IMG 20240123 WA0001

ಪಾವಗಡ: ಅದ್ದೂರಿಯಾಗಿ ನಡೆದ ಶ್ರೀ ರಾಮನ ಪೂಜೆ…!

DISTRICT NEWS ತುಮಕೂರು

 

ತಾಲೂಕಿನಾದ್ಯಂತ ಅದ್ದೂರಿಯಾಗಿ ನಡೆದ ಶ್ರೀ ರಾಮನ ಪೂಜಾ ಕಾರ್ಯಕ್ರಮ.

ಪಾವಗಡ : ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆ ಸಮಾರಂಭದ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಪ್ರತಿ ಹಳ್ಳಿಯಿಂದ ಹಿಡಿದು ಪಟ್ಟಣದವರೆಗೂ ಭಕ್ತಾದಿಗಳುು ತಮ್ಮದೇ ಆದ ರೀತಿಯಲ್ಲಿ ರಾಮನಿಗೆ ಪೂಜೆ ಪುನಸ್ಕಾರ ಮಾಡಿ ಸಂಭ್ರಮಿಸಿದರು.
ತಾಲೂಕಿನಾದ್ಯಂತ ಎಲ್ಲಾ ದೇವಾಲಯಗಳಲ್ಲಿ ಬೆಳಗಿನಿಂದಲೇ ವಿಶೇಷವಾದ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೆಂಡಾಲ್ ಹಾಕಿ ರಾಮದೇವರ ಚಿತ್ರಪಟಕ್ಕೆ ಪೂಜೆ ಸಲ್ಲಿಸಿ, ನೆರೆದಂತಹ ಭಕ್ತಾದಿಗಳಿಗೆ ಪ್ರಸಾದ ವಿನಯೋಗಿಸಲಾಯಿತು.

ಪಟ್ಟಣದ ಶ್ರೀ ಶನಿ ಮಹಾತ್ಮ ದೇವಾಲಯದ ಮುಂಭಾಗ ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆ ಸಮಾರಂಭದ ಕಾರ್ಯಕ್ರಮವನ್ನು ಭಕ್ತಾದಿಗಳಿಗೆ ಪರದೆಯ ಮೇಲೆ ಲೈವ್ ಶೋ ತೋರಿಸಲಾಯಿತು.

ಬಜರಂಗದಳ, ಶ್ರೀರಾಮ ಸೇನೆ, ಇನ್ನು ಹಲವಾರು ಸಂಘಗಳು ಶ್ರೀ ರಾಮನ ಚಿತ್ರಪಟಕ್ಕೆ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗಿಸಲಾಯಿತು.IMG 20240122 WA0054

ಪಟ್ಟಣದ ಶ್ರೀ ವೆಂಕಟೇಶ್ವರ ಆಂಗ್ಲ ಪ್ರೌಢ ಶಾಲೆಯಲ್ಲಿ ಶ್ರೀ ರಾಮನ ಚಿತ್ರಪಟಕ್ಕೆ ಪೂಜೆ ಸಲ್ಲಿಸಿ ಶಾಲೆಯ ವಿದ್ಯಾರ್ಥಿಗಳಿಗೆ ಪಾನಕ ಹೆಸರು ಬೆಳೆ ಪ್ರಸಾದ ನೀಡಲಾಯಿತು.

ವೈ.ಎನ್.ಹೊಸಕೋಟೆ : ವಿಶೇಷ ರಾಮಪೂಜೆ

ಹೋಬಳಿಯ  ರಾಮಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿದವು.

ಗ್ರಾಮದ ವಾಲ್ಮೀಕಿ ರಾಮಮಂದಿರ, ಅಶ್ವಥನಕಟ್ಟೆಯ ರಾಮಮಂದಿರ, ಕಾಳಿದಾಸ ನಗರದ ರಾಮಮಂದಿರ, ಎಸ್.ಕೆ.ಪಿ.ಟಿ ರಸ್ತೆಯ ರಾಮಮಂದಿರ, ಗಿಡ್ಡಾಂಜನೇಯಸ್ವಾಮಿಯ ಗುಡಿಗಳಲ್ಲಿ ರಾಮಪೂಜೆ ಮತ್ತು ಭಜನೆಗಳು ನೆರವೇರಿದವು.

ಗ್ರಾಮದ ಸಂತೆಊರುಬಾಗಿಲು, ನಿಡಗಲ್ಲು ಊರುಬಾಗಿಲು, ಸಂತೆಮೈದಾನ, ಇಂದಿರಾಬಡಾವಣೆ, ಅಂಬೇಡ್ಕರ್ ಕಾಲೋನಿ ಸೇರಿದಂತೆ ವಿವಿಧ ಭಾಗಗಳಲ್ಲಿ ರಾಮಭಕ್ತರು ಶ್ರೀರಾಮನ ಪ್ಲೆಕ್ಸ್ ಅಳವಡಿಸಿ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಮತ್ತು ಪಾನಕ ವಿತರಿಸಿದರು. ಮಹಾತ್ಮ ಗಾಂಧಿ ವೃತ್ತದಲ್ಲಿ ವಿಶ್ವಹಿಂದು ಪರಿಷತ್ತು ಮತ್ತು ಭಜರಂಗದಳದ ವತಿಯಿಂದ ಪ್ಲೆಕ್ಸ್ ಹಾಕಿ ವಿಶೇಷ ಪೂಜೆ ಸಲ್ಲಿಸಿದರು.

IMG 20240122 WA0055
ಅಯೋಧ್ಯೆಯ ಶೀರಾಮ ದವರು

ಗ್ರಾಮದ ವೈಶ್ಯ ಜನಾಂಗದವರು ಸಂಘದ ಅಧ್ಯಕ್ಷರಾದ ಎನ್.ಆರ್.ಅಶ್ವಥ ಕುಮಾರ್ ಮುಖಂಡತ್ವದಲ್ಲಿ ವಿಶೇಷವಾಗಿ ಶ್ರೀರಾಮನ ಭಾವಚಿತ್ರದೊಂದಿಗೆ ಶ್ರೀರಾಮನಾಮಪಠಣ ಮತ್ತು ರಘುಪತಿ ರಾಘವ ರಾಜರಾಂ ಹಾಡನ್ನು ಹಾಡುತ್ತಾ, ಪುರಮೆರವಣಿಗೆ ನಡೆಸಿ ಗಾಂಧಿವೃತ್ತಕ್ಕೆ ಆಗಮಿಸಿ ಗಾಂಧಿ ಪುತ್ತಳಿಗೆ ಪೂಜೆ ಸಲ್ಲಿಸಿದರು.

ಸಿದ್ದಾಪುರ, ನಾಗಲಾಪುರ, ಪೋತಗಾನಹಳ್ಳಿ, ಹನುಮಂತನಹಳ್ಳಿ, ಭೀಮನಕುಂಟೆ, ಪೋಲೇನಹಳ್ಳಿ, ಹನುಮಂತನಹಳ್ಳಿ, ಬೂದಿಬೆಟ್ಟ, ದೊಡ್ಡಹಳ್ಳಿ, ಇಂದ್ರಬೆಟ್ಟ, ಹೊಸದುರ್ಗ, ದಳವಾಯಿಹಳ್ಳಿ, ಕುಣಿಹಳ್ಳಿ, ಬಿ.ಹೊಸಹಳ್ಳಿ, ಮೇಗಳಪಾಳ್ಯ, ರಂಗಸಮುದ್ರ, ಬಲ್ಲೇನಹಳ್ಳಿ ಇನ್ನಿತರ ಗ್ರಾಮಗಳ ರಾಮಮಂದಿರ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆಗಳು, ಹೋಮ ಹವನಗಳು, ರಾಮತಾರಕ ಮಂತ್ರ ಪಠಣೆ ಮತ್ತು ರಾಮಭಜನೆ ಕಂಡುಬಂದವು.

ವರದಿ. ಶ್ರೀನಿವಾಸಲು. A- ಪಾವಗಡ

ರಾಮಚಂದ್ರ –  ವೈ.ಎನ್.ಎಚ್