IMG 20241022 WA0023

ಪಾವಗಡ : ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಎಲ್ಲರ ಸಹಕಾರ ಅಗತ್ಯ……!

DISTRICT NEWS ತುಮಕೂರು

ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಎಲ್ಲರ ಸಹಕಾರ ಅಗತ್ಯ. ತಹಶೀಲ್ದಾರ್ ವರದರಾಜು.

ಪಾವಗಡ : ಗಡಿನಾಡ ಪ್ರದೇಶವಾಗಿರುವ ಪಾವಗಡ ತಾಲ್ಲೂಕಿನಲ್ಲಿ ಈ ಬಾರಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಎಲ್ಲರ ಸಹಕಾರ ಅತ್ಯಗತ್ಯ ಎಂದು ತಹಶೀಲ್ದಾರ್ ವರದರಾಜು ತಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಸಲ್ಲಿಸಿದ ಗಣ್ಯರನ್ನು ಗುರುತಿಸಿ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಲು ತೀರ್ಮಾನಿಸಲಾಯಿತು ಪ್ರಶಸ್ತಿಗೆ ಅರ್ಜಿ ಸಲ್ಲಿಸುವರು ದಿನಾಂಕ 25/10/2024 ರಂದು ಕಡೆಯ ದಿನವಾಗಿರುತ್ತದೆ ಎಂದು ಸಭೆಯಲ್ಲಿ ತಿಳಿಸಿದರು

ಈ ಬಾರಿ ರಾಜ್ಯೋತ್ಸವದ ಪ್ರಯುಕ್ತ ಭುವನೇಶ್ವರಿಯ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡುವುದು ಪಾವಗಡ ತಾಲೂಕಿನ ಕರ್ನಾಟಕದ ಗಡಿ ಭಾಗದಲ್ಲಿ ಕರ್ನಾಟಕ ಪ್ರಾರಂಭವಾಗುವ ಸರಹದ್ದಿನಲ್ಲಿ ರಾಜ್ಯೋತ್ಸವದ ದಿನ ಕನ್ನಡ ಬಾವುಟ ಹಾಗೂ ತಳಿರು ತೋರಣಗಳೊಂದಿಗೆ ಸಿಂಗರಿಸಲು
ತೀರ್ಮಾನಿಸಲಾಯಿತು.
ಅತಿ ಜರೂರಾಗಿ ಶ್ರೀ ಶನಿ ಮಹಾತ್ಮ ದೇವಸ್ಥಾನದ ಮುಂಭಾಗ ಕನ್ನಡ ನಾಡ ಧ್ವಜ ಧ್ವಜಾರೋಹಣ ಧ್ವಜಸ್ತಂಭ ನಿರ್ಮಿಸಲು ಪುರಸಭೆ ವತಿಯಿಂದ ಅನುಮತಿ ನೀಡಲು ತೀರ್ಮಾನಿಸಲಾಯಿತು

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಜಾನಕಿರಾಮ್. ನಿರೀಕ್ಷಕರಾದ ಸುರೇಶ್. ಗ್ರಾಮಾಂತರ ವೃತ್ತ ನಿರೀಕ್ಷಕರಾ ದ ಗಿರೀಶ್. ಪುರಸಭೆಯ ಮುಖ್ಯಾಧಿಕಾರಿ ಜಾಫರ್
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕಟ್ಟಾ ನರಸಿಂಹಮೂರ್ತಿ. ತಾಲ್ಲೂಕು ಮಟ್ಟದ ಇಲಾಖೆಗಳ ಅಧಿಕಾರಿಗಳು ಕನ್ನಡ ಪರ ಸಂಘಟನೆಗಳ ಮುಖಂಡರಾದ ಕರವೇ ಗೌರವಾಧ್ಯಕ್ಷ ಪಾಳೇಗಾರ್ ಲೋಕೇಶ್. ,ಅಧ್ಯಕ್ಷ ಲಕ್ಷ್ಮೀನಾರಾಯಣ. ಉಪಾಧ್ಯಕ್ಷ ನರಸೀ ಪಾಟೀಲ್. ಜೈ ಕರ್ನಾಟಕ ಸಂಘಟನೆಯ ಗೋವರ್ಧನ್. ಆಟೋ ಚಾಲಕರ ಸಂಘದ ಬೇಕರಿ ನಾಗರಾಜ್. ರೈತ ಸಂಘದ ನರಸಿಂಹ ರೆಡ್ಡಿ. ಮುಖಂಡರಾದ ಭಾಸ್ಕರ ನಾಯಕ. ಗುತ್ತಿಗೆದಾರರಾದ ಮಂಜುನಾಥ ಎಂ. ಹನುಮಂತರಾಯಪ್ಪ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳ ಭಾಗವಹಿಸಿದ್ದರು

ವರದಿ : ಶ್ರೀನಿವಾಸಲು. A

Leave a Reply

Your email address will not be published. Required fields are marked *