IMG 20220616 WA0009

ಪಾವಗಡ:ಡಿ.ಎಸ್ .ಎಸ್. ಸಂಚಾಲಕ ನರಸಿಂಹಮೂರ್ತಿ ಹತ್ಯೆ ಬಗ್ಗೆ ಸಮಗ್ರ ತನಿಖೆಯಾಗಲಿ

DISTRICT NEWS ತುಮಕೂರು

ಡಿ.ಎಸ್ .ಎಸ್. ಸಂಚಾಲಕ ನರಸಿಂಹಮೂರ್ತಿ ಹತ್ಯೆ ಬಗ್ಗೆ ಸಮಗ್ರ ತನಿಖೆಯಾಗಲಿ ದಲಿತ ಮುಖಂಡ ಡಿ.ಜೆ.ಸ್ ನಾರಾಯಣಪ್ಪ …………..

ಪಾವಗಡ: ಬಿಜೆಪಿ ಸರ್ಕಾರಕ್ಕೆ ದಲಿತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲವೆಂದು. ಸರ್ಕಾರ ದಲಿತರ ಬಗ್ಗೆ ಮಲತಾಯಿ ಧೋರಣೆ ತೋರಿಸುತ್ತಿರುವುದು ಖಂಡನೀಯ ವಿಷಯವೆಂದು. ದಲಿತ ನರಸಿಂಹಮೂರ್ತಿ ಹತ್ಯೆ ಖಂಡಿಸಿ ಪಟ್ಟಣದಲ್ಲಿ ಗುರುವಾರ ದಲಿತಪರ ಸಂಘಟನೆ ಒಕ್ಕೂಟ ಸಹಯೋಗದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ದಲಿತ ಮುಖಂಡ ಡಿ.ಜೆ.ಎಸ್. ನಾರಾಯಣಪ್ಪ ಮಾತನಾಡಿ ರಾಜ್ಯದಾದ್ಯಂತ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರ್ಕಾರ ದಲಿತರ ಬಗ್ಗೆ ಮಲತಾಯಿ ಧೋರಣೆ ತೋರುತ್ತಿರುವುದು ಖಂಡನೀಯ ಎಂದರು.

ಪ್ರಗತಿ ಪರ ಸಂಘಟನೆಯ ಮುಖಂಡ ಪಾಳೇಗಾರ್ ಲೋಕೇಶ್ ಮಾತನಾಡಿ ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಪಂಗಡದ ಯುವಕರ ಕೊಲೆ ಪ್ರಕರಣ ಮಾಸುವ ಮುನ್ನವೇ ಗುಬ್ಬಿ ಪಟ್ಟಣದಲ್ಲಿ ಡಿ.ಎಸ್ .ಎಸ್. ಸಂಚಾಲಕ ನರಸಿಂಹಮೂರ್ತಿ ಹತ್ಯೆ ಖಂಡನೀಯ. ದಲಿತರಿಗೆ ರಕ್ಷಣೆ ನೀಡಿದ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ದಲಿತ ಮುಖಂಡ ಸಿ.ಕೆ ತಿಪ್ಪೇಸ್ವಾಮಿ ರಾಜ್ಯ ಸರ್ಕಾರ ದಲಿತರ ಮೇಲಿನ ದೌರ್ಜನ್ಯ ಮತ್ತು ಹತ್ಯೆಗಳನ್ನು ನಿರ್ಲಕ್ಷ್ಯ ತನದಿಂದ ನೋಡುತ್ತಿದ್ದು ಕೆಳ ವರ್ಗದವರಿಗೆ ನೆಲೆಯಿಲ್ಲದಂತಾಗುತ್ತಿದೆ. ಇದು ತುಂಬಾ ಬೇಸರ ತರಿಸುತ್ತಿದೆ ಹಾಗಾಗಿ ಸರ್ಕಾರ ಎಚ್ಚೆತ್ತು ಕೊಲೆಗೈದವರಿಗೆ ತಕ್ಕ ಶಿಕ್ಷೆಗೆ ಗುರಿಪಡಿಸಬೇಕು ಎಂದರು.

ಮುಖಂಡ ಕಡಪಲಕೆರೆ ಹನುಮಂತರಾಯಪ್ಪ ಬಿಜೆಪಿ ಸರ್ಕಾರದಲ್ಲಿ ದಲಿತರಿಗೆ ಸಾಮಾಜಿಕ ಭದ್ರತೆ ನೀಡುತ್ತಿಲ್ಲ, ಕೃತ್ಯವೆಸಗಿದವರಿಗೆ ಶಿಕ್ಷೆಯಾಗಬೇಕು ಜೊತೆಗೆ ಗೃಹಸಚಿವರನ್ನ ಸಚಿವ ಸ್ಥಾನದಿಂದ ರಾಜೀನಾಮೆ ಕೊಡಿಸಬೇಕು ಇಲ್ಲವಾದರೆ ಮುಂದಿನ ಹಂತದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಬಿ.ಎಸ್.ಪಿ ಮುಖಂಡ ಹನುಮಂತರಾಯ ಮಾತನಾಡಿ ಮೇಲಿಂದ ಮೇಲೆ ಇಂತಹ ದಲಿತರ ಹತ್ಯೆ ಪ್ರಕರಣ ನಡೆಯುತ್ತ ಇಡಿ ಸಮಾಜದಲ್ಲಿ ಕೋಮು ಗಲಭೆಗಳಿಗೆ ನಾಂದಿ ಹಾಡುತ್ತಿದೆ.ಇದು ಆರೋಗ್ಯಕರವಲ್ಲ ಎಂದು ಗುಡುಗಿದರು.

ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಸುಮತಿ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮುಖಂಡರಾದ ವಳ್ಳೂರು ನಾಗೇಶ್, ಪೆದ್ದನ್ನ, ಚಿನ್ನಮ್ಮನಹಳ್ಳಿ ವೆಂಕಟರವಣ, ಕನ್ನಮೇಡಿ ಕೃಷ್ಣ ಮೂರ್ತಿ, ಕಡಮಲಕುಂಟೆ ಹನುಮಂತರಾಯ, ನರಸಿಂಹಪ್ಪ,ಕೋಟಗುಡ್ಡ ಪದ್ಮಾ, ಕವಿತಾ ಮುಂತಾದವರಿದ್ದರು.

ವರದಿ: ಶ್ರೀನಿವಾಸಲು ಎ