ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ತಂದಂತಹ ಏಕೈಕ ಪಕ್ಷ ಜೆಡಿಎಸ್ ……..
ಪಾವಗಡ: ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ತಂದದ್ದು ನಾವು. ಆದರೆ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಅದರ ಲಾಭ ಬೆಳೆ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ, ನಗರ ಸಭೆ, ಜಿಲ್ಲಾ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ33 ರಷ್ಟು ಮೀಸಲಾತಿ ಕಲ್ಪಿಸಿದ ನಂತರ ದಲಿತ ಮಹಿಳೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಲು ಸಾಧ್ಯವಾಯಿತು. ಹಿಂದುಳಿದವರು ಆಡಳಿತದ ಚುಕ್ಕಾಣಿ ಹಿಡಿದರು. ಮೀಸಲಾತಿ ನೀಡಿದ್ದು ನಾವು, ಆದರೆ ಅದರ ಲಾಭವನ್ನು ಇತರೆ ಪಕ್ಷಗಳು ಪಡೆಯುತ್ತಿವೆ ಎಂದರು.
ಕುಮಾರಸ್ವಾಮಿ ಅವರು 18 ತಿಂಗಳು ಮುಖ್ಯ ಮಂತ್ರಿ ಆಗಿದ್ದಾಗಲೂ ಹಿಂದುಳಿದ ಜನಾಂಗಗಳಿಗೆ ಹೆಚ್ಚಿನ ಮೀಸಲಾತಿ ಕಲ್ಪಿಸಲಾಯಿತು. ಆದರೂ ಪಕ್ಷಕ್ಕೆ ಏಕೆ ಈ ಶಿಕ್ಷೆ. ದೇವೇಗೌಡರನ್ನು ಸೋಲಿಸಿದ್ದು ನಾನೇ ಎಂದು ರಾಜಣ್ಣ ಎಲ್ಲ ಕಡೆ ಹೇಳಿಕೊಳ್ಳುತ್ತಿದ್ದಾರೆ. ಅವರಿಗೆ ಪಕ್ಷ ಎಲ್ಲ ರೀತಿಯ ಅವಕಾಶ ನೀಡಿತ್ತು. ಯಾವ ಮುಖಂಡರನ್ನು ಬೆಳೆಸಿದ್ದೇವೊ ಅವರೇ ನಮ್ಮನ್ನು ಸಹಿಸುತ್ತಿಲ್ಲ. 2024 ರಲ್ಲಿ ಜಿಲ್ಲೆಯಲ್ಲಿ ಮತ್ತೆ ಚುನಾವಣೆಗೆ ನಿಲ್ಲುತ್ತೇನೆ ಎಂದರು.
ಈಗಿರುವುದು ದರಿದ್ರ ಸರ್ಕಾರ ಎನ್ನುತ್ತಾರೆ. ದರಿದ್ರ ಸರ್ಕಾರ ತಂದವರು ಯಾರು? ಎಂದು ಪ್ರಶ್ನಿಸಿದರು. ಇಡೀ ಜಿಲ್ಲೆಯಲ್ಲಿ ತಾಲ್ಲೂಕಿನಲ್ಲಿ ಹೆಚ್ಚಿನ ಮತ ಬರಬೇಕು. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಪಕ್ಷದ ಋಣ ತೀರಿಸಿಕೊಳ್ಳಬೇಕು ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಅಂಜಿನಪ್ಪ, ಐ ಎ ಎಸ್ ಅಧಿಕಾರಿಯಾಗಿ ಬಹುದಿತ್ತು ಅನಿಲ್ ಕುಮಾರ್ ಜನತೆಯ ಸೇವೆ ಮಾಡುವ ಸಲುವಾಗಿ ಸರ್ಕಾರಿ ಕೆಲಸಕ್ಕೆ ರಾಜಿನಾಮೆ ನೀಡಿದ್ದಾರೆ. ಮೀಸಲಾತಿ ಕಲ್ಪಿಸಿದ ಪಕ್ಷಕ್ಕೆ ಪಕ್ಷಾತೀತವಾಗಿ ಯೋಚಿಸಿ ಬೆಂಬಲ ನೀಡಿ ಎಂದರು.
ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, 2023 ರ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಸರ್ಕಾರ ಅಧಿಕಾರಕ್ಕೆ ಬಂದರೆ, 6000 ಗ್ರಾಮ ಪಂಚಾಯಿತಿ ಗಳಲ್ಲಿಯೂ ಒಂದೊಂದು ಪಬ್ಲಿಕ್ ಶಾಲೆ, ಆಸ್ಪತ್ರೆ ಇತ್ಯಾದಿ ಸೌಕರ್ಯ ಕಲ್ಪಿಸಿ. ಅನುದಾನ ಹೆಚ್ಚಿಸುವ ಯೋಜನೆ ಇದೆ ಎಂದರು.
ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ, ಪಕ್ಷದ ಅಭ್ಯರ್ಥಿಗೆ ಉತ್ತಮ ಬೆಂಬಲ ಸಿಗುತ್ತಿದೆ ಎಂದರು.
ವಿಧಾನ ಪರಿಷತ್ ಅಭ್ಯರ್ಥಿ ಆರ್.ಅನಿಲ್ ಕುಮಾರ್, ಮುಖಂಡ ತಿಮ್ಮಾರೆಡ್ಡಿ ಮಾತನಾಡಿದರು.
ಅಲ್ಪ ಸಂಖ್ಯಾತ ಘಟಕದ ವತಿಯಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಭಗವದ್ಗೀತೆ ಪುಸ್ತಕ ನೀಡಲಾಯಿತು.
ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ, ರಾಜ್ಯ ಘಟಕದ ಉಪಾಧ್ಯಕ್ಷ ಗಂಗಣ್ಣ, ಲೋಕೇಶ್, ರೈತ ಮೋರ್ಚ ಅಧ್ಯಕ್ಷ ರಂಗಣ್ಣ, ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ, ಮನು ಮಹೇಶ್, ಮಂಜುನಾಥ್ ಚೌಧರಿ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಯೂನುಸ್, ಈರಣ್ಣ, ಸಾರವಾಟಪುರ ಬಾಬು, ಗೋಪಾಲ್, ಮಣಿ, ವೆಂಕಟೇಶ್, ನಾಗೇಂದ್ರ, ವಸಂತ್, ರಾಮಾಂಜಿ, ಹನುಮಂತ್, ಶಿವು, ಜಯಂತ್ ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸಲು ಎ