ಜನಪರ
ಯೋಜನೆಗಳ ಜಾರಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸ
ಮಧುಗಿರಿ: ರಾಜ್ಯದಲ್ಲಿ ಜನಪರ
ಯೋಜನೆಗಳ ಜಾರಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಕೆಪಿಸಿಸಿ ಉಪಾಧ್ಯಕ್ಷರಾದ ಕೆ.ಎನ್ ರಾಜಣ್ಣ ಕರೆ ನೀಡಿದರು.
ಅವರು ತಾಲೂಕಿನ ಐಡಿಹಳ್ಳಿ ಹೋಬಳಿ ದೊಡ್ಡ ಯ ಲ್ಕೂರು ಗ್ರಾಮ ಪಂಚಾಯಿತಿ ಯರಮಲ್ಲನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಮೂರುವರೆ ವರ್ಷ ಅಧಿಕಾರ ನಡೆಸಿದ ಬಿಜೆಪಿ ಸರಕಾರವು ಜನಪರವಾದ ಕೊಡುಗೆಗಳನ್ನು ನೀಡಿಲ್ಲಾ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರವರಿಗೆ ಇಲ್ಲಾ ಸಲ್ಲಾದ ತೊಂದರೆಗಳನ್ನು ನೀಡುತ್ತಿರುವುದೇ ಇವರ ಸಾಧನೆಯಾಗಿದೆ.
ಪ್ರಧಾನಿ ಮೋದಿಯವರು ಈ ಹಿಂದೆ ಹೇಳಿದ ಅಚ್ಚೇ ದಿನ್ ಇನ್ನೂ ಬಂದಿಲ್ಲ ದೇಶದ ರೈತರ ಜೀವನ ಪರಿಸ್ಥಿತಿಯು ಆರ್ಥಿಕವಾಗಿ ದುಸ್ಥಿತಿಗೆ ತಲುಪುತ್ತಿದೆ. ರಸಗೊಬ್ಬರ , ಗ್ಯಾಸ್, ಡಿಸೇಲ್, ಪೆಟ್ರೋಲ್ ಬೆಲೆ ಕಾಂಗ್ರೆಸ್ ಪಕ್ಷದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ರವರು ಅಧಿಕಾರದಲ್ಲಿದ್ದಾಗ ಕಡಿಮೆ ಬೆಲೆಯಲ್ಲಿ ದೊರೆಯುತ್ತಿತ್ತು ಅದರ ಈಗ ಅಗತ್ಯ ವಸ್ತುಗಳ ದರ ಏರಿಕೆಯಾಗುತ್ತಲೆ ಹೋಗುತ್ತಿವೆ.
ಪಕ್ಷದ ಮುಖಂಡರಾದ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಪ್ರಣಾಳಿಕೆಯ ಸಮಿತಿಯ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ರವರುಗಳ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಜನಪರವಾದ ಯೋಜನೆಗಳ ಕುರಿತಾದ ಭರವಸೆಗಳ ಗ್ಯಾರಂಟಿ ಕಾರ್ಡ್‌ಗಳನ್ನು ಮತದಾರರಿಗೆ ತಲುಪಿಸಿ ಸಹಿ ಪಡೆದುಕೊಳ್ಳಲಾಗುವುದು.
ಎಲ್ಲಾರ ಏಳಿಗೆಯನ್ನು ಸಹಿಸುವ ಪಕ್ಷ ಕಾಂಗ್ರೆಸ್ ಪಕ್ಷವಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲಾರೂ ಒಗ್ಗಟ್ಟಿನಿಂದ ಸೇರಿ ರಾಜ್ಯದಲ್ಲಿ ಮತ್ತೊಮ್ಮೆ ಜನಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು.
ನಾನು ಕ್ಷೇತ್ರದ ಶಾಸಕನಾಗಿದ್ದ ಅವಧಿಯಲ್ಲಿ ಬಡವರ ಪರ ಹಾಗೂ ಹಳ್ಳಿಗಳ ಅಭಿವೃದ್ಧಿಯ ವಿಚಾರದಲ್ಲಿ ಎಂದಿಗೂ ತಾರತಮ್ಯ ಮಾಡಿಲ್ಲ ಐಡಿಹಳ್ಳಿ ಹೋಬಳಿಯ ಬ್ಯಾಡರಹಳ್ಳಿ-ಐಡಿಹಳ್ಳಿ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಈಗ ಆ ರಸ್ತೆಯಲ್ಲಿ ಉಂಟಾಗಿರುವ ಗುಂಡಿಗಳನ್ನು ಮುಚ್ಚುವಂತಹ ಕಾರ್ಯವಾಗಿಲ್ಲ ಇಲ್ಲಿನ ಮತದಾರರು ಹಿಂದಿನ ಹಾಗೂ ಇಂದಿನ ಶಾಸಕರ ಕಾರ್ಯ ವೈಖರಿಗಳನ್ನು ತುಲನೆ ಮಾಡಿ ಮತ ಚಲಾಯಿಸ ಬೇಕಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ , ನಿರ್ದೇಶಕ ಬಿ.ನಾಗೇಶ್ ಬಾಬು , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಗೋಪಾಲಯ್ಯ.ತಾಪಂ ಮಾಜಿ ಅಧ್ಯಕ್ಷೆ ಇಂದಿರಾ ದೇನಾ ನಾಯ್ಕ , ಎಪಿಎಂಸಿ ಮಾಜಿ ಅಧ್ಯಕ್ಷ ಪಿ.ಟಿ.ಗೋವಿಂದಯ್ಯ ಗ್ರಾಪಂ ಮುಖಂಡರಾದ ಎನ್ ರಾಜಮೋಹನ್.ಅಧ್ಯಕ್ಷರಾದ ನರಸಿಂಹರೆಡ್ಡಿ, ಪ್ರಜ್ವಲ್ ಶಂಕರ್, ವಕೀಲರಾದ ತಿಮ್ಮರಾಜು. ಮುಖಂಡರಾದ ದೊಡ್ಡ ನರಸಪ್ಪ ರವಿಕುಮಾರ್ ಆರ್ ಗ್ರಾಮ ಪಂಚಾಯತಿ ಸದಸ್ಯರು .ಹನುಮಂತರೆಡ್ಡಿ ಜಾನಕಿ ರಾಮಯ್ಯ , ಚಂದ್ರಶೇಖರ್ ನಾಗರಾಜು , ಸಾದರಹಳ್ಳಿ ಶಿವಣ್ಣ , ಯರ್ರಮಲ್ಲನಹಳ್ಳಿಯ ತಿಮ್ಮಾರೆಡ್ಡಿ , ರಾಮಲಿಂಗರೆಡ್ಡಿ , ರಾಜ್ ಗೋಪಾಲ್ , ಬಸ್ತರೆಡ್ಡಿ , ರವಿನಾಯಕ್ ಸುರೇಶ್ , ಕೆ.ಪ್ರಕಾಶ್ , ಜಿ.ಟಿ.ವೆಂಕಟರವಣಪ್ಪ, ಲಕ್ಷ್ಮೀಪತಿ, ಪುಲಮಾಚಿಯ ಚಿತ್ತಪ್ಪ . ನರಸಣ್ಣ.ಸೂರಿಬಾಬು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮತ್ತಿತರರು ಇದ್ದರು.
ವರದಿ .ಲಕ್ಷ್ಮಿಪತಿ ದೊಡ್ಡ ಯ ಲ್ಕೂರು.