IMG 20220812 WA0001

ಮಧುಗಿರಿ:ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಆಗ್ರಹ …!

DISTRICT NEWS ತುಮಕೂರು

*ತಾಲೂಕು ಕನ್ನಡ ಜಾಗೃತಿ ವೇದಿಕೆ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ದ. ದುರಸ್ತಿಗೆ ಆಗ್ರಹ ..,……..*

ಮಧುಗಿರಿ ಪಟ್ಟಣದ 19 ನೇ ವಾರ್ಡಿನಲ್ಲಿ ಎಂ.ವಿ.ವೀರಭದ್ರಯ್ಯನವರು ಸುಮಾರು 8 ಲಕ್ಷ ವೆಚ್ಚದ ಶುದ್ಧ ನೀರಿನ ಘಟಕವನ್ನು ಇತ್ತೀಚೆಗೆ ಉದ್ಘಾಟನೆ ಮಾಡಿದರು. ಆದರೆ ಈ ಶುದ್ಧ ನೀರಿನ ಘಟಕವು ಬಡಾವಣೆಯ ಜನರಿಗೆ ಇದರಿಂದ ಶುದ್ಧನೀರು ಕುಡಿಯಲು ಪ್ರಯೋಜನವಾಗುತ್ತಿಲ್ಲ.

ಶುದ್ಧ ನೀರಿನ ಘಟಕವು ಪುರಸಭೆಯ ವ್ಯಾಪ್ತಿಗೆ ಒಳಪಟ್ಟಿದ್ದು ಯಾರು ಕೂಡ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಶುದ್ಧ ನೀರಿನ ಘಟಕಕ್ಕ ಕೊಳಚೆ ನೀರುಹರಿದು ಬಂದು ಶುದ್ಧ ನೀರಿ ನಘಟಕದ ಸಂಪಿನೊಳಗೆ ಹೋಗಿ ಅದೇ ನೀರು ಮತ್ತೆ ಶುದ್ಧಗೊಂಡು ಹೊರ ಹೊರ ಬರುತ್ತಿರುವುದನ್ನುಮನಗಂಡಂತಹ ಜನತೆ ಶುದ್ಧ ಘಟಕದ ನೀರುಕುಡಿಯಲು ಬಳಸುತ್ತಿಲ್ಲ. ಎಂಬುದನ್ನುಗಮನಿಸಿದಂತಹ ಕನ್ನಡ ಜಾಗೃತಿ ವೇದಿಕೆ ಪದಾಧಿಕಾರಿಗಳು ಘಟಕದ ಸ್ಥಳಕ್ಕೆ ಹೋಗಿ ಬರುತ್ತಿರುವ ನೀರನ್ನು ಕುಡಿದು ಪರಿಶೀಲಿಸಿದಾಗ ನೀರು ಅಸುದ್ದಿಯಾಗಿ ಬರುತ್ತಿರುವುದು ಕಂಡುಬಂದಿರುತ್ತದೆ.

ಈ ವಿಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಎಂಎಸ್ ರಾಘವೇಂದ್ರ ಮಾತನಾಡಿ.ಶುದ್ಧ ಕುಡಿಯುವ ನೀರಿನ ಘಟಕದ ನಿರ್ಮಾಣ ಕಾಮಗಾರಿಯು ಸುಮಾರುಎಂಟು ಲಕ್ಷ ರೂಪಾಯಿವೆಚ್ಚದಲ್ಲಿ ನಿರ್ಮಾಣ ಮಾಡಿರುವುದುತುಂಬಾ ಕಳಪೆ ಮಟ್ಟದ ಕಾಮಗಾರಿ ಆಗಿರುತ್ತದೆ. ಈ ಘಟಕಕ್ಕೆ ನೀರು ಸರಬರಾಜು ಮಾಡುವ ಪೈಪು ಮತ್ತು ಪಂಪು ನೆಲಸಮಕ್ಕಿರುವುದರಿಂದ ಪಕ್ಕದಲ್ಲಿಯೇ ಹಾದುಹೋಗುವ ಕೊಳಚೆ ನೀರು ಕಸ ಕಡ್ಡಿ, ಈ ಸಂಪುಗೆ ತುಂಬಿಕೊಂಡು. ಅಲ್ಲಿಂದಅಶುದ್ಧ ನೀರು ಹೊರ ಬರುತ್ತಿರುವುದರಿಂದ ಸಾರ್ವಜನಿಕರು ಶುದ್ಧನೀರುಕುಡಿಯಲು ಆಗುತ್ತಿಲ್ಲ. ಆದ್ದರಿಂದ ಈ ಕೂಡಲೇ ಸಂಬಂಧಪಟ್ಟ.ಪುರಸಭೆ ಮುಖ್ಯ ಅಧಿಕಾರಿಗಳು ಹಾಗೂ ಇಂಜಿನಿಯರ್ ..ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ 19ನೇ ವಾರ್ಡಿನ ಜನತೆಗೆ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಕುಡಿಯಲು ಅನುಕೂಲ ಮಾಡಿಕೊಡುವವರೇ. ಕಾದು ನೋಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಕನ್ನಡ ಜಾಗೃತಿ ವೇದಿಕೆ ಉಪಾಧ್ಯಕ್ಷ ಪ್ರಸಾದ್ ಆಟೋ ಚಾಲಕರ ಘಟಕದ ಅಧ್ಯಕ್ಷ ಹರೀಶ್ ನಗರ ಕಾರ್ಯದರ್ಶಿಯಾದ ಪ್ರದೀಪ್. ರಾಜಣ್ಣ ವಿಜಯ್ ಕುಮಾರ್ ಇನ್ನು ಮುಂತಾದವರು ಹಾಜರಿದ್ದರು

ವರದಿ. ಲಕ್ಷ್ಮಿಪತಿ ದೊಡ್ಡ ಎಲ್ಕೂರು