ಪಾವಗಡ . ಜನ ಸೇವೆ ಜನಾರ್ಧನ ಸೇವೆ ಶಾಸಕ ವೆಂಕಟರವಣಪ್ಪ . ಶಾಸಕರಾದ ವೆಂಕಟರವಣಪ್ಪ ಹಾಗೂ ಜಿ.ಪಂ ಸದಸ್ಯರಾದ
ಹೆಚ್ ವಿ ವೆಂಕಟೇಶ್ ರವರ ತಮ್ಮ ವೈಯಕ್ತಿಕ ಹಣದಿಂದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳ ಉಪಯೋಗಕ್ಕಾಗಿ ಸುಸಜ್ಜಿತವಾದ ಎರಡು ಆಂಬುಲೆನ್ಸ್ ಗಳನ್ನು ಮತ್ತು ಒಂದು ಜೆಸಿಬಿ ಯಂತ್ರವನ್ನು ಇಂದು ಪಾವಗಡ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಗೆ ಉಚಿತ ಸೇವೆಗೆಂದು ಕೊಡುಗೆಯಾಗಿ ಆಸ್ಪತ್ರೆಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಧಿಕಾರ ಯಾವಾಗಲು ಶಾಶ್ವತವಲ್ಲ ಅಧಿಕಾರದ ಅವಧಿಯಲ್ಲಿ ಜನರಿಗೆ ನೀಡುವ ಸೇವೆ ಸದಾ ಶಾಶ್ವತವಾಗಿರುತ್ತದೆ. ಕ್ಷೇತ್ರದ ಶಾಸಕನನ್ನಾಗಿ ಆರಿಸಿದ ಜನರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ.ಹೀಗಾಗಿ ಅಭಿವೃದ್ದಿ ನನ್ನ ಗುರಿ ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಜನರ ಪರ ಅನೇಕ ಕೆಲಸಗಳನ್ನು ಮಾಡಿದ್ದೇನೆ
ಕೋವಿಡ್ 2ನೇ ಅಲೆ ಪಟ್ಟಣ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದೆ ಪ್ರತಿಯೊಬ್ಬರೂ ಮಾಸ್ಕ್ ಧರಿಸುವ ಮೂಲಕ ಕೋವಿಡ್–19 ಸೋಂಕು ಹರಡುವಿಕೆ ತಡೆಗೆ ಮುಂದಾಗಬೇಕು ಬಡವರಿಗೆ ಊಟ ಮಾಡಲು ಅವಕಾಶ ಇದ್ದ ಎಲ್ಲಾ ಅವಕಾಶಗಳು ಮುಚ್ಚಿವೆ ರಸ್ತೆಬದಿ ಹೋಟೆಲ್ಗಳನ್ನು ನಂಬಿಕೊಂಡಿದ್ದ ನಿರ್ಗತಿಕರು ಊಟಕ್ಕಾಗಿ ಪರದಾಡುವಂತಾಗಿದೆ ಇಂಥ ಪರಿಸ್ಥಿತಿಯಲ್ಲಿ ಬಡವರು ಮತ್ತು ನಿರ್ಗತಿಕರ ಸಹಾಯಕ್ಕೆ ನಾನು ಕಾಯಕವೇ ಕೈಲಾಸ ನನ್ನ ಅಳಿಲು ಸೇವೆ ಆಸ್ಪತ್ರೆಯ ರೋಗಿಗಳ ಉಪಯೋಗಕ್ಕಾಗಿ ಸುಸಜ್ಜಿತವಾದ ಎರಡು ಆಂಬುಲೆನ್ಸ್ ಗಳನ್ನು ಮತ್ತು ಒಂದು ಜೆಸಿಬಿ ಯಂತ್ರವನ್ನು ಉಚಿತ ಸೇವೆಗೆಂದು ಕೊಡುಗೆಯಾಗಿ ಆಸ್ಪತ್ರೆಗೆ ಹಸ್ತಾಂತರಿಸಿದ್ದೇನೆ ಇಂಥ ಪರಿಸ್ಥಿತಿಯಲ್ಲಿ ಬಡವರು ಮತ್ತು ನಿರ್ಗತಿಕರ ಸಹಾಯಕ್ಕೆ ನಾನು ಸದಾ ಸಿದ್ಧ ಹಾಗೂ ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂದು ಹೇಳಿದರು
ಪಾವಗಡ ಶಾಸಕರಾದ ಶ್ರೀ ವೆಂಕಟರವಣಪ್ಪ ನವರು ಹಾಗೂ ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷರಾದ ಹೆಚ್ ವಿ ವೆಂಕಟೇಶ್ ಅವರು ಪಾವಗಡ ತಾಲೂಕಿನ ಪತ್ರಕರ್ತರಿಗೆ ದಿನಸಿ ಕಿಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ಕಿರಣ್, ತಾಲೂಕು ಪಂಚಾಯಿತಿ ಇ ಓ ಶಿವರಾಜಯ್ಯ. ಸರ್ಕಲ್ ಇನ್ಸ್ಪೆಕ್ಟರ್ ಎಸ್. ಲಕ್ಷೀ ಕಾಂತ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೇಶ್ ಬಾಬು , ಮಂಗಳವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್ ವಿ ವೆಂಕಟೇಶ್, ಪುರಸಭೆಯ ಅಧ್ಯಕ್ಷರಾದ ರಾಮಾಂಜಿನಪ್ಪ ಮಾಜಿ ಪುರಸಭೆ ಅಧ್ಯಕ್ಷ ಶಂಕರ್ ರೆಡ್ಡಿ ಸದಸ್ಯರಾದ ರಾಜೇಶ್, ರವಿ ವಿಜಿ ಕುಮಾರ್. ಮಹಮ್ಮದ್ ಇಮ್ರಾನ್. ಮುಖಂಡರಾದ ಪ್ರಮೋದ್ ಕುಮಾರ್. ಶ್ರೀನಿವಾಸ. ಇನ್ನೂ ಅನೇಕ ಕಾಂಗ್ರೆಸ್ ಮುಖಂಡರು ಹಾಜರಿದ್ದರು
ವರದಿ: ಬುಲೆಟ್ ವೀರ ಸೇನಯಾದವ್