IMG 20210321 170643 scaled

ವೈ ಎನ್‌ ಹೊಸಕೋಟೆ ಗ್ರಾಮ ಪಂಚಾಯತಿ : ತೊಘಲಕ್ ದರ್ಬಾರ್ ….!

DISTRICT NEWS ತುಮಕೂರು

ವೈ ಎನ್‌ ಹೊಸಕೋಟೆ ಗ್ರಾಮ ಪಂಚಾಯತಿ

ತೊಘಲಕ್‌ ದರ್ಬಾರ್‌ ….!

ಇತಿಹಾಸ ಒಮ್ಮೆ ಅವಲೋಕಿಸಿದರೆ ನಮಗೆ ಒಂದು ಹೆಸರು ನೆನಪಾಗುತ್ತದೆ ಅದು ಮಹಮ್ಮದ್‌ ಬಿನ್‌ ತೊಘಲಕ್‌ ಎಂಬ ರಾಜ ಈತ ನನ್ನು ಹುಚ್ಚು ದೊರೆ ಎಂದು ಸೊಂಬೋದಿಸಿದ್ದಾರೆ. ಈತನ ಆಡಳಿತವನ್ನು ತೊಘಲಕ್‌ ದರ್ಬಾರ್‌ ಎಂದು ಇತಿಹಾಸಜ್ಞರು ಕರೆದಿದ್ದಾರೆ.

ತೊಘಲಕ್‌ ದರ್ಬಾರ್‌ ನಂತೆ, ಹುಚ್ಚು ರಾಜ ನ ಆಡಳಿತವನ್ನು ನೆನಪಿಸುವ ವಂತ ಅಡಳಿತವನ್ನು   ವೈ ಎನ್‌ ಹೊಸಕೋಟೆ ಗ್ರಾಮಪಂಚಾಯತಿ ಯಲ್ಲಿ ಕಾಣಬಹುದು.

 ಈ ಹಿಂದೆ  ಕಾಂಗ್ರೆಸ್‌ ಬೆಂಬಲಿತ ಸದಸ್ಯರ ಆಡಳಿತ ಇತ್ತು ಆಗ ಅವರು ಮಾಡಿದ್ದ ಭ್ರಷ್ಟಾಚಾರವನ್ನು ಸಪ್ತಸ್ವರ ಎಳೆ-ಎಳೆಯಾಗಿ ಬಿಚ್ಚಿಟ್ಟಿತ್ತು.ನಮ್ಮ ಪತ್ರಿಕೆಯನ್ನು ಜೆರೆಕ್ಸ್‌ ಮಾಡಿ ಮನೆ-ಮನೆ ಗೆ ಹಂಚಿ ನಾವು  ಒಳ್ಳೆಯ ಆಡಳಿತ ನೀಡುತ್ತೇವೆ ಎಂಬ ಆಶ್ವಾಸನೆಯೊಂದಿಗೆ ಅಧಿಕಾರಕ್ಕೆ ಬಂದರು ಜೆಡಿ ಎಸ್‌ ಬೆಂಬಲಿಗರು. ಇವರು ಮಾಡುತ್ತಿರುವ ಘನಂದಾರಿ ಕೆಲಸಗಳನ್ನು ನೋಡಿದರೆ ಜೆಡಿ ಎಸ್‌ ಪಕ್ಷ ಕ್ಕೆ ನಾಚಿಕೆಯಾಗಬೇಕು.

ಕಾಂಗ್ರೆಸ್‌ ನವರು ಐದು ವರ್ಷದಲ್ಲಿ ಲೂಟಿ ಮಾಡಿದ್ದನ್ನು ಇವರು ಹತ್ತು ತಿಂಗಳಲ್ಲಿ ಮಾಡಬೇಕಿದೆ. ಕಾರಣ ವೈ ಎನ್‌ ಹೊಸಕೋಟೆ ಗ್ರಾಮ ಪಂಚಾಯತಿ ಅದ್ಯಕ್ಷರ ಮೀಸಲಾತಿ ಪರಿಶಿಷ್ಟ ಪಂಗಡ ಮಹಿಳೆ  ಗೆ ಬಂದಿದ್ದು 30 ತಿಂಗಳ ಅವಧಿಯ ಅಧ್ಯಕ್ಷ ಗಾದಿಗೆ, ಜೆಡಿ ಎಸ್‌ ಬೆಂಬಲಿಗರು ಮೂರು.ಜನ  ಆಕಾಂಕ್ಷಿಗಳಿದ್ದರು, ಜೆಡಿ ಎಸ್‌ ಪಕ್ಷದ ತಾಲ್ಲೂಕು ನಾಯಕರು ಮೂವರು ಆಕಾಂಕ್ಷಿಗಳಿಗು ಹತ್ತು ತಿಂಗಳು ನೀಡಿದ್ದಾರೆ. ಇದರ ಪರಿಣಾಮ ಲೂಟಿ ಪ್ರಕ್ರಿಯೆ ಅವ್ಯಾಹತವಾಗಿ ನಡೆಯುತ್ತಿದೆ. ಇವರು ಚುನಾಣೆಯಗೆ ಬಂಡವಾಳ ಹಾಕಿದ್ದಾರೆ, ಅದನ್ನು ವಾಪಸ್ಸು ಪಡೆಯಬೇಕು ಎಂಬುದು ಗ್ರಾಮದ ಜನರಲ್ಲಿ  ಕೇಳಿ ಬರುತ್ತಿರುವ ಕೂಗು,  ಸಂಪೂರ್ಣ ವಿವರ ಮುಂದೆ ನೀಡುತ್ತಾ ಹೋಗುತ್ತೇವೆ.

ಗ್ರಾಮ ಪಂಚಾಯತಿಯಲ್ಲಿ ಹೊಸದಾಗಿ ಸುನಾಯಿತ ಸದಸ್ಯರು ಬಂದ ಮೇಲೆ ಮೂರು ತಿಂಗಳಲ್ಲಿ ವಾರ್‌ ಸಭೆ- ಗ್ರಾಮ ಸಭೆ ಮಾಡಿ ಐದು ವರ್ಷದ ಕ್ರಿಯಾ ಯೋಜನೆ ತಯಾರಿಬೇಕೆಂಬ ಸರ್ಕಾರಿ ಆದೇಶವಿದೆ. ಅದರ ಪಾಲನೆ ಮಾಡಿಲ್ಲ. ಇಲ್ಲಿಯವರೆಗು ಯಾವ ಸಭೆ ಮಾಡಿಲ್ಲ. ಕ್ರಿಯಾ ಯೋಜನೆ ಇಲ್ಲದೆ ಹಣ ಖರ್ಚು ಮಾಡುತ್ತಿದ್ದಾರೆ.

  ಪಾವಗಡ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವರಾಜಯ್ಯ ನವರು ನರೇಗಾ ಕಾಮಗಾರಿ ಹಾಗೂ 14 ಮತ್ತು 15 ಹಣಕಾಸು ಯೋಜನೆಯ ಬಗ್ಗೆ ಸಾಮಾಜಿಕ ಪರಿಶೋಧನೆ ಸಭೆ ಮಾಡಲು ಆದೇಶಿಸುತ್ತಾರೆ.ಇದರ ಭಾಗವಾಗಿ 4-10-21 ರಿಂದ 11-10-21 ರವರೆಗೆ ಮನೆ ಮನೆ ಗೆ ಭೇಟಿ ಕಾರ್ಯಕ್ರಮ ಮಾಡಿ ನಂತರ 13-10-21 ರಂದು ಗ್ರಾಮ ಸಭೆ ಮಾಡಲು 29-೦9- 21 ರಂದು ಜ್ಞಾಪನ ಪತ್ರ ಬರೆಯುತ್ತಾರೆ.

ಇ,ಒ ಆದೇಶಕ್ಕೂ ಬೆಲೆಯಿಲ್ಲ….?

.ಗ್ರಾಮ ಪಂಚಾಯತಿಯವರು ಯಾರ ಮನೆಗಳಿಗೂ  ಭೇಟಿ ನೀಡಿಲ್ಲ,ಗ್ರಾಮಸಭೆನೂ ಮಾಡಿಲ್ಲ ಯಾವ ಸರ್ಕಾರಿ ಆದೇಶಗಳನ್ನು ಪಾಲನೆ ಮಾಡಲ್ಲ ಇದುವೆ ತೊಘಲಕ್‌ ದರ್ಬಾರ್‌ ….!

2020-21 ರ ಆಯ-ವ್ಯಯ ವಿವರ ಯಾರಿಗೆ ನೀಡಿದ್ದೀರ…?

ಗ್ರಾಮ ಪಂಚಾಯತಿಗೆ 2020-21 ರಲ್ಲಿ ತೆರಿಗೆ/ ಬಾಡಿಗೆ ಸೇರಿದಂತೆ ಯಾವ-ಯಾವ ಮೂಲಗಳಿಂದ ಆದಾಯ ಬಂದಿದೆ ಮತ್ತು ಸರ್ಕಾರದ ಅನುದಾನದಗಳಿಂದ ಬಂದಿರುವ ಒಟ್ಟು ಹಣ ಎಷ್ಟು…? ಯಾವ-ಯಾವ ಗನಂಧಾರಿ ಕೆಲಸಕ್ಕೆ ಖರ್ಚು ಮಾಡಿದ್ದೀರ ಇದರ ವಿವರ ಯಾರಿಗೆ ನೀಡಿದ್ದೀರ…?

ಆರ್‌ ಟಿ ಐ ಮಾಹಿತಿ ನೀಡಲ್ಲ ಯಾಕೆ…?

ಪಂಚಾಯತಿ  ಕಾರ್ಯದರ್ಶಿ/ಪಿಡಿಒ  ಆರ್‌ ಟಿ ಐ ಕಾಯ್ದೆಯ ಅಡಿಯಲ್ಲಿ  ನೀವು ಮಾಡಿರುವ ಕೆಲಸಗಳ ಮಾಹಿತಿ ಕೇಳಿದರೆ ನೀಡುವುದಿಲ್ಲ. ವೈ ಎನ್‌ ಹೊಸಕೋಟೆ ಡಿ ಬ್ಲಾಕ್‌ ನಲ್ಲಿ ವಾಸವಿರುವ ಹಿರಿಯ ನಾಗರೀಕರೊಬ್ಬರು ಪಂಚಾಯತಿ ಆಯವ್ಯಯದ ವಿವರ ಕೇಳಿ ಅರ್ಜಿ ಹಾಕಿ ತಿಂಗಳುಗಳು ಕಳೆದರು ಇಲ್ಲಿಯ ವರೆಗೂ ಮಾಹಿತಿ ನೀಡಿಲ್ಲ.ಮಾಹಿತಿ ನೀಡಿದರೆ ಬ್ರಷ್ಟಾಚಾರ ಬಟಾ ಬಯಲು ಆಗುತ್ತೆ ಎಂಬ ಭಯ

. ಗ್ರಾಮ ಪಂಚಾಯತಿ ಗನಂಧಾರಿ ಕೆಲಸಗಳು….

ನರೇಗಾ ಯೋಜನೆ – 748 ಜಾಬ್‌ ಕಾರ್ಡ್‌  , 1530 ಜನರು  35.47 ಲಕ್ಷ ಕೂಲಿ ಹಣ

:-  ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯಾಜನೆಯಲ್ಲಿ ಬ್ರಷ್ಟಾಚಾರ ನಡೆದಿರುವುದು ಕಂಡುಬರುತ್ತದೆ. ಸಪ್ತಸ್ವರದಿಂದ ಹಲವು ಕಾಮಗಾರಿಗಳನ್ನು ಪರಿಶೀಲಿಸಿದರೆ ನಮಗೆ ತಿಳಿದ್ದು.   ವೈ ಎನ್‌ ಹೊಸಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಮೀನುಗಳಲ್ಲಿ ಅಭಿವೃದ್ಧಿಗಾಗಿ 35.47 ಲಕ್ಷ ಖರ್ಚಾಗಿದೆ. ಪಂಚಾಯತಿಯಿಂದ 2,29೦ ಜಾಬ್‌ ಕಾರ್ಡ್‌ ಕೊಟ್ಟಿದ್ದಾರೆ, ಇದರಲ್ಲಿ 5,125 ಜನ ಇದ್ದಾರೆ. ಇಲ್ಲಿನ ಆಸಕ್ತಿಯ ವಿಷಯವೆಂದರೆ ಸಕ್ರಿಯವಾಗಿ ಇರುವ ಜಾಬ್‌ ಕಾರ್ಡ್‌ ಕೇವಲ 748 ಅದರಲ್ಲಿ 1530 ಜನರು ಸಕ್ರಿಯವಾಗಿದ್ದಾರೆ.

748 ಜಾಬ್‌ ಕಾರ್ಡ್-‌ 1530 ಜನರಿಗಾಗಿ ಬಿಲ್‌ ಮಾಡಿರುವುದು 35.47 ಲಕ್ಷ ಹಣ ಈ 1530 ಜನರ ಹೆಸರಿಗೆ ಬಂದಿದೆ.ಯಾ..?

ಜೆಸಿಬಿಯಲ್ಲಿ ಕೆಲಸಮಾಡಿ  ಜಾಬ್‌ ಕಾರ್ಡ್‌ ಕೊಟ್ಟು ಹಣ ಲೂಟಿ ಹೊಡೆದಿದ್ದಾರಾ…!, ಕೃಷಿ ಹೊಂಡ 45-50 ಸಾವಿರ ರೀಚಾರ್ಜ್‌ ಪಿಟ್‌ ಗೆ 2 ಲಕ್ಷ ಹೀಗೆ ಹಲವಾರು ಯೋಜನೆ ಗಳಿಂದ ವೈ ಎನ್‌ ಹೊಸಕೋಟೆ ಗ್ರಾಮ ಪಂಚಾಯತಿಗೆ ಬಂದಿದೆ‌‌, ಹಲವು ಗ್ರಾಮ ಪಂಚಾಯತಿ ಸದಸ್ಯ ಮಹಾಶಯರು ಜಾಬ್‌ ಕಾರ್ಡ ಸಂಗ್ರಹಿಸಿ ಈ ದಂಧೆಗೆ ಇಳಿದಿದ್ದಾರೆ ಎಂಬ ಕೂಗು ಕೇಳಿ ಬರುತ್ತಿದೆ. ಇದಕ್ಕೆ ಜೊತೆಯಾಗಿ ಆರ್ಟ ಆಫ್‌ ಲಿವಿಂಗ್‌ ಹೆಸರು ಹೇಳಿಕೊಂಡ ಕೆಲವರು ಸದಸ್ಯರೊಂದಿಗೆ ಸೇರಿ ರೀಚಾರ್ಜ್‌ ಫಿಟ್‌ ಗಳನ್ನು 2 ಲಕ್ಷಕ್ಕೆ ಮಾಡುತ್ತಿದ್ದಾರೆ.

ನರೇಗಾ ಕೆಲಸ ಮಾಡಿಸಿದವರನ್ನು ಕೇಳಿದಾಗ ಅವರು ಹೇಳಿದ್ದು  ಪಂಚಾಯತಿ ಸಿಬ್ಬಂದಿ, ಇಂಜಿನಿಯರ್‌, ಜಾಬ್‌ ಕಾರ್ಡ್‌ ಸದಸ್ಯನಿಗೆ 300 ರಿಂದ 500 ನೀಡಿ ಮಿಕ್ಕಿದ್ದು ನನಗೆ ಅದಕ್ಕೆ ಜೆಸಿಬಿಯಲ್ಲಿ ಕೆಲಸ ಮಾಡಿಸುತ್ತೇವೆ ಎನ್ನುತಾರೆ.

16799de2 f7e3 4a48 8136 f68491097302 1

ಕಳೆದ ನಾಲ್ಕು  ವರ್ಷದಲ್ಲಿ  ನೆಡೆಯದಷ್ಟು ಕಾಮಗಾರಿಗಳು ಏಳು ತಿಂಗಳಲ್ಲಿ ನಡೆದಿದೆ ಕಾಮಗಾರಿಗಳ ಮೊತ್ತ

2017 ರಲ್ಲಿ 11.38 ಲಕ್ಷ, 2018-2019 ರಲ್ಲಿ 14.84 ಲಕ್ಷ, 2019-20 -23.65 ಲಕ್ಷ,  2೦20-21 27.66 ಲಕ್ಷ,  2021-22 35.47 ಲಕ್ಷ.

ಗ್ರಾಮ ಪಂಚಾಯತಿಗೆ ಬಂದಿರು ಅನುದಾನಗಳು..( ಸರ್ಕಾರದ ದಾಖಲೆ ಗಳಿಂದ)

* ಏಪ್ರಿಲ್‌ ನಿಂದ ಸೆಪ್ಟಂಬರ್‌ ವರೆಗೆ ಸಂಗ್ರಹ ಮಾಡಿರುವ ಹಣ ಅಂದಾಜು ೨೧ ಲಕ್ಷ

* 15 ಹಣಕಾಸು ಅಯೋಗದಿಂದ  2020-21 ಸಾಲಿನ ವೈಎನ್‌ ಹೊಸಕೋಟೆ ಪಂಚಾಯತಿಗೆ   ಫಂಡ್‌ ಅಲೋಕೇಟ್‌ ಹಾಗಿರುವುದು – 9748.೦69 ( ತ್ತೊಂಬತ್ತೇಳು ಲಕ್ಷದ ನಲವತ್ತೇಂಟು * ಸಾವಿರದ ಅರವತ್ತೋಂಬತ್ತು ರೂಪಾಯಿ)

2021-22 ನೇ ಸಾಲಿನ ಜುಲೈ 2021 ರಿಂದ ಸೆಪ್ಟಂಬರ್‌ 21 ರವರಗಿನ ಎರಡನೇ ತ್ರೈಮಾಸಿಕ ಕಂತಿನ  ಶಾಸನಬದ್ದ ಅನುದಾನವನ್ನು ಗ್ರಾಮ ಪಂಚಾಯತಿಗಳಿಗೆ ಮಾಡಲಾಗಿದೆ ಎಂಬ ನಡವಳಿಯನ್ನು ಬಿಡುಗಡೆ ಮಾಡಿದೆ.

* 2,45.897 ( ಎರಡು ಲಕ್ಷ ನಲವತೈದು ಸಾವಿರದ ಎಂಟುನೂರಾ ತೊಂಬತ್ತೇಳು ರೂಪಾಯಿ )

 ಬ್ಯಾಂಕ್‌ ಖಾತೆ  ಗೆ ಆನ್‌ ಲೈನ್‌ ಮೂಲಕ ವರ್ಗಾಯಿಸಿದೆ ಸಂಖ್ಯೆ – 64170343865

ಅನುಭಂದ-1  ಗ್ರಾಮ ಪಂಚಾಯತಿಗೆ  ಅನುದಾನ ಬಿಡುಗಡೆ ಯಾದ ದಿನಾಂಕ- 15-09-22

 ಅನುದಾನ ಮೊತ್ತ- 1,75606 ( ಒಂದು ಲಕ್ಷ್ಯ ಎಪ್ಪೈದುಸಾವಿರ ಆರನೂರಾ ಆರು ರೂಪಾಯಿ)

ಕೊರೊನಾ ಸಾಂಕ್ರಾಮಿಕ ರೋಗ ಹಿನ್ನಲೆಯಲ್ಲಿ  ಸ್ಯಾನಿಟೇಜರ್‌  ಖರೀದಿ-ಸಿಂಪಡಣೆಯ ಖರ್ಚು

 

ಹಣ ಹೆಂಡಕ್ಕೆ ಮತ ಮಾರಿ ಕೊಂಡರೆ ಇದೇ ಗತಿ

ಗ್ರಾಮಪಂಚಾಯತಿ ಚುನಾವಣೆ ಬಂದಾಗ  ಹಣ-ಹೆಂಡಕ್ಕೆ ಮತವನ್ನು ಮಾರಿಕೊಂಡು ಯೋಗ್ಯ ಅಭ್ಯರ್ಥಿಗಳನ್ನು ಪಂಚಾಯತಿಗೆ ಕಳುಹಿಸದಿರುವುದಕ್ಕೆ ಇಂದು ವೈ ಎನ್‌ ಹೋಸಕೋಟೆ ಗೆ ದುಸ್ತಿತಿ ಬಂದಿದೆ. ಇದು ಕೇವಲ ಏಳು ತಿಂಗಳ ಶ್ಯಾಂಪಲ್‌ ಇನ್ನು ಐದು ವರ್ಷದಲ್ಲಿ ಏನೆಲ್ಲಾ ನೋಡಬೇಕಿದೆ ಎಂಬ ನೋವನ್ನು ತೋಡಿ ಕೊಳ್ಳುತ್ತಾರೆ ಪ್ರಾಮಾಣಿಕ ಮತದಾರರು. ಸಂಬಂಧ ಪಟ್ಟ ಉನ್ನತ ಅಧಿಕಾರಿಗಳು ಶಿಸ್ತು ಕ್ರಮ ಜರುಗಿಸಬೇಕು ಎಂಬುದು ಜನರ ಒತ್ತಾಯ

ವೈ ಎನ್‌ ಹೆಚ್‌  ಪಂಚಾಯತಿ ಸ್ಥಿತಿ

ವೈ ಎನ್‌ ಹೊಸಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷರ ಪತಿಯ ಸ್ಪಷ್ಠೀಕರಣ

ವೈ ಎನ್‌ ಹೊಸಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷರ ಪತಿ ಓಬಳಶ ಅವರು ಸಪ್ತಸ್ವರ ಕ್ಕೆ ಪ್ರತಿಕ್ರಿಯೆ ನೀಡಿದ್ದು, ನಾವು ಯಾವುದೇ ತಪ್ಪು ಮಾಡಿಲ್ಲ, ಅಧಿಕಾರಿಗಳು ಸೇರಿದಂತೆ ಯಾರಾದರು ಅಕ್ರಮ ವೆಸಗಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಲು ನಮ್ಮ ಸಹಕಾರವಿದೆ ಎಂದಿದ್ದಾರೆ.

ಗ್ರಾಮ ಪಂಚಾಯತಿ ಅವ್ಯವಹಾರಗಳಾದ ಇ,ಸ್ವತ್ತು (ಖಾತೆ) ಮಾಡಿರುವುದು, ೧೪-೧೫ ಹಣಕಾಸು ಆಯೋಗದ ಹಣ ದುರಪುಯೋಗ, ನರೇಗಾ ಅಕ್ರಮ ಸೇರಿದಂತೆ ಎಲ್ಲಾ ಬ್ರಷ್ಠಾಚಾರ ಪ್ರಕರಣಗಳನ್ನು ಉನ್ನತ ಮಟ್ಟದ ತನಿಖೆ ವಹಿಸಬೇಕಿದೆ, ತನಿಖೆ ಮುಗಿಯುವ ವರೆಗು ಗ್ರಾಮಪಂಚಾಯತಿಯನ್ನು ಅಮಾನತ್ತಿನಲ್ಲಿ ಇಡಬೇಕಿದೆ ಆಗ ಮಾತ್ರ ಸತ್ಯಾಂಶ ಹೊರ ಬರಲಿದೆ.