IMG 20221030 WA0018

ಮಧುಗಿರಿ:ವಾಲ್ಮೀಕಿ ಮಹರ್ಷಿ ಪುತ್ತಳಿ ಅನಾವರಣ…!

DISTRICT NEWS ತುಮಕೂರು

ವಾಲ್ಮೀಕಿ ಮಹರ್ಷಿ ಪುತ್ತಳಿ ಅನಾವರಣ ಕಾರ್ಯಕ್ರಮ.

ಮಧುಗಿರಿ ತಾಲೂಕು ಐ.ಡಿ. ಹಳ್ಳಿ.ಹೋಬಳಿ ಹೊಸ ಇಟಕೋಲೊಟಿಗ್ರಾಮದಲ್ಲಿ ನಾಯಕ ಸಮಾಜದ ವತಿಯಿಂದ ಇಂದು ಗ್ರಾಮದಲ್ಲಿ ವಾಲ್ಮೀಕಿ ಮಹರ್ಷಿ ಪುತ್ತಳಿ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಗ್ರಾಮದಲ್ಲಿ ನಾಯಕ ಸಮಾಜದ ಬಂಧುಗಳೆಲ್ಲರೂ ಒಗ್ಗಟ್ಟಾಗಿ ಸೇರಿಕೊಂಡು ಬಹುದಿನಗಳ ಬೇಡಿಕೆಯಾಗಿರುವ ಶ್ರೀ ವಾಲ್ಮೀಕಿ ಪುತ್ತಳಿ ಕಾರ್ಯಕ್ರಮವನ್ನು ಎಂದು ಊರಿನ ಗ್ರಾಮಸ್ಥರು ಹಾಗೂ ವಾಲ್ಮೀಕಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪುತ್ತಳಿ ಅನಾವರಣಗೊಳಿಸಿದರು. ಮತ್ತು ಮಹಿಳೆಯರು ಆರತಿಗಳನ್ನು ಹೊತ್ತು ಮಹರ್ಷಿ ವಾಲ್ಮೀಕಿ ಪುತ್ತಳಿಗೆ ಪೂಜಾ ಕಾರ್ಯಕ್ರಮವನ್ನು ಸಹ ನೆರವೇರಿಸಿದರು.

IMG 20221030 WA0017

ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ನರಸಿಂಹಮೂರ್ತಿ ಮಾತನಾಡಿ ನಾವು ಮೊನ್ನೆ ನಡೆಯಬೇಕಾಗಿದ್ದ ವಾಲ್ಮೀಕಿ ಜಯಂತಿ ಆಚರಣೆ ಮಾಡಿರುವುದಿಲ್ಲ ಏಕೆಂದರೆ ಹೊಸದಾಗಿ ಶ್ರೀ ವಾಲ್ಮೀಕಿ ಮಹರ್ಷಿ ಪುತ್ತಳಿ ಅನಾವರಣ ಮಾಡಿ ಅಂದೆ ಸಹ ವಾಲ್ಮೀಕಿ ಜಯಂತಿಯನ್ನು ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೆವು. ಅದರಂತೆ ಇಂದು ಹೊಸ ಇಟಕ ಲೊಟಿ ಗ್ರಾಮದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಹಾಗೂ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿದವು ಈ ಕಾರ್ಯಕ್ರಮವು ನಮಗೆ ತುಂಬಾ ಸಂತೋಷವನ್ನುಂಟು ಮಾಡಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಗೌಡರು ಹಾಗೂ ಸಂಪಾದಕರಾದ ಎಚ್ಎಸ್ ಸೂರ್ಯ ನಾರಾಯಣ ರವರು. ಮತ್ತು ಗ್ರಾಮ ಪಂಚಾಯತಿ ಸದಸ್ಯರಾದ ಅಶ್ವತ್ ನಾರಾಯಣ್. ವಾಲ್ಮೀಕಿ ಸಮಾಜದ ಮುಖಂಡರುಗಳಾದ

ಶಿವಕುಮಾರ್ ನಾಗರಾಜು. ನರಸಿಂಮೂರ್ತಿ .ಜಯರಾಮಯ್ಯ. ಶ್ರೀರಾಮಯ್ಯ ಶಿವಶಂಕರ್.

ನಾಗರಾಜು .ರಾಮಪ್ಪ ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು

ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರ್.