IMG 20241022 WA0021

ಪಾವಗಡ: ಅರಸೀಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರ ಅವಿರೋಧ ಆಯ್ಕೆ.

DISTRICT NEWS ತುಮಕೂರು

ಗ್ರಾಮ ಪಂಚಾಯತಿ ಅಧ್ಯಕ್ಷರ ಅವಿರೋಧ ಆಯ್ಕೆ.

ಪಾವಗಡ : ತಾಲ್ಲೂಕಿನ ಅರಸೀಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಜಂಗಮರಹಳ್ಳಿ ಗ್ರಾಮದ ಗೋಪಾಲಕೃಷ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದಿನ ಅಧ್ಯಕ್ಷರಾದ ನಾಗರಾಜು ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ
ಗೋಪಾಲಕೃಷ್ಣ ರವರು ಮಾತ್ರ ನಾಮ ಪತ್ರ ಸಲ್ಲಿಸಿದ್ದು. ಬೇರೆ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ತಹಶೀಲ್ದಾರ್ ವರದರಾಜು ರವರು ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಅವಿರೋಧ ಆಯ್ಕೆ ಪ್ರಕಟಿಸಿ ಗೋಪಾಲಕೃಷ್ಣ ಅವರಿಗೆ ಅಧಿಕಾರ ವಹಿಸಿಕೊಟ್ಟರು.

ಅರಸೀಕೆರೆ ಗ್ರಾಮ ಪಂಚಾಯಿತಿಯಲ್ಲಿ ಉಪಾಧ್ಯಕ್ಷರಾದ ಹನುಮಕ್ಕ ಸೇರಿದಂತೆ ಒಟ್ಟು 16 ಸದಸ್ಯರು ಇದ್ದು ಇದರಲ್ಲಿ 14 ಸದಸ್ಯರು ಹಾಜರಿದ್ದರು.

ಈ ಸಂದರ್ಭದಲ್ಲಿ ಪಿ.ಡಿ.ಒ ಸಂತೋಷ್ ಸಿಂಗ್ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ನಾಗರಾಜ ಉಪಾಧ್ಯಕ್ಷರಾದ ಹನುಮಕ್ಕ, ಸದಸ್ಯರಾದ ರಂಗನಾಥ ಆರ್, ಶ್ರೀಮತಿ ಭಾರತಿ ಬಾಯಿ ವಿ, ಶ್ರೀಮತಿ ರುದ್ರಮ್ಮ, ಎನ್ ನಾಗರಾಜ, ಚಿಕ್ಕಣ್ಣ, ಮಂಜುಳಾ, ಶಿಲ್ಪ ಓ, ಅನಿತಮ್ಮ, ಶಂಕರಪ್ಪ ಒ, ಸುಮಾ ಇನ್ನು ಮುಂತಾದವರು ಹಾಜರಿದ್ದರು.

ವರದಿ : ಶ್ರೀನಿವಾಸಲು. A

Leave a Reply

Your email address will not be published. Required fields are marked *