IMG 20250807 WA0010

ಪಾವಗಡ: ವರಮಹಾಲಕ್ಷ್ಮೀ ಹಬ್ಬದ ಆಚರಣೆ ವೇಳೆ ಹಣ, ಬೆಲೆಬಾಳುವ ಆಭರಣಗಳ ಬಗ್ಗೆ ಎಚ್ಚರ….!

DISTRICT NEWS ತುಮಕೂರು

ಪಾವಗಡ: ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸುವಾಗ ಹಣ, ಬೆಲೆಬಾಳುವ ಆಭರಣಗಳ ಬಗ್ಗೆ ಎಚ್ಚರದಿಂದ ಇರಬೇಕೆಂದು ಪಾವಗಡ ಪಟ್ಟಣದ ಪೊಲೀಸ್ ಠಾಣೆಯ ಸಿ.ಪಿ.ಐ ಸುರೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದೇವರ ಮೂರ್ತಿಗೆ ಬೆಲೆ ಬಾಳುವ ಆಭರಣಗಳನ್ನು ತೊಡಿಸುವುದು ಮತ್ತು ದೇವರ ಮುಂದೆ ಹಣದ ಕಂತೆಗಳನ್ನು ಇಟ್ಟು ತೋರಿಕೆ ರೀತಿಯಲ್ಲಿ ಪೂಜೆ ಮಾಡುವುದರಿಂದ ನಿಮ್ಮ ಮನೆಗೆ ಹಬ್ಬಕ್ಕೆ ಬರುವ ಜನರಿಗೆ ನಿಮ್ಮ ಮನೆಯಲ್ಲಿ ಹೆಚ್ಚಿನ ಆಭರಣ, ನಗದು ಇರುವುದು ತಿಳಿಯುವುದರಿಂದ ಅವುಗಳ ಸುರಕ್ಷತೆಯ ಬಗ್ಗೆ ಎಚ್ಚರ ವಹಿಸ ಬೇಕೆಂದು ತಿಳಿಸಿದ್ದಾರೆ.

ದೇವರಿಗೆ ಆಭರಣಗಳನ್ನು ತೊಡಿಸಿರುವ ಮತ್ತು ದೇವರ ಮುಂದೆ ಹಣದ ಕಂತೆಗಳನ್ನು ಇಟ್ಟು ಹಬ್ಬ ಆಚರಣೆ ಮಾಡಿರುವ ಫೋಟೋ ಮತ್ತು ರೀಲ್ಸ್ ಗಳನ್ನು ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದರಿಂದ ಮನೆ ಕಳ್ಳತನಕ್ಕೆ ದಾರಿ ಮಾಡಿಕೊಡಬಹುದೆಂದು ಸಾರ್ವಜನಿಕರು ಎಚ್ಚರವಹಿಸುವಂತೆ ತಿಳಿಸಿದ್ದು.
ನಿಮ್ಮ ಹಣ ಮತ್ತು ಆಭರಣಗಳು ಕಳ್ಳತನವಾಗದಂತೆ ರಕ್ಷಿಸಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದ್ದು, ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಿ. ಎಂದು ಸಲಹೆ ನೀಡಿದ್ದಾರೆ.

ವರದಿ : ಶ್ರೀನಿವಾಸಲು ಎ