ಗ್ರಾಮ ಪಂಚಾಯಿತಿ ಅಧ್ಯಕ್ಷರ ಆಯ್ಕೆ.
ಪಾವಗಡ : ತಾಲ್ಲೂಕಿನ ರಾಜವಂತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಣಿವೇನಹಳ್ಳಿ ಗ್ರಾಮದ ನೇತ್ರಾವತಿ ನರೇಶ್ ಅಧ್ಯಕ್ಷರಾಗಿ ಆಯ್ಕೆಯಾದರು.
ಹಿಂದಿನ ಅದ್ಯಕ್ಷರ ರಾಜಿನಾಮೆಯಿಂದ ತೆರವಾಗಿದ್ದಅಧ್ಯಕ್ಷರ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಜೆಡಿಎಸ್ ಬೆಂಬಲಿತ 11 ಮಂದಿ ಸದಸ್ಯರು, ಕಾಂಗ್ರೆಸ್ ಬೆಂಬಲಿತ 8 ಸದಸ್ಯರಿದ್ದು.
ಜೆಡಿಎಸ್ ಬೆಂಬಲಿತ ನೇತ್ರಾವತಿ ನರೇಶ್ ಬಹುಮತ ಪಡೆಯುವ ಮೂಲಕ ರಾಜವಂತಿಗ್ರಾಮ ಪಂಚಾಯಿತಿಯ ನೂತನ ಅದ್ಯಕ್ಷರಾಗಿ ನೇತ್ರಾವತಿ ಆಯ್ಕೆಯಾದರು.
ತಹಶೀಲ್ದಾರ್ ಡಿ.ಎನ್.ವರದರಾಜು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಜೆಡಿಎಸ್ ಪಕ್ಷದ ಜಿಲ್ಲಾದ್ಯಕ್ಷ ಆರ್.ಸಿ ಅಂಜಿನಪ್ಪ, ಉಪಾದ್ಯಕ್ಷೆ ರಾಧಮ್ಮ, ಮಾಜಿ ಅದ್ಯಕ್ಷೆ ಭವ್ಯಶ್ರೀ, ಸದಸ್ಯ ಶ್ರೀರಾಮಪ್ಪ, ನಿಂಗಪ್ಪ, ರಂಗಮ್ಮ, ಈಶ್ವರಮ್ಮ, ಪಾರ್ವತಮ್ಮ, ರಾಮಚಂದ್ರನಾಯ್ಕ, ಮಂಜಪ್ಪ, ಮುತ್ತಕ್ಕ, ಶಿವಣ್ಣ, ಹನುಮಂತರಾಯಪ್ಪ, ಕೆಂಚಪ್ಪ, ರಾಜಪ್ಪ, ಮಹೇಶ್, ಸುಬ್ಬರಾಯಪ್ಪ, ದಾಸನಾಯಕ ಇದ್ದರು.
ವರದಿ. ಶ್ರೀನಿವಾಸಲು. A