ ನರಸಿಂಹಮೂರ್ತಿ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ ಲಕ್ಷ್ಮಿಪತಿ ದೊಡ್ಡ ಯ ಲ್ಕೂರು