IMG 20230513 WA0092

ಪಾವಗಡ :ಹೆಚ್. ವಿ ವೆಂಕಟೇಶ್ ಗೆ ಅದ್ದೂರಿ ಸ್ವಾಗತ….!

DISTRICT NEWS ತುಮಕೂರು

ಹೆಚ್. ವಿ ವೆಂಕಟೇಶ್ ಗೆ ಅದ್ದೂರಿ ಸ್ವಾಗತ.

ಪಾವಗಡ : ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಜಯಭೇರಿ ಗಳಿಸಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್. ವಿ ವೆಂಕಟೇಶ್ 10, 881 ಮತಗಳ ಅಂತರದಲ್ಲಿ ಜಯಭೇರಿ ಭಾರಿಸಿದ್ದಾರೆ.

ಹೆಚ್ ವಿ ವೆಂಕಟೇಶ್ ನ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್ ನ ತಿಮ್ಮರಾಯಪ್ಪ 72181 ಮತಗಳನ್ನು ಗಳಿಸಿದ್ದಾರೆ.
ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ ವಿ ವೆಂಕಟೇಶ್ ರವರ ಗೆಲುವು ಇತಿಹಾಸವನ್ನೇ ಸೃಷ್ಟಿಸಿದೆ.

IMG 20230513 WA0106


ಪಾವಗಡ ಕ್ಷೇತ್ರದಲ್ಲಿ ಒಮ್ಮೆ ಒಂದು ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೆ. ಮತ್ತೊಮ್ಮೆ ಅದೇ ಪಕ್ಷ ಅಧಿಕಾರಕ್ಕೆ ಬರುತ್ತಿರಲಿಲ್ಲ.ಚುನಾವಣೆ ನಡೆದ ಪ್ರತಿ ಬಾರಿಯೂ ರಾಜ್ಯದಲ್ಲಿ ಆಡಳಿತ ಪಕ್ಷವೇ ಬೇರೆ . ತಾಲೂಕಿನ ಆಡಳಿತ ಪಕ್ಷವೇ ಬೇರೆ ಇರುತ್ತಿತ್ತು.ಆದರೆ ಈ ಬಾರಿ ತಾಲೂಕಿನಲ್ಲಿ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಇರುವುದರಿಂದ ತಾಲೂಕನ್ನು ಮತಷ್ಟು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ

ತಾಲೂಕಿನ ಜನರು.ಮಾಜಿ ಶಾಸಕ ವೆಂಕಟರಮಣಪ್ಪನವರ ಅಭಿವೃದ್ಧಿ ಕಾರ್ಯಗಳು ಹಾಗೂ ಕಾಂಗ್ರೆಸ್ ಪಕ್ಷದ
ಕಾಂಗ್ರೆಸ್ ಗ್ಯಾರಂಟಿಯ ಯೋಜನೆಗಳು ತಾಲೂಕಿನಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ ಎನ್ನುತ್ತಾರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು.

ವರದಿ. ಶ್ರೀನಿವಾಸಲು.ಎ