ಗಡಿನಾಡಿನಲ್ಲಿ ಕನ್ನಡಭವನ ನಿರ್ಮಾಣಕ್ಕೆ ಒತ್ತು
ವೈ.ಎನ್.ಹೊಸಕೋಟೆ : ಗಡಿನಾಡಿನಲ್ಲಿ ಕನ್ನಡಭವನ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಸಾಹಿತಿ ಬಿ.ಸಿ.ಶೈಲಾ ನಾಗರಾಜು ತಿಳಿಸಿದರು.
ಗ್ರಾಮದಲ್ಲಿ ಮಂಗಳವಾರದಂದು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮತಯಾಚನೆ ಮಾಡಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ತಿನಲ್ಲಿ ಗಮನಾರ್ಹ ಬದಲಾವಣೆಗಳಾಗಬೇಕಾಗಿದೆ. ಲೇಖಕಿಯಾಗಿ ಸಾಹಿತ್ಯಪರಿಷತ್ತಿನ ಒಳಹೊರಗಿನ ಪ್ರಸ್ತುತ ಸ್ಥಿತಿಯನ್ನು ಬಲ್ಲೆ. ಗಡಿನಾಡಿನಲ್ಲಿ ಸಾಹಿತ್ಯ ಬಲವರ್ಧನೆಗೆ ಮತ್ತು ಗಡಿನಾಡಿನಲ್ಲಿ ಕನ್ನಾಡಾಭಿವೃದ್ದಿಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಕನ್ನಡ ಶಾಲೆಗಳ ಉಳಿವಿಗಾಗಿ ಶಾಲೆಗಳ ದತ್ತು ಸ್ವೀಕಾರ , ಹಿರಿಯ ಸಾಹಿತಿಗಳ ಸಾಹಿತ್ಯ ಮತ್ತು ಸಾಧನೆಯನ್ನು ಜನರಿಗೆ ತಲುಪಿಸುವುದು, ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹ ಗ್ರಾಮಾಂತರ ಮಟ್ಟದಲ್ಲಿ ಸಾಹಿತ್ಯ ಮತ್ತು ಮಕ್ಕಳ ಹಬ್ಬ ಆಯೋಜನೆ ಇನ್ನಿತರೆ ಯೋಜನೆಗಳನ್ನು ರೂಪಿಸಲಿದ್ದೇವೆ. ಸಹೃದಯ ಮತದಾರರು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಸಾಹಿತಿ ಬ.ಹ.ರಮಾಕುಮಾರಿ, ಕನ್ನಮೇಡಿ ಲೋಕೇಶ್, ನರಸಪ್ಪ ಇತರರು ಇದ್ದರು.
ವರದಿ: ಸತೀಶ್