ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಪ್ರಾದೇಶಿಕ ಸಭೆ…….
ಮಧುಗಿರಿ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ದಿನಾಂಕ 06.09. 2022 ರಂದು ತುಮಕೂರು ಸಹಕಾರಿ ಹಾಲು ಒಕ್ಕೂಟ ನಿಯಮಿತ ವತಿಯಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಪ್ರಾದೇಶಿಕ ಸಭೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತುಮಕೂರು ಸಹಕಾರಿ ಹಾಲು ಒಕ್ಕೂಟ ನಿಯಮಿತ ನಿರ್ದೇಶಕರಾದ ಕೊಂಡವಾಡಿ ಚಂದ್ರಶೇಖರ್ ಜಿಲ್ಲೆಯ ಎಲ್ಲಾ ರೈತರುಗಳು ಹೆಚ್ಚಿನದಾಗಿ ಹೈನುಗಾರಿಕೆಗೆ ಒತ್ತುಕೊಟ್ಟರೆ ಸುಖ ಸಂಸಾರದಿಂದ ನೆಮ್ಮದಿಯಿಂದ ಇರಬಹುದು ಮತ್ತು ಮಕ್ಕಳನ್ನು ಓದಿಸಲು ಮತ್ತು ಹೆಚ್ಚಿನ ವಿದ್ಯಾಭ್ಯಾಸ ಮಾಡಿಸಲು ಹೈನುಗಾರಿಕೆಯಿಂದ ಮಾತ್ರ ಸಾಧ್ಯ ಆದ್ದರಿಂದ ಈ ದಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡ 85ರಿಂದ 95 ಅಂಕಗಳು ಪಡೆದಿರುವ ವಿದ್ಯಾರ್ಥಿಗಳಿಗೆ ತುಮಕೂರು ಸಹಕಾರಿ ಹಾಲು ಒಕ್ಕೂಟ ನಿಯಮಿತ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಪ್ರಾದೇಶಿಕ ಸಭೆ ಮಾಡುತ್ತಿರುವುದು ನಮಗೆ ತುಂಬಾ ಖುಷಿಯಾಗುತ್ತಿದೆ ಮುಂದಿನ ದಿನಗಳಲ್ಲಿ ಸಹ ರೈತರ ಮಕ್ಕಳು ಅತಿಹೆಚ್ಚಿನ ಅಂಕಗಳನ್ನು ಪಡೆದು ಅವರು ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸಿ ಅವರ ತಂದೆ-ತಾಯಿಗಳಿಗೆ ಶೋಭೆ ತರಲಿ ಎಂದು ಈ ಸಂದರ್ಭದಲ್ಲಿ ಆಶಿಸುತ್ತೇನೆ ಎಂದರು.
ಈ ಸಂದರ್ಭದಲಿಸಹಕಾರಿ ಹಾಲು ಒಕ್ಕೂಟ ಸಂಘಗಳ ನಿವೃತ್ತ ಕಾರ್ಯದರ್ಶಿಗಳಾದ. ಶ್ರಾವಣ ಡಹಳ್ಳಿ ಚಂದ್ರಣ್ಣ. ನೇರಳೆ ಕೆರೆಯ ನರಸಿಂಹಮೂರ್ತಿ ಇವರುಗಳನ್ನು ಕೂಡ ಸಮಾರಂಭದಲ್ಲಿ ಸನ್ಮಾನಿಸಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ಸಹಕಾರಿ ಹಾಲು ಒಕ್ಕೂಟ ನಿಯಮಿತ ಅಧ್ಯಕ್ಷರಾದ ಸಿ.ವಿ .ಮಹಾಲಿಂಗಯ್ಯ ವಹಿಸಿಕೊಂಡಿದ್ದರು ಸ್ವಾಗತ ಭಾಷಣವನ್ನು ವ್ಯವಸ್ಥಾಪಕರಾದ ಪ್ರಸಾದ್ ರವರು ನಡೆಸಿಕೊಟ್ಟರು
ಕಾರ್ಯಕ್ರಮದ ನಿರೂಪಣೆಯನ್ನು ಸಹಕಾರಿ ಹಾಲು ಒಕ್ಕೂಟದ ಕಾರ್ಯನಿರ್ವಹಣಾಧಿಕಾರಿ ಗಿರೀಶನಿರೂಪಿಸಿದರು.
ಪ್ರತಿಭಾ ಪುರಸ್ಕಾರ ಹಾಗೂ ಪ್ರಾದೇಶಿಕ ಸಭೆಯ ಕಾರ್ಯಕ್ರಮದಲ್ಲಿ ತುಮಕೂರು ಸಹಕಾರಿ ಹಾಲು ಒಕ್ಕೂಟ ನಿಯಮಿತ ವ್ಯವಸ್ಥಾಪಕ ನಿರ್ದೇಶಕರಾದ ಸುರೇಶ್ ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷಣಿಯಾದ ಸುನಂದಮ್ಮಸಿದ್ದಪ್ಪ ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಲಕ್ಷ್ಮೀ ನರಸಪ್ಪ ಮಾಜಿ ತಾಲೂಕು ಪಂಚಾಯಿತಿ.ಸದಸ್ಯರುಗಳಾದ ದೊಡ್ಡಯ್ಯ. ನರಸಿಂಹರಾಜು. ರಂಗನಾಥ್. ತಾಲೂಕಿನ ಎಲ್ಲಾ ಹಾಲು ಒಕ್ಕೂಟ ಸಹಕಾರ ಸಂಘಗಳ ಅಧ್ಯಕ್ಷರುಗಳು ಹಾಗೂ ಕಾರ್ಯದರ್ಶಿಗಳು ಮುಂತಾದವರು ಕಾರ್ಯಕ್ರಮದಲ್ಲಿಹಾಜರಿದ್ದರು.
ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು