IMG 20210629 WA0000

ಪಾವಗಡ: ಜೆಡಿ ಎಸ್ ಪ್ರತಿಭಟನೆ….!

DISTRICT NEWS ತುಮಕೂರು

 

ಪಾವಗಡ.ಪೆಟ್ರೋಲ್‌, ಡೀಸೆಲ್‌, ವಿದ್ಯುತ್‌, ರಸಗೊಬ್ಬರ ಹಾಗೂ ದಿನ ನಿತ್ಯದ ವಸ್ತುಗಳ ಬೆಲೆ ಏರಿಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸೈಕಲ್ ಸವಾರಿ ಮಾಡುವ ಮೂಲಕ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ಜೆಡಿಎಸ್ ಪಕ್ಷದ ಮುಖಂಡರು ಸೋಮವಾರ ಭಾರಿ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದರು.

ಮಾಜಿ ಶಾಸಕ ಕೆ ಎಂ ತಿಮ್ಮರಾಯಪ್ಪ ಅವರ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಇಂದು ತಾಲೂಕು ತಹಶೀಲ್ದಾರ್ ಕಚೇರಿ ಎದುರು ಭಾರಿ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದರು ನಂತರ ತಹಶೀಲ್ದಾರ್ ನಾಗರಾಜು ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಮನಬಂದಂತೆ ಬೆಲೆ ಹೆಚ್ಚಳ ಮಾಡುತ್ತಿದೆ. ವರ್ಷದಲ್ಲಿ ಹತ್ತಾರು ಬಾರಿ ತೈಲ ಉತ್ಪನ್ನಗಳ ಬೆಲೆ ಹೆಚ್ಚಿಸಿದೆ. ಅಡುಗೆ ಅನಿಲ ಬೆಲೆ ಹೆಚ್ಚಿಸಿ ಹೊಡೆತ ಕೊಟ್ಟಿದೆ. ರಸಗೊಬ್ಬರ ಬೆಲೆ ಹೆಚ್ಚಿಸಿ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ತೈಲ ಉತ್ಪನ್ನಗಳ ಬೆಲೆ ಹೆಚ್ಚಿಸಿದ್ದರಿಂದ ದಿನಸಿ, ಇತರ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಕಳೆದ ಒಂದುವರೆ ವರ್ಷದ ಲಾಕ್‍ಡೌನ್‍ನಿಂದ ಹೈರಾಣಾಗಿರುವ ಜನಸಾಮಾನ್ಯನಿಗೆ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ತಕ್ಷಣ ಬೆಲೆಯನ್ನು ಕಡಿಮೆ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಚುರುಕುಗೊಳಿಸಲಾಗುವುದು’ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಜೆಡಿಎಸ್ ಅಧ್ಯಕ್ಷ ತಿಮ್ಮಾರೆಡ್ಡಿ ಮಾತಾನಾಡಿ ಕೊರೊನಾ ಸೋಂಕಿನ ಮೊದಲ ಹಾಗೂ 2ನೇ ಅಲೆ ನಿಯಂತ್ರಿಸಲು ದೇಶ ಮತ್ತುರಾಜ್ಯಾದ್ಯಂತ ವಿಧಿಸಲಾದ ಲಾಕ್‌ಡೌನ್‌ನಿಂದ ಜನ ಬಳಲುತ್ತಿರುವ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಲೆ ಏರಿಕೆಯಿಂದ ಜನಸಾಮಾನ್ಯರ, ರೈತರ ಮತ್ತು ಕೂಲಿ ಕಾರ್ಮಿಕರ ಹಾಗೂ ದೀನ ದಲಿತರ ಪಾಲಿಗೆ ಗಾಯದ ಮೇಲೆ ಬರೆ ಏಳೆದಂತಾಗಿದೆ. ತಕ್ಷಣ ಅವಶ್ಯಕ ವಸ್ತುಗಳ ಬೆಲೆ ಇಳಿಸಬೇಕು ಲಾಕ್‌ಡೌನ್‌ನಿಂದ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ದುಡಿಮೆ ಇಲ್ಲದೆಕಂಗಾಲಾಗಿವೆ. ಕುಟುಂಬದ ಮುಖ್ಯಸ್ಥರು, ದುಡಿಯುವ ವ್ಯಕ್ತಿಗಳೇ ಮೃತಪಟ್ಟಿದ್ದು, ಇಡೀ ಕುಟುಂಬ ಬೀದಿ ಪಾಲಾಗಿವೆ.ಅಲ್ಲದೇ ಎಷ್ಟೋ ಕುಟುಂಬಗಳಲ್ಲಿ ತಂದೆ-ತಾಯಿ ಮೃತಪಟ್ಟಿದ್ದು, ಎಳೆ ಮಕ್ಕಳುಅನಾಥರಾಗಿದ್ದಾರೆ.

ಲಾಕ್‌ಡೌನ್‌ನಿಂದಾಗಿರೈತರು ತಾವು ಬೆಳೆದ ಆಹಾರ ಸಾಮಗ್ರಿ, ತರಕಾರಿ ಮತ್ತು ಹಣ್ಣು ಹಂಪಲು ಕಟಾವು ಮಾಡಿ ಅದನ್ನು ಸಾಗಿಸಲು ಮತ್ತು ಮಾರಾಟ ಮಾಡಲು ವರ್ತಕರಿಗೆ ತಲುಪಿಸಲಾಗದೆ ಫಸಲನ್ನು ಕೊಳೆಯಲು ಬಿಟ್ಟುನಿರ್ಗತಿಕರಾಗಿದ್ದಾರೆ. ಇತಂಹ ಸಮಯದಲ್ಲಿಬೆಲೆ ಏರಿಕೆ ಇವರೆಲ್ಲರ ಜೀವನ ಅಸ್ತವ್ಯಸ್ಥಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರುತೈಲ ಬೆಲೆ ಏರಿಕೆಯಿಂದ ರಾಜ್ಯದ ಜನ ನರಳುತ್ತಿರುವ ಸಮಯದಲ್ಲಿ ರಾಜ್ಯಸರಕಾರ ವಿದ್ಯುತ್‌ ದರ ಏರಿಕೆ ಮಾಡಿದೆ. ರಾಜ್ಯ ಸರ್ಕಾರ ಈ ನಿರ್ಧಾರವನ್ನು ಪುನರ್‌ ವಿಮರ್ಶಿಸಿ ದರ ಏರಿಕೆ ಹಿಂಪಡೆಯಬೇಕು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮುಖ್ಯಸ್ಥರು ಕೊರೊನಾ ಸೋಂಕಿನಿಂದ ಮೃತಪಟ್ಟರೆ ಅಂತಹ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರಘೋಷಿಸಿದ್ದು, ಇದನ್ನು ಯಾವುದೇ ಷರತ್ತು ಮತ್ತು ತಾರತಮ್ಯವಿಲ್ಲದೇ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ರಾಜಶೇಖರಪ್ಪ ವಕ್ತಾರ ಅಕ್ಕಲಪ್ಪ ನಾಯ್ಡ. ಮುಖಂಡರಾದ ಅಲ್ಪಸಂಖ್ಯಾತರ ಮುಖಂಡರಾದ ಯೂನೂಷ್. ಖಾದರ್. ಎನ್ ಎ ವಿರಣ್ಣ. ಗೊವಿಂದಬಾಬು. ಸತ್ಯಪ್ಪ. ಗೊವಿಂದಪ್ಪ ರಾಮಾಂಜಿನರೆಡ್ಡಿ. ಮಾಜಿ ಪುರಸಭಾ ಅಧ್ಯಕ್ಷ ಮಾನಂ ವೆಂಕಟಸ್ವಾಮಿ. ಲಿಂಗದಹಳ್ಳಿ ಸಣ್ಣ ರೆಡ್ಡಿ . ಪುರಸಭೆ ಮಾಜಿ ಸದಸ್ಯರಾದ ಮನು ಮಹೇಶ್. ನಾಗೇಂದ್ರ ಕುಮಾರ್. ಜಿ ಯ ವೆಂಕಟೇಶ್. ಪಟ್ಟಣ ಅಧ್ಯಕ್ಷ ಶಾಂತ ಕುಮಾರ್. ರೈತ ಘಟಕದ ಅಧ್ಯಕ್ಷ ಕೆಚ್ಚಗಾನಹಳ್ಳಿ ಗಂಗಾಧರ್ ನಾಯ್ಡು. ಕೊಟ್ಟಗೊಡ್ಡ ಅಂಜಿನಪ್ಪ. ಸತ್ಯಪ್ಪ. ಕಾವಲಗೇರೆ ರಾಮಾಂಜಿನಪ್ಪ ‌. ಅಂಜಿನೇಯಲು. ಟಿ ಎನ್ ಪೇಟೆ ರಮೇಶ್. ಕಡಪಲಕೆರೆ ನರಸಿಂಹಪ್ಪ. ಹನುಮಂತರಾಯಪ್ಪ. ಗುಟ್ಟಹಳ್ಳಿ ಮಣಿ. ಹಾಗೂ ಇನ್ನೂ ಮುಂತಾದವರು ಸಾವಿರಾರು ಜೆಡಿಎಸ್ ಮುಖಂಡರು ಹಾಜರಿದ್ದರು

ವರದಿ: ವೀರಸೇನಯಾದವ್