IMG 20230701 WA0007

ಪಾವಗಡ: ವಸತಿ ನಿಲಯಗಳನ್ನು ಪರಿಶೀಲಿಸಿದ ತಹಶೀಲ್ದಾರ್….!

DISTRICT NEWS ತುಮಕೂರು

ವಸತಿ ನಿಲಯಗಳಿಗೆ ತಹಶೀಲ್ದಾರ್ ಪರಿಶೀಲನೆ.

ಪಾವಗಡ : ಪಟ್ಟಣದ ವಿವಿಧ ವಸತಿ ನಿಲಯಗಳಿಗೆ ಶನಿವಾರ ತಹಶೀಲ್ದಾರ್ ಸುಜಾತ ಭೇಟಿ ನೀಡಿ ಪರಿಶೀಲಿಸಿದರು.

ಪಟ್ಟಣದ ಟೆಲಿಫೋನ್ ಎಕ್ಸ್ಚೇಂಜ್ ಪಕ್ಕದಲ್ಲಿರುವ
ಶ್ರೀ ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ತಹಶೀಲ್ದಾರ್ ಸುಜಾತ ಬೇಟಿ ನೀಡಿ ಪರಿಶೀಲಿಸಿದರು.

IMG 20230701 WA0005

ವಿದ್ಯಾರ್ಥಿ ನಿಲಯದ ಮಕ್ಕಳ ಹಾಜರಾತಿ ಪರಿಶೀಲಿಸಿ ಕೆಲ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು ಅವರ ಮಾಹಿತಿಯನ್ನು ಕೇಳಿ ತಿಳಿದರು.
ಅಡಿಗೆ ಕೋಣೆಯನ್ನು ಸರಿಯಾದ ರೀತಿಯಲ್ಲಿ ಶುಚಿತ್ವದಿಂದ ಇರಿಸುವಂತೆ, ತಿಳಿಸಿದರು.
ತೊಗರಿ ಬೆಳೆಯಲ್ಲಿ ಹುಳುಗಳು ಬಿದ್ದಿದ್ದನು ಪರಿಶೀಲಿಸಿದರು.
ತರಕಾರಿಗಳೆಲ್ಲ ಖಾಲಿಯಾಗಿದೆ ಎಂದು.
ಸರಿಯಾದ ರೀತಿಯಲ್ಲಿ ಹಾಸ್ಟೆಲ್ ನಿರ್ವಹಣೆ ಮಾಡುವಂತೆ ಹಾಗೂ ಹಾಸ್ಟೆಲ್ ಶೌಚಾಲಯ ಶುಭ್ರವಾಗಿ ಇಡುವಂತೆ ಹಾಸ್ಟೆಲ್ ವಾರ್ಡನ್ ಲಕ್ಷ್ಮವ್ವ ನಾಯ್ಕರಿಗೆ ಸೂಚನೆ ನೀಡಿದರು.

IMG 20230701 WA0004

ನಂತರ ಪಟ್ಟಣದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ .ವಸತಿ ಪರಿಶೀಲಿಸಿದರು.

ವಸತಿ ನಿಲಯದಲ್ಲಿ ಮೂಲಭೂತ ಸೌಕರ್ಯವಾದ ಶೌಚಾಲಯ ಇಲ್ಲದಿರುವುದನ್ನು ಗಮನಿಸಿ ತರಾಟೆಗೆ ತೆಗೆದುಕೊಂಡು, ತಕ್ಷಣ ಶೌಚಾಲಯ ವ್ಯವಸ್ಥೆ ಏರ್ಪಡಿಸಿಕೊಳ್ಳುವಂತೆ ಸೂಚನೆ ನೀಡಿದರು.
ತಹಶೀಲ್ದಾರ್ ವಸತಿ ನಿಲಯಕ್ಕೆ ಭೇಟಿ ನೀಡಿದರೂ ಸಹ ವಾರ್ಡನ್ ನಾರಾಯಣಸ್ವಾಮಿ ಬರದೇ ಇರುವುದರಿಂದ ಬೇಸರ ವ್ಯಕ್ತಪಡಿಸಿದರು.
ವಸತಿ ನಿಲಯದಲ್ಲಿ ಕೇವಲ ಊಟಕ್ಕೆ ಮಾತ್ರ ವ್ಯವಸ್ಥೆ ಮಾಡಿದ್ದು, ವಿದ್ಯಾರ್ಥಿಗಳು ಪ್ರತ್ಯೇಕವಾದ ರೂಮುಗಳನ್ನು ಬಾಡಿಗೆ ಪಡೆದು, ಊಟಕ್ಕೆ ಮಾತ್ರ ಹಾಸ್ಟೆಲ್ ಗೆ ಬರುತ್ತಿರುವುದು ತಿಳಿದು ಬಂದಿದೆ.

IMG 20230701 WA0006

ಇಂದಿರಾ ಕ್ಯಾಂಟೀನ್ ಗೆ ಭೇಟಿ.

ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ, ಕ್ಯಾಂಟೀನ್ ನಲ್ಲಿರುವ ಚಿಮಣಿಯನ್ನು ವಾರಕೊಮ್ಮೆಯಾದರೂ ಶುಚಿಗೊಳಿಸಬೇಕೆಂದು ಸೂಚನೆ ನೀಡಿದರು.
ಇದರ ಕ್ಯಾಂಟೀನ್ ಸುತ್ತಮುತ್ತ ಶುಚಿತ್ವವಾಗಿ ಇಟ್ಟುಕೊಳ್ಳುವಂತೆ ತಿಳಿಸಿದರು.
ಅಡಿಗೆಗೆ ಉತ್ತಮವಾದ ಬೆಳೆಯನ್ನು ಬೆಳೆಸುವಂತೆ, ಸೂಚನೆ ನೀಡಿದರು.
ಇಂದ್ರ ಕ್ಯಾಂಟೀನ್ ಕಾಂಪೌಂಡ್ ಪಕ್ಕದಲ್ಲಿರುವ ಇರುವ ಟ್ರ್ಯಾಕ್ಟರ್ ಮತ್ತು ಜೆಸಿಬಿ ಯನ್ನು ತೆರವುಗೊಳಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಸೆಕ್ರೆಟರಿ ರಾಜೇಶ್ ತಹಶೀಲ್ದಾರ್ ಅವರಿಗೆ ಸಾತ್ ನೀಡಿದರು.