IMG 20221118 WA0027

ಪಾವಗಡ:ಶಿಸ್ತುಬದ್ಧ ಅಧ್ಯಯನದಿಂದ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು..!

DISTRICT NEWS ತುಮಕೂರು

ಶಿಸ್ತುಬದ್ಧ ಅಧ್ಯಯನದಿಂದ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು… ಶಾಸಕ ವೆಂಕಟರಮಣಪ್ಪ  

 ಪಾವಗಡ: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ನಾಣ್ನುಡಿಯಂತೆ ವಿದ್ಯಾರ್ಥಿ ದೆಸೆಯಲ್ಲಿಯೇ ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ನಿರಂತರ ಅಧ್ಯಯನದಿಂದ ಸಮಾಜದಲ್ಲಿನ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು ಎಂದು ಶಾಸಕರ ವೆಂಕಟರಮಣಪ್ಪ ತಿಳಿಸಿದರು.

   ಪಟ್ಟಣದ ಸರ್ಕಾರಿ  ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶುಕ್ರವಾರ  ಹಮ್ಮಿಕೊಳ್ಳಲಾದ  ಶಾಲಾ ಕಾಲೇಜುಗಳಲ್ಲೊಂದು ಜಾಗೃತಿ   ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ತಾಂತ್ರಿಕ ಯುಗದಲ್ಲಿ ಓದಿನ ಜೊತೆಗೆ ಮೌಲ್ಯಗಳನ್ನು ರೂಪಿಸಿಕೊಳ್ಳುವುದು ಅತ್ಯಗತ್ಯ ಎಂದರು. ಶಿಕ್ಷಕರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಹೋಗಬಹುದೆಂದು ಸಲಹೆ ನೀಡಿದರು.

   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥನಾರಾಯಣರವರು ಮಾತನಾಡಿ  ಇಂದಿನ ತಾಂತ್ರಿಕ ಯುಗದಲ್ಲಿ ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳು ಮಕ್ಕಳ ಮನಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ.    ಮಕ್ಕಳ ಉತ್ತಮ ಭವಿಷ್ಯಕ್ಕೆ ಈ ಕಾರ್ಯಕ್ರಮ ಪ್ರೇರಣೆಯಾಗಲಿದೆ ಎಂದರು.

    ನವೀನ್ ಜಾಗೃತಿ ಮತ್ತು ಕ್ರೀಡೆ ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷ ನವೀನ್ ಕಿಲಾರ್ಲಹಳ್ಳಿ ಮಾತನಾಡಿ ಕಳೆದ ಹದಿನಾಲ್ಕು ವರ್ಷಗಳಿಂದ ಜನರಲ್ಲಿ ಮೌಡ್ಯಚಾರಣೆ ಕುರಿತಾಗಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಾ ಬರುತ್ತಿದ್ದೇನೆ                   ಇಂದಿನ ಮಕ್ಕಳಲ್ಲಿ ನೈತಿಕ ಮೌಲ್ಯ, ಸಾಮಾಜಿಕ ಜಾಗೃತಿಯ ಕೊರತೆಯಿಂದ ಉಜ್ವಲವಾಗಿಸಿಕೊಳ್ಳುವ ಬದುಕನ್ನ ಚಿಕ್ಕ ವಯಸ್ಸಿಗೆ ನಾಶ ಮಾಡಿಕೊಳ್ಳುತ್ತಿದ್ದಾರೆ. ಇದನ್ನ ಗಮನದಲ್ಲಿಟ್ಟುಕೊಂಡು ಸಾಧ್ಯವಾದಷ್ಟು ಪ್ರಯತ್ನಿಸಿ ಎಲ್ಲಾ ಶಾಲಾ ಕಾಲೇಜು ಹಂತದಲ್ಲಿ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಿದ್ದೇನೆ ಎಂದು ತಿಳಿಸಿದರು.

   ಉಪ ಪ್ರಾಂಶುಪಾಲರು ಧನಂಜಯ ಅವರು ಮಾತನಾಡಿ ಮಕ್ಕಳ ಉತ್ತಮ ಭವಿಷ್ಯಕ್ಕೆ ಇಂತಹ ಕಾರ್ಯಕ್ರಮ ಅತ್ಯಾವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.

  ಕಾರ್ಯಕ್ರಮದಲ್ಲಿ  ಪುರಸಭೆಯ ಅಧ್ಯಕ್ಷ ವೇಲುರಾಜು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಂಕರಪ್ಪ,            ಶಿಕ್ಷಣ ಸಂಯೋಜಕರು ಶಿವಮೂರ್ತಿನಾಯಕ್,ಚಂದ್ರಶೇಖರ್, ಶಿಕ್ಷಕರು ವಿಜಯ್ ಕುಮಾರ್,ನಾಗರಾಜು,ಸಿಬ್ಬಂಧಿ ವರ್ಗದವರು ಹಾಜರಿದ್ದರು..

ವರದಿ: ಶ್ರೀನಿವಾಸಲು ಎ